ಕೆಂಪೇಗೌಡ ಏರ್ಪೋರ್ಟ್ಗೆ ಆರೋಗ್ಯ ಮಾನ್ಯತೆ ಪ್ರಮಾಣಪತ್ರ
ಬೆಂಗಳೂರು,ಜನವರಿ 21:ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಮಾನ ನಿಲ್ದಾಣದ ಆರೋಗ್ಯ ಮಾನ್ಯತೆ ದೊರೆತಿದೆ.
ಬಿಐಎಎಲ್ ವಿಮಾನಿಲ್ದಾಣದಲ್ಲಿ ಸಂಪರ್ಕರಹಿತ ಪ್ರಕ್ರಿಯೆ ಮತ್ತು ಸೋಂಕು ನಿವಾರಕದ ಸಿಂಪಡಣೆಯ ಕ್ರಮಗಳನ್ನು ಕೈಗೊಂಡಿದೆ. 2020ರ ಡಿಸೆಂಬರ್ನಲ್ಲಿ ವಿಮಾನನಿಲ್ದಾಣಕ್ಕೆ ಆಗಮಿಸಿದ ಮತ್ತು ಹೊರಹೋದ ಸರಕು ಪ್ರಮಾಣ 33,053 ಮೆಟ್ರಿಕ್ ಟನ್ ತಲುಪಿದೆ.
ಕೆಂಪೇಗೌಡ ಏರ್ಪೋರ್ಟ್ಗೆ ರೈಲು ಸೇವೆ ಆರಂಭ: ಟಿಕೆಟ್ ದರ ಕೇವಲ 10 ರೂ.
ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿ(ಸಿಬಿಐಸಿ), ಹಣಕಾಸು ಸಚಿವಾಲಯ ಮತ್ತು ಸರಕು ಪಾಲುದಾರರಾದ ಏರ್ ಇಂಡಿಯಾ ಎಸ್ಎಟಿಎಸ್ ಮತ್ತು ಮೆನ್ಜೀಸ್ ಏವಿಯೇಷನ್ ಬೆಂಗಳೂರು ಪ್ರೈವೇಟ್ ಲಿಮಿಟೆಡ್ನೊಂದಿಗೆ ನಿಕಟ ಸಮನ್ವಯದಿಂದ ಕೆಲಸ ಮಾಡುವ ಮೂಲಕ ಇದನ್ನು ಸಾಧಿಸಲಾಗಿದೆ ಎಂದು ಬಿಐಎಲ್ ಪ್ರಕಟಣೆಯಲ್ಲಿ ತಿಳಿಸಿದೆ.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿ.(ಬಿಐಎಎಲ್)ನಲ್ಲಿ ಬರುವ ಕೆಐಎ, ಪ್ರಯಾಣಿಕರು, ಉದ್ಯೋಗಿಗಳು ಮತ್ತು ಸಾರ್ವಜನಿಕರ ಸುರಕ್ಷತೆಯ ಬದ್ಧತೆಯನ್ನು ಗುರುತಿಸಿ ಈ ಪ್ರಮಾಣಪತ್ರ ನೀಡಲಾಗಿದೆ.
ಈ ಪ್ರಮಾಣಪತ್ರ ವಿಮಾನನಿಲ್ದಾಣದ ಸುರಕ್ಷತೆ ಕುರಿತು ಪ್ರಯಾಣಿಕರ ಆತ್ಮವಿಶ್ವಾಸವನ್ನು ಮರುಸ್ಥಾಪಿಸಲು ನೆರವಾಗಿದೆ.