• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರು ಗಲಭೆ: ಗೋಲಿಬಾರ್‌ನಲ್ಲಿ ಗಾಯಗೊಂಡಿದ್ದ ವ್ಯಕ್ತಿ ಸಾವು

|

ಬೆಂಗಳೂರು, ಆಗಸ್ಟ್ 15: ಕೆ.ಜಿ. ಹಳ್ಳಿ ಗಲಭೆಯ ವೇಳೆ ನಡೆದ ಗೋಲಿಬಾರ್‌ನಲ್ಲಿ ಮೃತಪಟ್ಟವರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ. ಮಂಗಳವಾರ ರಾತ್ರಿ ಪೊಲೀಸ್ ಠಾಣೆ ಮೇಲೆ ನಡೆದ ದಾಳಿಗೋಯ ಸಂದರ್ಭದಲ್ಲಿ ಗೋಲಿಬಾರ್ ನಡೆದಿತ್ತು. ಆಗ ಮೂವರು ಮೃತಪಟ್ಟಿದ್ದರು.

ಗೋಲಿಬಾರ್‌ನಲ್ಲಿ ಹಲವರು ಗಾಯಗೊಂಡಿದ್ದರು. ಅದರಲ್ಲಿ ಕುತ್ತಿಗೆಗೆ ಗುಂಡು ತಗುಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯೊಬ್ಬ ಶನಿವಾರ ಮೃತಪಟ್ಟಿದ್ದಾನೆ. ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಯ್ಯದ್ ನದೀಮ್ ಎಂಬಾತ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.

   CT Ravi ಪ್ರಕಾರ ನಡೆದ ಗೋಲಿಬಾರ್‌ಗೆ Zameer Ahmed ಡೈರೆಕ್ಟರ್ ಹಾಗು ಪ್ರೊಡ್ಯೂಸರ್ | Oneindia Kannada

   ಬೆಂಗಳೂರು ಹಿಂಸಾಚಾರ: ಕೆಜಿ ಹಳ್ಳಿ ಕಾರ್ಪೋರೇಟರ್ ಪತಿ ಕಲೀಂ ಪಾಷಾ ಬಂಧನ

   ಮಂಗಳವಾರ ಗಲಭೆ ವೇಳೆ ಪೊಲೀಸರು 303 ರೈಫಲ್‌ನಿಂದ ಹಾರಿಸಿದ್ದ ಗುಂಡು ಸಯ್ಯದ್ ನದೀಮ್‌ನ ಭುಜಕ್ಕೆ ಹೊಂದಿಕೊಂಡಂತೆ ಎದೆ ಭಾಗದಲ್ಲಿ ಹೊಕ್ಕಿ ಹೊರಹೋಗಿತ್ತು. ನದೀಮ್‌ಗೆ ಕೊರೊನಾ ವೈರಸ್ ಪರೀಕ್ಷೆ ಮಾಡಲಾಗಿತ್ತು. ಆತನಲ್ಲಿ ಕೋವಿಡ್ ಪಾಸಿಟಿವ್ ಕಂಡುಬಂದಿತ್ತು.

   ಡಿಜೆ ಹಳ್ಳಿ ನಿವಾಸಿ ವಾಜೀದ್ ಖಾನ್, ಯಾಸೀರ್ ಮತ್ತು ನಾಗವಾರ ನಿವಾಸಿ ಶೇಕ್ ಸಿದ್ದಿಖಿ ಮಂಗಳವಾರದ ಗೋಲಿಬಾರ್‌ನಲ್ಲಿ ಜೀವ ಕಳೆದುಕೊಂಡಿದ್ದರು.

   ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿಯಲ್ಲಿ ನಡೆದ ಗಲಭೆ ಪ್ರಕರಣಗಳ ಕುರಿತು ವಿವಿಧ ಪಕ್ಷಗಳು ಸತ್ಯಶೋಧನಾ ಸಮಿತಿ ರಚಿಸಿವೆ. ಆಗಸ್ಟ್ 16ರವರೆಗೂ ಸೆಕ್ಷನ್ 144 ಜಾರಿಗೊಳಿಸಲಾಗಿದೆ.

   ಪೊಲೀಸ್, ಹಿಂದೂಗಳೇ ಟಾರ್ಗೆಟ್ ಆಗಿದ್ದಾರೆ; ಸಿ.ಟಿ.ರವಿ

   ಬೆಂಗಳೂರಿನ ಪುಲಿಕೇಶಿ ನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಸೋದರಳಿಯ ನವೀನ್ ಒಂದು ಸಮುದಾಯದ ವಿರುದ್ಧ ಫೇಸ್‌ ಬುಕ್ ಪೋಸ್ಟ್ ಹಾಕಿದ್ದಾರೆ ಎಂದು ಆರೋಪಿಸಿ ಆರಂಭವಾದ ಗಲಭೆ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಡಿ. ಜೆ. ಹಳ್ಳಿ ಮತ್ತು ಕೆ. ಜೆ. ಹಳ್ಳಿ ಪೊಲೀಸ್ ಠಾಣೆಗಳ ಮೇಲೆ ಕಲ್ಲು ತೂರಾಟ ನಡೆದಿತ್ತು. ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು. ಗಲಭೆ ನಿಯಂತ್ರಿಸಲು ಪೊಲೀಸರು ಗುಂಡು ಹಾರಿಸಿದಾಗ ಮೂವರು ಮೃತಪಟ್ಟಿದ್ದರು. ಶನಿವಾರ ಮತ್ತೊಬ್ಬ ಮೃತಪಟ್ಟಿದ್ದಾನೆ

   English summary
   One more person who was injured in police golibar in KG Halli violence has died on Saturday in hospital.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X