ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಂಪೇಗೌಡ ಏರ್‌ಪೋರ್ಟ್‌: ವಿಮಾನ ಹಾರಾಟ ಸಮಯ ಬದಲಾವಣೆ

|
Google Oneindia Kannada News

ಬೆಂಗಳೂರು, ಜನವರಿ 15: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಫೆಬ್ರವರಿಯಲ್ಲಿ ವಿಮಾನ ಹಾರಾಟದಲ್ಲಿ ಬದಲಾವಣೆ ಉಂಟಾಗಲಿದೆ.

ಯಲಹಂಕ ವಾಯುನೆಲೆಯಲ್ಲಿ ನಡೆಯಲಿರುವ ಏರೋ ಇಂಡಿಯಾ-2019 ವೈಮಾನಿಕ ಪ್ರದರ್ಶನದ ವೇಳೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟವನ್ನು ನಿರ್ದಿಷ್ಟ ಅವಧಿಗೆ ಸ್ಥಗಿತಗೊಳಿಸಲಾಗುತ್ತಿದೆ.

ಬೆಂಗಳೂರಿನಿಂದ ಏರ್ ಶೋ ಸ್ಥಳಾಂತರ?, ಪರಮೇಶ್ವರ ಟ್ವೀಟ್ ಬೆಂಗಳೂರಿನಿಂದ ಏರ್ ಶೋ ಸ್ಥಳಾಂತರ?, ಪರಮೇಶ್ವರ ಟ್ವೀಟ್

ದೇಶ-ವಿದೇಶ ಸೇವಾ ವಿಮಾನಗಳು, ಹೆಲಿಕಾಪ್ಟರ್‌ಗಳು ಫೆ.20ರಿಂದ 24ರ ನಡುವೆ ಪ್ರದರ್ಶನ ನೀಡಲಿದೆ. ಇದಕ್ಕೂ ಮುನ್ನ ಪೂರ್ವಭಾವಿ ತಾಲೀಮು ನಡೆಸಲಿದೆ. ಈ ವೇಳೆ ಕೆಐಎಗೆ ನಿರ್ಗಮಿಸುವ ಹಾಗೂ ಕೆಐಎನಿಂದ ಆಗಮಿಸುವ ನಾಗರಿಕ ವಿಮಾನಗಳ ಹಾರಾಟಕ್ಕೆ ತೊಡಕುಂಟಾಗುವ ಸಾಧ್ಯತೆ ಇರುವ ಕಾರಣ ನಿರ್ಧಾರ ಕೈಗೊಳ್ಳಲಾಗುತ್ತಿದೆ.

KIA flights timing changed due to Aero india

ಫೆ.14ರಿಂದ 24ರ ನಡುವೆ ನಿರ್ದಿಷ್ಟ ಅವಧಿಗೆ ಕೆಐಎ ವಾಯುಪ್ರದೇಶವನ್ನು ನಾಗರಿಕ ವಿಮಾನಗಳ ಹಾರಾಟಕ್ಕೆ ಬಂದ್ ಮಾಡಲಾಗುತ್ತದೆ. ಈ ಪೈಕಿ ಫೆ.14ರಿಂದ ಫೆ.19ರ ನಡುವೆ ತಾಲೀಮು ನಡೆಸುವ ಕಾರಣ ಮಧ್ಯಾಹ್ನ 1.20ರಿಂದ 4.30ರ ನಡುವೆ ವಾಯು ಪ್ರದೇಶ ಬಂದ್ ಮಾಡಲಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ವಿಮಾನ ಹಾರಾಟ ಬಂದ್ ಅವಧಿ: ಓಎ.14ರಿಂದ ಫೆ.19ರವರೆಗೆ ಮ.1.20ರಿಂದ ಸಂಜೆ 4.30, ಫೆ.20ರಂಸು ಬೆಳಗ್ಗೆ 8.20ರಿಂದ ಮ.12 ಗಂಟೆ, ಫೆ. 21ರಿಂದ ಫೆ.24ರವರೆಗೆ ಬೆ.9.50 ರಿಂದ ಮ.12 ಗಂಟೆ, ಮ.1.50ರಿಂದ ಸಂಜೆ 5 ಗಂಟೆ ಬಂದ್ ಆಗಲಿದೆ.

English summary
Kempegowda international airport has made some changes in flight timings during Aero India show in 14th of February.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X