ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಂಪೇಗೌಡ ಏರ್‌ಪೋರ್ಟ್‌ನಿಂದ 6 ನಗರಗಳಿಗೆ ನೇರ ವಿಮಾನ ಸೇವೆ

|
Google Oneindia Kannada News

ಬೆಂಗಳೂರು, ನವಂಬರ್ 13: ಕೆಂಪೇಗೌಡ ಅಂತಾರಷ್ಟ್ರೀಯ ವಿಮಾನ ನಿಲ್ದಾಣದಿಂದ ಒಟ್ಟು 6 ನಗರಗಳಿಗೆ ಹೊಸ ವಿಮಾನ ಸೇವೆಯನ್ನು ಕಲ್ಪಿಸಲಾಗುತ್ತಿದೆ.

BIAL ಬಿಡುಗಡೆಗೊಳಿಸಿದ ಪ್ರಕಟಣೆಯಂತೆ ಬೆಂಗಳೂರಿನಿಂದ ಜೈಸಲ್ಮೇರ್, ಜೋಧ್ ಪುರ, ಜರ್ಸುಗುಡ, ಬೀದರ್ ಮತ್ತು ಟಿಟಿಕುರಿನ್ ನಗರಗಳಿಗೆ ನೇರ ವಿಮಾನ ಸೇವೆ ಲಭ್ಯವಾಗಲಿದೆ. ಇನ್ನು ಇಥಿಯೋಪಿಯಾದ ಆಡಿಸ್ ಅಬಾಬಾ ಗೆ ಸಹ ಕೆಐಎನಿಂದ ನೇರ ಸಂಪರ್ಕ ಸಿಗಲಿದೆ.

ಚಳಿಗಾಲ ಆರಂಭವಾಗಿದ್ದು ಪ್ರವಾಸ ಪ್ರಿಯರಿಗಾಗಿ ಸಿಹಿಸುದ್ದಿ ನೀಡಲಾಗಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎ) ನಿಂದ ದೇಶದ ಐದು ಹೊಸ ನಗರಗಳಿಗೆ ಹಾಗೂ ಒಂದು ಅಂತರಾಷ್ಟ್ರೀಯ ನಗರಕ್ಕೆ ನೇರ ವಿಮಾನಯಾನ ಸೇವೆ ಶೀಘ್ರದಲ್ಲಿ ಪ್ರಾರಂಭಗೊಳ್ಳಲಿದೆ.

KIA To Get Flights To Six More Cities

ಇದರೊಡನೆ ಜೆಟ್ ಏರ್ವೇಸ್ ಸೇವೆ ಸ್ಥಗಿತಗೊಂಡ ನಂತರ ಕೊನೆಗೊಂಡ ಆಮ್ಸ್ಟರ್ ಡ್ಯಾಮ್ ಕಡೆಗಿನ ವೈಮಾನಿಕ ಸೇವೆ ಸಹ ಶೀಘ್ರವೇ ಪುನಾರಂಭವಾಗಲಿದೆ. ಕೆಎಲ್‌ಎಂ ರಾಯಲ್ ಡಚ್ ಮತ್ತು ಇಥಿಯೋಪಿಯನ್ ಏರ್‌ಲೈನ್ಸ್ ಸಂಸ್ಥೆಗಳು ಕೆಐಎನಿಂದ ಹಾರಾಟ ನಡೆಸಲು ಸಿದ್ದವಾಗಿದೆ.

ಚಳಿಗಾಲದ ಆರಂಭದಲ್ಲಿ, ವಿಮಾನ ನಿಲ್ದಾಣವು ದಿನಕ್ಕೆ ಸುಮಾರು 700 (611 ದೇಶೀಯ ಮತ್ತು 89 ಅಂತಾರಾಷ್ಟ್ರೀಯ) ವಿಮಾನ ಸಂಚಾರವನ್ನು (ಆಗಮನ-ನಿರ್ಗಮನ ಸೇರಿ) ಕಾಣುವ ನಿರೀಕ್ಷೆ ಇದೆ. ಇವು ಮುಂದಿನ ದಿನಗಳಲ್ಲಿ 727 (635 ದೇಶೀಯ ಮತ್ತು 92 ಅಂತಾರಾಷ್ಟ್ರೀಯ) ಕ್ಕೆ ತಲುಪುವ ನಿರೀಕ್ಷೆ ಇದೆ.

ಇಥಿಯೋಪಿಯನ್ ಏರ್ಲೈನ್ಸ್ ಆಡಿಸ್ ಅಬಾಬಾಗೆ ನಾಲ್ಕು ಸಾಪ್ತಾಹಿಕ ತಡೆರಹಿತ ವಿಮಾನ ಹಾರಾಟ ನಡೆಸಲಿದೆ., ಇದನ್ನು ಆಫ್ರಿಕಾದ ಹೆಬ್ಬಾಗಿಲು ಎಂದು ಪರಿಗಣಿಸಲಾಗುತ್ತದೆ.

ಇನ್ನು ಕೆಎಲ್ಎಂ ರಾಯಲ್ ಡಚ್ ಮೂರು ಸಾಪ್ತಾಹಿಕ ವಿಮಾನಗಳು ಆಮ್ಸ್ಟರ್ ಡ್ಯಾಮ್ ಗೆ ಸಂಚಾರ ನಡೆಸಲಿದೆ. ಇದರೊಡನೆ ಬೆಂಗಳೂರಿನಿಂದ 25 ಅಂತಾರಾಷ್ಟ್ರೀಯ ವಿಮಾನಗಳನ್ನು ಒಳಗೊಂಡಂತೆ 82 ತಾಣಗಳನ್ನು ಸಂಪರ್ಕಿಸಲು ಸಾಧ್ಯವಾಗಲಿದೆ.

English summary
KIA To Get Flights To Six More Cities, Five new domestic destinations and one new international destination will be connected from Bengaluru during the ongoing five-month winter schedule of Kempegowda International Airport (KIA).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X