ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ವಿಮಾನ ನಿಲ್ದಾಣದ ರನ್‌ ವೇ ವಿಸ್ತರಣೆ

|
Google Oneindia Kannada News

ಬೆಂಗಳೂರು, ಫೆಬ್ರವರಿ 28 : ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೊದಲ ರನ್ ವೇ ವಿಸ್ತರಣೆ ಕಾರ್ಯ ಮಾರ್ಚ್ ಅಂತ್ಯದಲ್ಲಿ ಆರಂಭವಾಗಲಿದೆ. ವಿಸ್ತರಣೆ ಕಾರ್ಯ ಆರಂಭವಾಗುತ್ತಿದ್ದಂತೆ ರನ್ ವೇ ಮೇಲಿನ ಕಾರ್ಯಾಚರಣೆ ರದ್ದುಗೊಳಿಸಲಾಗುತ್ತದೆ.

ಬಿಐಎಎಲ್ ರನ್ ವೇ ವಿಸ್ತರಣೆ, ಅಭಿವೃದ್ಧಿ ಕಾರ್ಯಕ್ಕಾಗಿ ಟೆಂಡರ್ ಕರೆದಿದೆ. ಪ್ರಸ್ತುತ ಇರುವ RWY 09L/27R ರನ್‌ ವೇಯನ್ನು CAT 1ನೇ ದರ್ಜೆಯಿಂದ CAT 3 ನೇ ದರ್ಜೆಗೆ ಅಭಿವೃದ್ಧಿ ಪಡಿಸಲಾಗುತ್ತದೆ. ಮಾರ್ಚ್ 26ರಿಂದ ನವೆಂಬರ್ 4ರ ತನಕ ಈ ಕಾಮಗಾರಿ ನಡೆಯುವ ನಿರೀಕ್ಷೆ ಇದೆ.

ವಿಮಾನ ನಿಲ್ದಾಣಕ್ಕೆ ಸಂಪರ್ಕಿಸಲು ಬಿಎಂಟಿಸಿಯ 2 ಹೊಸ ರೂಟ್ ವಿಮಾನ ನಿಲ್ದಾಣಕ್ಕೆ ಸಂಪರ್ಕಿಸಲು ಬಿಎಂಟಿಸಿಯ 2 ಹೊಸ ರೂಟ್

2008ರಿಂದ ಮೊದಲ ರನ್‌ ವೇನಲ್ಲಿ ವಿಮಾನಗಳ ಕಾರ್ಯಾಚರಣೆ ನಡೆಯುತ್ತಿದೆ. ಕಾಮಗಾರಿ ಆರಂಭವಾಗುತ್ತಿದ್ದಂತೆ ವಿಮಾನಗಳ ಹಾರಾಟ ರನ್ ವೇನಲ್ಲಿ ಸ್ಥಗಿತಗೊಳ್ಳಲಿದೆ. ಈಗಾಗಲೇ 2ನೇ ರನ್‌ ವೇಯಲ್ಲಿ ಕಾರ್ಯಾಚರಣೆ ಆರಂಭವಾಗಿದೆ.

ಕರ್ನಾಟಕದಲ್ಲಿ ಇನ್ನೂ 3 ವಿಮಾನ ನಿಲ್ದಾಣ ಸ್ಥಾಪನೆ ಕರ್ನಾಟಕದಲ್ಲಿ ಇನ್ನೂ 3 ವಿಮಾನ ನಿಲ್ದಾಣ ಸ್ಥಾಪನೆ

KIA First Runway Up Gradation From March End

ಸುಮಾರು ಆರು ತಿಂಗಳಿಗೂ ಹೆಚ್ಚು ಕಾಲ ರನ್ ವೇ ವಿಸ್ತರಣೆ ಮತ್ತು ಅಭಿವೃದ್ಧಿ ಕೆಲಸ ನಡೆಯಲಿದೆ. ಈ ಸಮಯದಲ್ಲಿ ವಿಮಾನಗಳ ಹಾರಾಟಕ್ಕೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಬಿಐಎಎಲ್ ಸ್ಪಷ್ಟಪಡಿಸಿದೆ.

ಕೆಐಎ ಬಳಿಯ ತಾಜ್ ಹೋಟೆಲ್ ವಿಸ್ತರಣೆ; 220 ರೂಂ ಜೋಡಣೆ ಕೆಐಎ ಬಳಿಯ ತಾಜ್ ಹೋಟೆಲ್ ವಿಸ್ತರಣೆ; 220 ರೂಂ ಜೋಡಣೆ

ಮೊದಲ ರನ್‌ ವೇಯಲ್ಲಿ 2008ರಿಂದ ನಿರಂತವಾಗಿ ವಿಮಾನಗಳು ಕಾರ್ಯಾಚರಣೆ ಮಾಡುತ್ತಿವೆ. ಎರಡನೇ ರನ್‌ ವೇ ವಿಮಾನಗಳ ಹಾರಾಟಕ್ಕೆ ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ಬಿಐಎಎಲ್ ಹೇಳಿದೆ.

English summary
Up-gradation work for the first runway of the Kempegowda International Airport set to commence in the last week of March 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X