ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಂಪೇಗೌಡ ಏರ್‌ಪೋರ್ಟ್‌ ಮೊಗಸಾಲೆಗಳ ನವೀಕರಣ ಆರಂಭ

|
Google Oneindia Kannada News

ಬೆಂಗಳೂರು, ಜೂನ್ 14: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೊಗಸಾಲೆಗಳ ನವೀಕರಣ ಕಾರ್ಯ ಆರಂಭವಾಗಿದೆ. ಜೂನ್ 1 ರಿಂದ ಇದು ಆರಂಭಗೊಂಡಿದ್ದು 2021ರ ಮಾರ್ಚ್ ವರೆಗೂ ನಡೆಯಲಿದೆ.

ಪ್ರಯಾಣಿಕರಿಗೆ ನಿಲ್ದಾಣದಲ್ಲಿ ಅತ್ಯುತ್ತಮ ಪ್ರಯಾಣ ಅನುಭವ ಒದಗಿಸುವ ಗುರಿಯೊಂದಿಗೆ ಮೊಗಸಾಲೆ ನವೀಕರಣ ಕೆಲಸ ಕೈಗೆತ್ತಿಕೊಳ್ಳಲಾಗಿದೆ ಎಂದು ಕೆಐಎ ಮುಖ್ಯ ವಾಣಿಜ್ಯ ಅಧಿಕಾರಿ ಆರ್ ಕೆನ್ನೆತ್ ತಿಳಿಸಿದ್ದಾರೆ.

ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ದಶಪಥ ರಸ್ತೆ, ಮೆಟ್ರೋ ಮಾರ್ಗ, ವಿಶೇಷತೆಗಳು ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ದಶಪಥ ರಸ್ತೆ, ಮೆಟ್ರೋ ಮಾರ್ಗ, ವಿಶೇಷತೆಗಳು

ಕೆಐಎನಲ್ಲಿ ಹಾಲಿ ನಾಲ್ಕು ಮೊಗಸಾಲೆಗಳಿವೆ, ಈ ಪೈಕಿ ಅಂತಾರಾಷ್ಟ್ರೀಯ ಸೆಕ್ಯುರಿಟಿ ಹೋಲ್ಡ್ ಪ್ರದೇಶದಲ್ಲಿ ಎರಡು ಮತ್ತು ದೇಶೀಯ ಸೆಕ್ಯುರಿಟಿ ಹೋಲ್ಡ್ ಪ್ರದೇಶದಲ್ಲಿ ಎರಡು ಮೊಗಸಾಲೆಗಳಿವೆ, ನವೀಕರಣ ಕಾಮಗಾರಿಯು ಎರಡು ಹಂತಗಳಲ್ಲಿ ನಡೆಯಲಿದೆ.

KIA starts beautification and repair work of launge

ಒಟ್ಟು 18-20 ತಿಂಗಳ ಕಾಲ ಈ ಕಾಮಗಾರಿ ನಡೆಯಲಿದೆ. ಅಂತಾರಾಷ್ಟ್ರೀಯ ಮೊಗಸಾಲೆಗಳು ಮತ್ತು ಟ್ರಾನ್ಸಿಟ್ ಹೋಟೆಲ್‌ನ ಕೆಲ ಭಾಗ ಬಂದ್ ಆಗಲಿವೆ. ನವೀಕರಣದ ಬಳಿಕ ಹೊಸ ಮೊಗಸಾಲೆಗಳನ್ನು ಗೇಟ್ ಗ್ರೂಪ್ ಅಂಡ್ ಟ್ರಾವೆಲ್ ಮತ್ತು ಫುಡ್ ಸರ್ವೀಸ್ ಇಂಡಿಯಾ ಜಂಟಿ ಸಹಭಾಗಿತ್ವದಲ್ಲಿ ನಿರ್ವಹಿಸಲಿವೆ.

English summary
Kempegowda International Airport started beautification and repair work of launge. It will take twenty months nearly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X