ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ವಿಮಾನ ನಿಲ್ದಾಣದೊಳಗೆ ಆಂಬ್ಯುಲೆನ್ಸ್ ಸೇವೆ ಆರಂಭ

|
Google Oneindia Kannada News

ಬೆಂಗಳೂರು, ಜೂನ್ 11 : ತುರ್ತು ಅಗತ್ಯಗಳಿಗೆ ಸ್ಪಂದಿಸಲು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿಯೇ ಆಂಬ್ಯುಲೆನ್ಸ್ ಸೇವೆ ಆರಂಭವಾಗಿದೆ. ದಿನದ 24 ಗಂಟೆಯೂ ಇದು ಕಾರ್ಯ ನಿರ್ವಹಣೆ ಮಾಡಲಿದ್ದು, ಪ್ರಯಾಣಿಕರ ಸುರಕ್ಷತೆ ಬಗ್ಗೆ ಗಮನವಹಿಸಲಿದೆ.

ಎರಡು ಬ್ಯಾಟರಿ ಚಾಲಿತ ಆಂಬ್ಯುಲೆನ್ಸ್ ಸೇವೆಗೆ ಸೋಮವಾರ ಚಾಲನೆ ನೀಡಲಾಗಿದೆ. ವಿಮಾನ ನಿಲ್ದಾಣದಲ್ಲಿರುವ ಆಸ್ಟರ್ ಆಸ್ಪತ್ರೆಯ ಉತ್ತಮ ತರಬೇತಿ ಪಡೆದ ಸಿಬ್ಬಂದಿಗಳು ಆಂಬ್ಯಲೆನ್ಸ್ ಜೊತೆ ಇರುತ್ತಾರೆ.

ಬೆಂಗಳೂರು ವಿಮಾನ ನಿಲ್ದಾಣದ ಮುಖ್ಯ ರಸ್ತೆ ಜೂ.10 ರಿಂದ ಬಂದ್ಬೆಂಗಳೂರು ವಿಮಾನ ನಿಲ್ದಾಣದ ಮುಖ್ಯ ರಸ್ತೆ ಜೂ.10 ರಿಂದ ಬಂದ್

ಏರ್‌ ಪೋರ್ಟ್‌ನ ಅಂತರಾಷ್ಟ್ರೀಯ, ದೇಶಿಯ ಟರ್ಮಿನಲ್‌ಗಳಲ್ಲಿ ದಿನದ 24 ಗಂಟೆಯೂ ಆಂಬ್ಯುಲೆನ್ಸ್ ಕಾರ್ಯ ನಿರ್ವಹಣೆ ಮಾಡಲಿದೆ. ಆಕ್ಸಿಜನ್ ಸಿಲಿಂಡರ್ ಸೇರಿದಂತೆ ಅಗತ್ಯ ಸೌಲಭ್ಯಗಳು ಇದ್ದು, ತುರ್ತು ಸಮಯದಲ್ಲಿ ಚಿಕಿತ್ಸೆ ನೀಡಿ, ಆಸ್ಟರ್ ಆಸ್ಪತ್ರೆಗೆ ದಾಖಲಿಸುವ ಕಾರ್ಯವನ್ನು ಮಾಡಲಿದೆ.

ಬೆಂಗಳೂರು : ಎಲೆಕ್ಟ್ರಿಕ್ ಕಾರು ಪಾರ್ಕಿಂಗ್‌ಗೆ ಶೇ 20ರಷ್ಟು ರಿಯಾಯಿತಿಬೆಂಗಳೂರು : ಎಲೆಕ್ಟ್ರಿಕ್ ಕಾರು ಪಾರ್ಕಿಂಗ್‌ಗೆ ಶೇ 20ರಷ್ಟು ರಿಯಾಯಿತಿ

KIA

ರೋಗಿಯನ್ನು ಆಂಬ್ಯಲೆನ್‌ಗೆ ಹತ್ತಿಸಿಕೊಳ್ಳುತ್ತಿದ್ದಂತೆ ಚಿಕಿತ್ಸೆ ಆರಂಭವಾಗಲಿದೆ. ತುರ್ತು ಚಿಕಿತ್ಸೆ ಅಗತ್ಯವಿರುವವರಿಗೆ ಉತ್ತಮವಾದ ಚಿಕಿತ್ಸೆ ನೀಡುವುದು ನಮ್ಮ ಗುರಿಯಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಹೇಳಿದ್ದಾರೆ.

ಬೆಂಗಳೂರಿನ ಕೆಇಎಲ್‌ಗೆ ಬೆಳಗಾವಿಯಿಂದ ವಿದ್ಯುತ್, ಘಟಕ ಆರಂಭಬೆಂಗಳೂರಿನ ಕೆಇಎಲ್‌ಗೆ ಬೆಳಗಾವಿಯಿಂದ ವಿದ್ಯುತ್, ಘಟಕ ಆರಂಭ

ವರ್ಷದಿಂದ ವರ್ಷಕ್ಕೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಭೇಟಿ ನೀಡುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. 2018-19ನೇ ಸಾಲಿನಲ್ಲಿ 33 ಮಿಲಿಯನ್ ಜನರು ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿದ್ದಾರೆ. ಪ್ರತಿದಿನ ಲಕ್ಷಾಂತರ ಜನರು ಭೇಟಿ ನೀಡುವ ಸ್ಥಳಕ್ಕೆ ಅಗತ್ಯ ಅಂಬ್ಯುಲೆನ್ಸ್ ಸೇವೆ ಒದಗಿಸಲಾಗಿದೆ.

English summary
Bengaluru Kempegowda International Airport (KIA) got an indoor ambulance service with the help of airport's medical partner Aster Hospital. Two battery-operated ambulances will work 24 hours.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X