ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೇಶದ ಸುರಕ್ಷಿತ ವಿಮಾನ ನಿಲ್ದಾಣ; ಕೆಐಎಗೆ 3ನೇ ಸ್ಥಾನ

|
Google Oneindia Kannada News

ಬೆಂಗಳೂರು, ನವೆಂಬರ್ 30 : ಕೋವಿಡ್ ಹರಡದಂತೆ ತಡೆಯಲು ಲಾಕ್ ಡೌನ್ ಘೋಷಣೆ ಮಾಡಿದಾಗಲೂ ಸಕ್ರಿಯವಾಗಿ ಕಾರ್ಯ ನಿರ್ವಹಣೆ ಮಾಡುತ್ತಿತ್ತು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ. ಕೋವಿಡ್ ಅವಧಿಯಲ್ಲಿ ದೇಶದ ಸುರಕ್ಷಿತ ವಿಮಾನ ನಿಲ್ದಾಣಗಳ ಪೈಕಿ ಕೆಐಎಗೆ 3ನೇ ಸ್ಥಾನ ಸಿಕ್ಕಿದೆ.

ಕೊರೊನಾ ಪರಿಸ್ಥಿತಿಯಲ್ಲಿ ಆರೋಗ್ಯ ಮತ್ತು ಕೊರೊನಾ ಮಾರ್ಗಸೂಚಿಗಳ ಪಾಲನೆ ಬಗ್ಗೆ ಅಂಕಿ-ಅಂಶಗಳನ್ನು Safe Travel Barometer ಸಂಗ್ರಹ ಮಾಡುತ್ತಿದೆ. ಕೆಎಐಗೆ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಲ್ಲಿ ದೇಶದಲ್ಲಿಯೇ 3ನೇ ಸ್ಥಾನವನ್ನು ಇದು ನೀಡಿದೆ.

ಸಿಲಿಕಾನ್ ವ್ಯಾಲಿ-ಸಿಲಿಕಾನ್ ಸಿಟಿ ನಡುವೆ ನೇರ ವಿಮಾನ ಸಿಲಿಕಾನ್ ವ್ಯಾಲಿ-ಸಿಲಿಕಾನ್ ಸಿಟಿ ನಡುವೆ ನೇರ ವಿಮಾನ

ಲಾಕ್ ಡೌನ್ ಘೋಷಣೆ ಬಳಿಕ ನವದೆಹಲಿಯ ಇಂದಿರಾ ಗಾಂಧಿ ವಿಮಾನ ನಿಲ್ದಾಣ ಮತ್ತು ಮುಂಬೈನ ಶಿವಾಜಿ ಮಹಾರಾಜ್ ವಿಮಾನ ನಿಲ್ದಾಣಗಳು ಕಾರ್ಯಾಚರಣೆ ಆರಂಭಿಸಿದವು. ಮೇ 25ರಂದು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಸಂಚಾರ ಆರಂಭವಾಯಿತು.

ರಾಯಚೂರು ವಿಮಾನ ನಿಲ್ದಾಣದ ಕನಸಿಗೆ ಮರುಜೀವ ರಾಯಚೂರು ವಿಮಾನ ನಿಲ್ದಾಣದ ಕನಸಿಗೆ ಮರುಜೀವ

KIA Ranked 3rd Safest Airport In India

ಸುರಕ್ಷಿತ ಪ್ರಯಾಣದ ಪಟ್ಟಿಯಲ್ಲಿ 5 ಅಂಕಗಳಿವೆ 4.3 ಅಂಕಗಳನ್ನು ಎರಡು ವಿಮಾನ ನಿಲ್ದಾಣಗಳು ಪಡೆದಿವೆ. ಬೆಂಗಳೂರು ವಿಮಾನ ನಿಲ್ದಾಣ 4 ಅಂಕಗಳನ್ನು ಪಡೆದು ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಪಡೆದಿದೆ.

ಕೆಐಎ: ಹೆಚ್ಚುವರಿ 500 ವಾಹನ ನಿಲುಗಡೆಗೆ ಪಾರ್ಕಿಂಗ್ ಸ್ಲಾಟ್ ಕೆಐಎ: ಹೆಚ್ಚುವರಿ 500 ವಾಹನ ನಿಲುಗಡೆಗೆ ಪಾರ್ಕಿಂಗ್ ಸ್ಲಾಟ್

ಬೆಂಗಳೂರು ನಂತರ ದೇಶದ ವಿವಿಧ ನಗರಗಳ 7 ವಿಮಾನ ನಿಲ್ದಾಣಗಳು ಈ ಪಟ್ಟಿಯಲ್ಲಿ ಇವೆ. ಅವುಗಳಲ್ಲಿ ಹೈದರಾಬಾದ್, ಅಹಮದಾಬಾದ್, ಪುಣೆ ವಿಮಾನ ನಿಲ್ದಾಣಗಳು ಸೇರಿವೆ. ಕೋವಿಡ್ ಸಂದರ್ಭದಲ್ಲಿ ಪ್ರಯಾಣಿಕರ ಸುರಕ್ಷತೆಗೆ ಕೈಗೊಂಡ 20ಕ್ಕೂ ಅಧಿಕ ಅಂಶಗಳನ್ನು ಪರಿಗಣಿಸಿ ಅಂಕಗಳನ್ನು ನೀಡಲಾಗಿದೆ.

ವಿಮಾನ ಪ್ರಯಾಣಿಕರಿಗೆ ಕೋವಿಡ್ ಪರೀಕ್ಷೆ, ಥರ್ಮಲ್ ಸ್ಕ್ರೀನಿಂಗ್, ಟ್ರಾಲೆವರ್ ಫೇಸ್ ಮಾಸ್ಕ್ ವಿತರಣೆ, ಆರೋಗ್ಯದ ಸ್ವಯಂ ಘೋಷಣಾ ಪತ್ರ, ಸಿಬ್ಬಂದಿಗಳಿಗೆ ತರಬೇತಿ, ಸಿಬ್ಬಂದಿಗೆ ಪಿಪಿಇ ಕಿಟ್ ವಿತರಣೆ ಸೇರಿದಂತೆ ವಿವಿಧ ಅಂಶಗಳನ್ನು ಪರಿಗಣನೆ ಮಾಡಿ ಅಂಕ ಕೊಡಲಾಗಿದೆ.

ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಯಾಣಿಕರ ಸುರಕ್ಷತೆಗೆ ಕೈಗೊಂಡ ಕ್ರಮಗಳಲ್ಲಿ ಹಮಾದ್, ಸಿಂಗಪುರ, ಅಬುದಾಬಿ, ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳು ಪಟ್ಟಿಯಲ್ಲಿ ಸೇರಿವೆ.

English summary
Kempegowda International Airport Bengaluru rated 3rd safest airport in India by Safe Travel Barometer. Airport resumed operations from May 25 after the lockdown.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X