• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೆಜಿಎಫ್ ಗೆ ಕಾನೂನಿನ ತಡೆ, ಚಿತ್ರತಂಡದ ಮುಂದಿರುವ ಆಯ್ಕೆಗಳೇನು?

By ಒನ್ಇಂಡಿಯಾ ಡೆಸ್ಕ್
|

ಬೆಂಗಳೂರು, ಡಿಸೆಂಬರ್ 20: ಯಶ್ ಅಭಿನಯದ ಕೆಜಿಎಫ್ ಚಿತ್ರದ ಬಿಡುಗಡೆಗೆ ಸಿಟಿ ಸಿವಿಎಲ್ ಕೋರ್ಟ್ ಗುರುವಾರ ಸಂಜೆ ಮಧ್ಯಂತರ ತಡೆ ಸಿಕ್ಕಿದೆ. ಹೀಗಾಗಿ, ಕೋರ್ಟ್ ಆದೇಶದಂತೆ ಡಿಸೆಂಬರ್ 21ರಂದು ದೇಶದೆಲ್ಲೆಡೆ ಪ್ರದರ್ಶನ ಮಾಡುವಂತಿಲ್ಲ. ಈಗ ಚಿತ್ರತಂಡದ ಮುಂದಿರುವ ಆಯ್ಕೆಗಳೇನು? ಮುಂದೆ ಓದಿ...

ವೆಂಕಟೇಶ್ ಎಂಬುವರು ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿದ ಬೆಂಗಳೂರಿನ 10ನೇ ಸಿಟಿ ಸಿವಿಎಲ್ ನ್ಯಾಯಾಲವು ಕೆಜಿಎಫ್ ಚಿತ್ರದ ಬಿಡುಗಡೆಗೆ ಮಧ್ಯಂತರ ತಡೆ ನೀಡಿದೆ. ಜನವರಿ 07, 2019ರ ತನಕ ಚಿತ್ರದ ಬಿಡುಗಡೆಗೆ ತಡೆ ನೀಡಲಾಗಿದೆ.

ನ್ಯಾಯಾಲಯವು ಕೆಜಿಎಫ್‌ಗೆ ತಡೆ ನೀಡಿದ್ದು ಏಕೆ? ಇಲ್ಲಿದೆ ಮಾಹಿತಿ

ರಾಕಿಂಗ್ ಸ್ಟಾರ್ ಯಶ್, ಶ್ರೀನಿಧಿ ಶೆಟ್ಟಿ ಅಭಿನಯದ, ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಿತ್ರದ ಬಿಡುಗಡೆ ತಡೆ ನೀಡುವಂತೆ ಬೆಂಗಳೂರಿನ ನಿವಾಸಿಗಳಾದ ರಾಜೇಶ್ವರಿ ಕಂಬೈನ್ಸ್ ನ ವೆಂಕಟೇಶ್ ಹಾಗೂ ಎಸ್ ಆನಂದ ಎಂಬುವರು ಅರ್ಜಿ ಹಾಕಿದ್ದರು.

ಕೋರ್ಟ್ ಆದೇಶದ ಚಿಂತೆಯಿಲ್ಲ: 'ಸಿನಿಮಾ ನೋಡಿ ಬನ್ನಿ' ಎಂದು ಯಶ್ ಆಹ್ವಾನ

ಶುಕ್ರವಾರ(ಡಿಸೆಂಬರ್ 21)ದಂದು ದೇಶದೆಲ್ಲೆಡೆ ಚಿತ್ರ ಬಿಡುಗಡೆಗೆ ತಡೆ ಇದ್ದರೂ, ಚಿತ್ರವನ್ನು ಬಿಡುಗಡೆ ಮಾಡುವುದಾಗಿ ನಿರ್ಮಾಪಕ ವಿಜಯ್ ಹೇಳಿದ್ದಾರೆ.

ಕೆಜಿಎಫ್ ವಿರುದ್ಧ ತಡೆ ಏಕೆ?

ಕೆಜಿಎಫ್ ವಿರುದ್ಧ ತಡೆ ಏಕೆ?

ಕೆಜಿಎಫ್ ನಿವಾಸಿ ರೌಡಿ ತಂಗಂ ಎಂಬುವರ ಕಥೆಯನ್ನು ಯಶ್ ಅಭಿನಯದ, ಪ್ರಶಾಂತ್ ನೀಲ್ ನಿರ್ದೇಶನದ, ಹೊಂಬಾಳೆ ಪ್ರೊಡೆಕ್ಷನ್ ನಿರ್ಮಾಣದ ಕೆಜಿಎಫ್ ಚಿತ್ರ ಹೊಂದಿದೆ. ತಂಗಂ ಅವರ ಜೀವನ ಆಧಾರಿತ ಕಥೆಯನ್ನು ನಿರ್ಮಿಸುವ ಹಕ್ಕು ರಾಜೇಶ್ವರಿ ಕಂಬೈನ್ಸ್ ನ ವೆಂಕಟೇಶ್ ಅವರು ಹೊಂದಿದ್ದಾರೆ. ಈಗ ಕೆಜಿಎಫ್ ಚಿತ್ರದಿಂದ ಹಕ್ಕುಚ್ಯುತಿಯಾಗಿದೆ. ಕಾಪಿರೈಟ್ ಕಾಯ್ದೆ ಉಲ್ಲಂಘನೆಯಾಗಿರುವುದರಿಂದ ಚಿತ್ರದ ಪ್ರದರ್ಶನ, ಪ್ರಸಾರಕ್ಕೆ ತಡೆ ನೀಡುವಂತೆ ಕೋರಿದ್ದೆವು, ಅದರಂತೆ ತಡೆ ಸಿಕ್ಕಿದೆ ಎಂದು ವೆಂಕಟೇಶ್ ಪರ ವಕೀಲ ರಘುನಾಥ್ ಹೇಳಿದ್ದಾರೆ.

ಅಭಿಮಾನಿಗಳಿಗೆ ಖುಷಿ ಸುದ್ದಿ: ನಾಳೆ ಕೆಜಿಎಫ್ ಬಿಡುಗಡೆ ಆಗುತ್ತದೆ

ಕೆಜಿಎಫ್ ತಂಡ ಏನು ಮಾಡಬಹುದು?

ಕೆಜಿಎಫ್ ತಂಡ ಏನು ಮಾಡಬಹುದು?

10ನೇ ಸಿಟಿ ಸಿವಿಎಲ್ ಕೋರ್ಟ್ ಆದೇಶದ ಪ್ರತಿಯನ್ನು ಸ್ವೀಕರಿಸುವ ತನಕ ಚಿತ್ರ ತಂಡಕ್ಕೆ ಕಾಲಾವಕಾಶವಿದೆ. ಗುರುವಾರ ರಾತ್ರಿ ವೇಳೆಗೆ ಆದೇಶವನ್ನು ಪ್ರಶ್ನಿಸಿ ರಿಜಿಸ್ಟ್ರಾರ್ ಗೆ ಪ್ರತಿ ಅರ್ಜಿ ಸಲ್ಲಿಸಬಹುದು. ರಿಜಿಸ್ಟ್ರಾರ್ ಅವರು ಇಂದು ರಾತ್ರಿಯೇ ನ್ಯಾಯಾಧೀಶರಿಗೆ ವಿಷಯ ಮುಟ್ಟಿಸಿ, ತ್ವರಿತವಾಗಿ ಅರ್ಜಿ ವಿಚಾರಣೆಗೆ ಕೋರಬಹುದು. ಸದ್ಯಕ್ಕೆ ಚಿತ್ರವನ್ನು ಬಿಡುಗಡೆ ಮಾಡಲಾಗುತ್ತೆ ಎಂದು ಕೆಜಿಎಫ್ ಚಿತ್ರದ ತಂಡದ ಪರ ವಕೀಲ ಶಾಂತಿಭೂಷಣ್ ಸ್ಪಷ್ಪಪಡಿಸಿದ್ದಾರೆ.

ಇದಲ್ಲದೆ, ಸಿಟಿ ಸಿವಿಎಲ್ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ, ಹೈಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಬಹುದು.

ಯಶ್ ಅಭಿನಯದ ಕೆಜಿಎಫ್ ಚಿತ್ರದ ಬಿಡುಗಡೆ ಮಧ್ಯಂತರ ತಡೆ

ಡಿಸೆಂಬರ್ 21ರಂದು ಪ್ರದರ್ಶನವಾಗುತ್ತದೆಯೆ?

ಡಿಸೆಂಬರ್ 21ರಂದು ಪ್ರದರ್ಶನವಾಗುತ್ತದೆಯೆ?

ಕೆಜಿಎಫ್ ನಾಳೆ(ಡಿಸೆಂಬರ್ 12) ರಂದು ಪ್ರದರ್ಶನವಾಗುತ್ತದೆಯೆ?

ನಿಗದಿಯಂತೆ ನಾಳೆ ಚಿತ್ರದ ಪ್ರದರ್ಶನವಾಗುತ್ತದೆ. ಕಾನೂನು ತೊಡಕುಗಳನ್ನು ನಿವಾರಿಸಿಕೊಳ್ಳುತ್ತೇವೆ ಎಂದು ನಿರ್ಮಾಪಕ ವಿಜಯ್ ಕಿರಗಂದೂರು ಹೇಳಿದ್ದಾರೆ.

ಕಾನೂನು ಉಲ್ಲಂಘನೆಯಾಗುವುದಿಲ್ಲವೆ?

ಕಾನೂನು ಉಲ್ಲಂಘನೆಯಾಗುವುದಿಲ್ಲವೆ?

ಕೆಜಿಎಫ್ ಪ್ರದರ್ಶನವಾದರೆ ಕಾನೂನು ಉಲ್ಲಂಘನೆಯಾಗುವುದಿಲ್ಲವೆ?

ಹೌದು, ನಾಳೆ ಕೆಜಿಎಫ್ ಎಲ್ಲೇ ಪ್ರದರ್ಶನಗೊಂಡರೂ ಅದು ಕಾನೂನು ಉಲ್ಲಂಘನೆಯಾಗುತ್ತದೆ. ಆದರೆ, ಇದಕ್ಕಾಗಿ ಕೋರ್ಟ್ ನೀಡುವ ಶಿಕ್ಷೆ ಸಿಗುವ ಸಾಧ್ಯತೆ ಇರುತ್ತದೆ. ಕೋರ್ಟ್ ಶಿಕ್ಷೆಯನ್ನು ಸ್ವೀಕರಿಸುವ ಮೂಲಕ ಚಿತ್ರವನ್ನು ಯಾವುದೇ ಅಡಿತಡೆ ಇಲ್ಲದೆ ಪ್ರದರ್ಶನ ಮಾಡಬಹುದು.

ಕೆಜಿಎಫ್ ಆಗಲೇ ರಿಲೀಸ್ ಆಗಿದೆ?

ಕೆಜಿಎಫ್ ಆಗಲೇ ರಿಲೀಸ್ ಆಗಿದೆ?

ಸಾಮಾಜಿಕ ಜಾಲ ತಾಣಗಳಲ್ಲಿ ಬಂದಿರುವ ವರದಿಗಳಂತೆ, ಕೆಜಿಎಫ್ ಚಿತ್ರವು ಈಗಾಗಲೇ ದುಬೈ, ಯುಎಸ್ಎಯಲ್ಲಿ ಕೆಲ ಪ್ರದರ್ಶನ ಕಂಡಿದೆ. ಚಿತ್ರದ ವಿಮರ್ಶೆಗಳು ಬಂದಿದೆ. ಹೀಗಿರುವಾಗ, ಕೋರ್ಟ್ ಆದೇಶದ ವ್ಯಾಪ್ತಿ ಭಾರತಕ್ಕೆ ಮಾತ್ರ ಸೀಮಿತವಾದರೆ ತಡೆ ಕೋರಿದ ಅರ್ಜಿದಾರರಿಗೆ ಅನ್ಯಾಯವಾಗುವುದಿಲ್ಲವೆ ಎಂಬ ಪ್ರಶ್ನೆಯೂ ಎದ್ದಿದೆ.

ರಿಲೀಸ್ ಗೆ ಬಂದಾಗಲೆ ನೆನಪಾಯಿತೇ?

ರಿಲೀಸ್ ಗೆ ಬಂದಾಗಲೆ ನೆನಪಾಯಿತೇ?

ರಿಲೀಸ್ ಡೇ ನಾಳೆ ಇದೆ ಎನ್ನುವಾಗ ವೆಂಕಟೇಶ್ ಅವರಿಗೆ ಈ ಚಿತ್ರದ ಬಗ್ಗೆ ನೆನಪಾಯಿತೆ ಎಂಬ ಪ್ರಶ್ನೆ ಎದ್ದಿದೆ. ಈ ಪ್ರಶ್ನೆಗೆ ಉತ್ತರಿಸಿದ ವಕೀಲ ರಘುನಾಥ್, ಚಿತ್ರದ ಮುರ್ನಾಲ್ಕು ಟೀಸರ್ ಗಳನ್ನು ನೋಡಿದ ಬಳಿಕ ಕೆಲವು ದೃಶ್ಯಗಳು ರೌಡಿ ತಂಗಂ ಅವರ ಜೀವನ ಕಥೆ ಹೋಲುವಂತೆ ಇದೆ. ಹೀಗಾಗಿ, ನಾವು ಡಿಸೆಂಬರ್ 19ರಂದೇ ಈ ಕುರಿತಂತೆ ಅರ್ಜಿ ಹಾಕಿದ್ದೆವು. ಇಂದು ತೀರ್ಪು ಬಂದಿದೆ ಎಂದಿದ್ದಾರೆ. ಸಿಟಿ ಸಿವಿಎಲ್ ಜಡ್ಜ್ ಹಾಗೂ ಸೆಷನ್ಸ್ ಕೋರ್ಟ್, ಬೆಂಗಳೂರು ಕೇಸ್ ನಂ 9145/2018

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
KGF in legal trouble : What are the option before KGF movie crew. Producer Vijay said he is yet to receive the City Civil Court order copy and Movie will be screen as per th scheduled (December 21, 2018)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more