ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಏರ್‌ಪೋರ್ಟ್‌ ರಸ್ತೆ ಇನ್ಮುಂದೆ ಪ್ಲಾಸ್ಟಿಕ್ ರಸ್ತೆ, ಹೊಸತೇನಿದೆ?

|
Google Oneindia Kannada News

ಬೆಂಗಳೂರು, ಜುಲೈ 23: ಏರ್‌ಪೋರ್ಟ್‌ ರಸ್ತೆಯನ್ನು ಪ್ಲಾಸ್ಟಿಕ್ ಬಳಕೆ ಮಾಡಿ ನಿರ್ಮಿಸಲಾಗುತ್ತಿದೆ.

ವ್ಯರ್ಥವಾಗಿ, ಕರಗದೇ ಭೂಮಿಗೆ ಮಾರಕವಾಗಿರುವ ಪ್ಲಾಸ್ಟಿಕ್‌ಗಳನ್ನು ಬಳಕೆ ಮಾಡಿ ಏರ್‌ಪೋರ್ಟ್ ರಸ್ತೆ ನಿರ್ಮಿಸಲುಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆಡಳಿತ ಮಂಡಳಿ ಮುಂದಾಗಿದೆ.

ಈಗಾಗಲೇ ಪ್ಲಾಸ್ಟಿಕ್ ಬಳಕೆಯ ವಿರುದ್ಧ ಕಾರ್ಯಾಚರಣೆಗಳನ್ನು ತೀವ್ರಗೊಳಿಸಿರುವ ಬಿಬಿಎಂಪಿ, ವ್ಯರ್ಥ ಪ್ಲಾಸ್ಟಿಕ್‌ನ್ನು ರಸ್ತೆ ನಿರ್ಮಿಸಲು ಕೆಐಎಗೆ ಕೊಡಬಹುದು ಎನ್ನುವ ನಿರ್ಧಾರವನ್ನು ಮತ್ತೊಮ್ಮೆ ಪರಿಶೀಲಿಸುತ್ತಿದೆ.

ಕೆಂಪೇಗೌಡ ಏರ್‌ಪೋರ್ಟ್‌ನ ವಿರಾಮ ಕೊಠಡಿ, ಹೋಟೆಲ್ ಬಂದ್ ಕೆಂಪೇಗೌಡ ಏರ್‌ಪೋರ್ಟ್‌ನ ವಿರಾಮ ಕೊಠಡಿ, ಹೋಟೆಲ್ ಬಂದ್

ರಸ್ತೆಗಳ ನಿರ್ಮಾಣಕ್ಕೆ ಶೇ.8ರಷ್ಟು ಪ್ಲಾಸ್ಟಿಕ್ ಬಳಕೆ ಒಳ್ಳೆಯದು ವ್ಯರ್ಥವಾಗಿ ಕೆರೆಗಳಿಗೆ ಸೇರುವ ಬದಲು ರಸ್ತೆ ನಿರ್ಮಾಣ ಮಾಡುವುದು ಒಳಿತು ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

KIA will built plastic roads

ಕನ್ನಿಂಗ್‌ಹ್ಯಾಮ್ ರಸ್ತೆ, ಎಂಜಿ ರಸ್ತೆ, ಗುಬ್ಬಿ ತೋಂಟದಪ್ಪ ರಸ್ತೆ ಸೇರಿದಂತೆ ನಗರದ ವಿವಿಧ ಭಾಗಗಳಲ್ಲಿ ವ್ಯರ್ಥ ಪ್ಲಾಸ್ಟಿಕ್ ಅನ್ನು ಬಾಂಡಿಂಗ್ ಏಜೆಂಟ್ ಆಗಿ ಬಳಸಿ ರಸ್ತೆಗಳನ್ನು ನಿರ್ಮಾಣ ಮಾಡಲಾಗಿದೆ.

ಕೆಕೆ ಪ್ಲಾಸ್ಟಿಕ್ ವೇಸ್ಟ್ ಮ್ಯಾನೇಜ್‌ಮೆಂಟ್ ಜೊತೆ ಬಿಬಿಎಂಪಿ ಒಪ್ಪಂದ ಮಾಡಿಕೊಂಡಿತ್ತು. ಆದರೆ 2013ರಲ್ಲೇ ಒಪ್ಪಂದ ಮುಗಿದಿದೆ.

ರಸ್ತೆ ನಿರ್ಮಾಣ ಟೈಲ್ಸ್‌ಗಳು ಗಟ್ಟಿಯಾಗಿ ಹೊಂದಿಕೊಂಡಿರು ಕಲಾತ್ಮಕ ವಸ್ತುಗಳ ನಿರ್ಮಾಣಕ್ಕೆ ಪ್ಲಾಸ್ಟಿಕ್ ಬೇಡಿಕೆ ಇದೆ. ಈ ಎಲ್ಲದರ ಬಗ್ಗೆ ಬರಿಶೀಲನೆ ನಡೆದಿದೆ. ಒಟ್ಟಾರೆ ಪ್ಲಾಸ್ಟಿಕ್ ವಸ್ತುಗಳು ಆಹಾರ ಪದಾರ್ಥಗಳ ವಲಯಕ್ಕೆ ಹೋಗದಂತೆ ತಡೆಯುವ ಉದ್ದೇಶವಾಗಿದೆ.

ಪ್ಲಾಸ್ಟಿಕ್ ತ್ಯಾಜ್ಯ ವಸ್ತುಗಳನ್ನು ಬಳಸಿ ರಸ್ತೆ ನಿರ್ಮಾಣ ಮಾಡುವ ಕುರಿತು ಬಿಬಿಎಂಪಿಗೆ ಕೆಐಎ ಮಾಡಳಿತ ಮಂಡಳಿ ಮನವಿ ಮಾಡಿದೆ. ರಸ್ತೆ ನಿರ್ಮಿಸಲು ಒಟ್ಟು 50 ಟನ್ ಪ್ಲಾಸ್ಟಿಕ್ ಅನ್ನು ನೀಡುವಂತೆ ಕೆಐಎ ಕೋರಿದೆ. ಅಲ್ಲದೇ ರಸ್ತೆಗೆ ಬಳಸಲು ಪ್ಲಾಸ್ಟಿಕ್‌ಗಾಗಿ ನಗರದ ವಿವಿಧ ಭಾಗಗಳಲ್ಲಿ ಪ್ಲಾಸ್ಟಿಕ್ ಸಂಗ್ರಹ ಮಾಡಲು ಸ್ಟಾಲ್‌ಗಳನ್ನು ಅಳವಡಿಸಿಕೊಳ್ಳಲು ಬಿಬಿಎಂಪಿಗೆ ಕೆಐಎ ಅನುಮತಿ ಕೇಳಿದೆ.

ಈ ವರ್ಷದಲ್ಲಿ ಜುಲೈ ತಿಂಗಳವರೆಗೆ ಬಿಬಿಎಂಪಿಯು 3,921 ಕೆಜಿ ಪ್ಲಾಸ್ಟಿಕ್ ಅನ್ನು ಸಂಗ್ರಹಿಸಿ 16.12 ಲಕ್ಷ ರೂ ದಂಡ ವಿಧಿಸಿದೆ. ಜುಲೈ 19ರಂದು ಒಂದೇ ದಿನ ನಾಲ್ಕು ಸಾವಿರ ಕೆಜಿ ಪ್ಲಾಸ್ಟಿಕ್‌ನ್ನು ಜಪ್ತಿ ಮಾಡಲಾಗಿತ್ತು.

English summary
Kempegowda international Airport will built plastic roads,New roads to the airport will be laid with plastic-asphalt mix.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X