ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಂಪೇಗೌಡ ಏರ್‌ಪೋರ್ಟ್‌ ನಿರ್ಮಿಸಿದ ಹೊಸ ದಾಖಲೆ ಏನು?

|
Google Oneindia Kannada News

ಬೆಂಗಳೂರು, ಜನವರಿ 9: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೊಸ ದಾಖಲೆ ನಿರ್ಮಿಸಿದೆ. ಒಂದೇ ದಿನದಲ್ಲಿ ವಿಮಾನಗಳಲ್ಲಿ 1,02,906 ಮಂದಿ ಪ್ರಯಾಣಿಸಿ ಹೊಸ ದಾಖಲೆ ಸೃಷ್ಟಿಸಿದ್ದಾರೆ.

ವಿಮಾನ ನಿಲ್ದಾಣ ಆರಂಭಗೊಂಡು 11 ವರ್ಷಗಳು ಕಳೆದಿದ್ದು ಮೊದಲ ಬಾರಿಗೆ ಒಂದು ಲಕ್ಷಕ್ಕೂ ಹೆಚ್ಚು ಜನ ಒಂದೇ ದಿನ ಪ್ರಯಾಣ ಮಾಡಿದ್ದಾರೆ.

ಕೆಂಪೇಗೌಡ ಏರ್‌ಪೋರ್ಟ್: ಬೋರ್ಡಿಂಗ್ ಪಾಸ್‌ ಮತ್ತಷ್ಟು ಸುಲಭ ಕೆಂಪೇಗೌಡ ಏರ್‌ಪೋರ್ಟ್: ಬೋರ್ಡಿಂಗ್ ಪಾಸ್‌ ಮತ್ತಷ್ಟು ಸುಲಭ

2018ರ ಜೂನ್‌ 30ರಂದು ಒಂದೇ ದಿನದಲ್ಲಿ 98,869 ಪ್ರಯಾಣಿಕರು ಹಾರಾಟ ನಡೆಸಿದ್ದು ದಾಖಲೆಯಾಗಿತ್ತು.ಬಹೊಸ ವರ್ಷದಲ್ಲಿ ದೇಶೀಯ ಹಾಗೂ ಅಂತಾರಾಷ್ಟ್ರೀಯ ಮಾರ್ಗದಲ್ಲಿ ಹೊಸ ವಿಮಾನಗಳ ಹಾರಾಟ ಪ್ರಾರಂಭಿಸಲಾಗಿದೆ. ದೇಶದ ಐಟಿ ಹಬ್ ಆಗಿರುವ ಕಾರಣ ಕೋಲ್ಕತ್ತ, ಹೈದ್ರಾಬಾದ್, ಅಮೃತ್‌ಸರ್ ಮುಂತಾದ ನಗರಗಳಿಂದ ಯುರೋಪ್ ಸೇರಿದಂತೆ ಇನ್ನಿತರೆ ರಾಷ್ಟ್ರಗಳಿಗೆ ಸಂಪರ್ಕ ಕಲ್ಪಿಸುವ ವಿಮಾನಗಳನ್ನು ಕೆಐಎ ಮಾರ್ಗವಾಗಿ ಕಳುಹಿಸಲಾಗುತ್ತದೆ.

KIA recieve record number of passegers

ಪ್ರಯಾಣಿಕರ ನಿರ್ವಹಣೆಯಲ್ಲಿ ದೇಶದ ಮೂರನೇ ಅತಿ ದೊಡ್ಡ ನಿಲ್ದಾಣವಾಗಿರುವ ಕೆಐಎ ಇದೀಗ ನವದೆಹಲಿ, ಮುಂಬೈ ನಿಲ್ದಾಣಗಳ ಸಾಲಿಗೆ ಸೇರಿದೆ. ದೆಹಲಿ ಮತ್ತು ಮುಂಐ ವಿಮಾನ ನಿಲ್ದಾಣಗಳು ಮಾತ್ರ ಪ್ರತಿನಿತ್ಯ 1 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರನ್ನು ನಿರ್ವಹಣೆ ಮಾಡುತ್ತದೆ.

ಬೆಂಗಳೂರಿನಿಂದ ಶಿರಡಿಗೆ ನಿತ್ಯ ವಿಮಾನ ಸೇವೆ ಬೆಂಗಳೂರಿನಿಂದ ಶಿರಡಿಗೆ ನಿತ್ಯ ವಿಮಾನ ಸೇವೆ

ಚೆನ್ನೈ ವಿಮಾನ ನಿಲ್ದಾಣ ಮೂಲಸೌಕರ್ಯಗಳ ಸಮಸ್ಯೆ ಎದುರಿಸುತ್ತಿದ್ದು, ನಿರ್ವಹಣೆ ಸಾಮರ್ಥ್ಯ ವನ್ನು ಮೀರಿದೆ. ಮತ್ತೊಂದೆಡೆ ಪ್ರಯಾಣಿಕರ ಅನುಕೂಲಕ್ಕಾಗಿ ಹೊಸ ತಂತ್ರಜ್ಞಾನ ಆಧಾರಿತ ಸೇವೆಗಳನ್ನು ಕೆಐಎ ಒದಗಿಸುತ್ತಿದೆ.

English summary
Kempegowda international Airport recieved 1,02,906 passengers this is the highest number in a day .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X