ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೇವನಹಳ್ಳಿ ಟೋಲ್‌ ದರ ಹೆಚ್ಚಳ, ಯಾವ ವಾಹನಗಳಿಗೆ ಎಷ್ಟೆಷ್ಟು?

|
Google Oneindia Kannada News

ಬೆಂಗಳೂರು, ಏ.1: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವವರು ಈಗಾಗಲೇ ಏರ್‌ಪೋರ್ಟ್‌ ಟ್ಯಾಕ್ಸಿ, ಓಲಾ, ಊಬರ್, ಬಿಎಂಟಿಸಿ ಬಸ್‌ ಹೀಗೆ ಸಾಕಷ್ಟು ಹಣವನ್ನು ವ್ಯಯಿಸಿ ತೆರಳುತ್ತಿದ್ದಾರೆ.

ಕೆಂಪೇಗೌಡ ಏರ್‌ಪೋರ್ಟ್‌ಗೆ ತೆರಳುವ ಪ್ರಯಾಣಿಕರಿಗೆ ಟೋಲ್ ಸಂಸ್ಥೆ ಬರೆ ಎಳೆಯಲು ಹೊರಟಿದೆ. ಬಳ್ಳಾರಿ ರಸ್ತೆಯ ಕೆಂಪೇಗೌಡ ಏರ್‌ಪೋರ್ಟ್ ರಸ್ತೆಯ ಟೋಲ್ ಶುಲ್ಕ ಹೆಚ್ಚಳ ಮಾಡಲಾಗಿದೆ.

ಒಂದು ಬದಲಿ ಮಾರ್ಗ ಎರಡು ಲಾಭ: ಟ್ರಾಫಿಕ್ , ಟೋಲ್ ಇಲ್ ಒಂದು ಬದಲಿ ಮಾರ್ಗ ಎರಡು ಲಾಭ: ಟ್ರಾಫಿಕ್ , ಟೋಲ್ ಇಲ್

ಹೊಸ ದರ ಇಂದಿನಿಂದಲೇ ಜಾರಿಗೆ ಬರಲಿದೆ. ಕಾರು, ಜೀಪು, ವ್ಯಾನ್ ಗಳಿಗೆ 85 ರೂ ಇದ್ದ ಶುಲ್ಕವನ್ನು 90ರೂ ಗೆ ಹೆಚ್ಚಿಸಲಾಗಿದೆ.ವಾಪಸ್ ಬರುವಾಗ 130 ರೂ ಇದ್ದ ಶುಲ್ಕ 135 ರೂಗಳಿಗೆ ಹೆಚ್ಚಿಸಲಾಗಿದೆ.

KIA toll price increased

ತಿಂಗಳ ಪಾಸ್ ಶುಲ್ಕ 2895 ರೂ ಇದ್ದಿದ್ದನ್ನು 3,020 ರೂಗೆ ಏರಿಸಲಾಗಿದೆ. ಲಘು ವಾಣಿಜ್ ವಾಹನಗಳಿಗೆ 135 ರೂ ಇದ್ದಿದ್ದನ್ನು 140ರೂಗೆ ಹೆಚ್ಚಿಸಲಾಗಿದೆ. ವಾಪಸ್ ಬರುವಾಗ 200 ರೂ ಇದ್ದಿದ್ದನ್ನು 210 ರೂಗೆ ಹೆಚ್ಚಳ ಮಾಡಲಾಗಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ತಿಂಗಳ ಪಾಸ್ ದರ 4,450 ರೂ ನಿಂದ 4640ರೂಗೆ ಏರಿಕೆ ಮಾಡಲಾಗಿದೆ. ಟ್ರಕ್‌ಗಳಿಗೆ 270ರಿಂದ 280 ಹಾಗೂ ವಾಪಸ್ ಮಾರ್ಗದಲ್ಲಿ 405 ರೂಪಾಯಿಯಿಂದ 420ಕ್ಕೆ ಏರಿಕೆ ಮಾಡಲಾಗಿದೆ. ಭಾರಿ ಗಾತ್ರದ ವಾಹನಗಳಿಗೆ 405ರೂ ನಿಂದ 425 ರೂ, ವಾಪಸ್ ಮಾರ್ಗಕ್ಕೆ 610 ರೂನಿಂದ 635 ರೂ ಆಗಿದೆ.

English summary
Kempegowda Airport toll price has been increased. Almost five Rupees has been increased.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X