ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಿತೂರಿಗೆ ಸಿದ್ಧತೆ: ಕೆ.ಜಿ. ಹಳ್ಳಿ ಪೊಲೀಸರಿಂದ 14 ಆರೋಪಿಗಳ ಬಂಧನ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 23: ಕೆಜಿ ಹಳ್ಳಿ ಠಾಣೆಯಲ್ಲಿ ದಾಖಲಾದ ಪ್ರಕರಣ ಸಂಬಂಧ ಸರಣಿ ರೈಡ್‌ಗಳನ್ನು ಮಾಡಿದ ಬೆಂಗಳೂರು ಪೊಲೀಸರು 14 ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೆಲ ಕಿಡಿಗೇಡಿಗಳು ಸಮುದಾಯಗಳ ನಡುವೆ ದ್ವೇಷವನ್ನು ಸೃಷ್ಟಿಸುವ ಕ್ರಿಮಿನಲ್ ಪಿತೂರಿ ನಡೆಸುತ್ತಿರುವ ನಿರ್ದಿಷ್ಟ ಮಾಹಿತಿ ಆಧಾರದ ಮೇಲೆ ದಾಳಿಯನ್ನು ನಡೆಸಲಾಗಿತ್ತು.

ಬೆಂಗಳೂರು ನಗರ ಪೊಲೀಸರು ಕರ್ನಾಟಕ ರಾಜ್ಯದಾದ್ಯಂತ ಜಿಲ್ಲಾ ಪೊಲೀಸ್ ಘಟಕಗಳ ನೆರವಿನೊಂದಿಗೆ 22-09-2022 ರಂದು ನಡೆಸಿದ ಸರಣಿ ರೈಡ್ ಗಳ ನಂತರ, 14 ಜನರನ್ನು ಬಂಧಿಸಿದ್ದಾರೆ. ಇಬ್ಬರು ಆರೋಪಿಗಳು ಬೆಂಗಳೂರು ನಗರಕ್ಕೆ ಸೇರಿದವರಾಗಿದ್ದರೆ, ಉಳಿದವರು ಕರ್ನಾಟಕದ ವಿವಿಧ ಪ್ರದೇಶಗಳಿಗೆ ಸೇರಿದವರಾಗಿರುತ್ತಾರೆ.

ಕೋಮು ದ್ವೇಷವನ್ನು ಹುಟ್ಟುಹಾಕುವ ಯತ್ನದಲ್ಲಿದ್ದ ಗುಂಪಿನ ಮೇಲೆ ನಿಖರವಾದ ನಿಗಾವನ್ನು ಬೆಂಗಳೂರು ಪೊಲೀಸರು ಇಟ್ಟಿದ್ದರು. ಸೆ. 21ರಂದು ಒಂದು ದೊಡ್ಡ ಗುಂಪು ಬೆಂಗಳೂರಿನಲ್ಲಿ ಮಹತ್ವದ ಸಭೆಯನ್ನು ನಡೆಸಿ ಸಮುದಾಯಗಳ ನಡುವೆ ದ್ವೇಷವನ್ನು ಬಿತ್ತುವ ಕೆಲಸವನ್ನು ಮಾಡುವ ಯತ್ನವನ್ನು ಮಾಡಿದ್ದರು. ಈ ಸಭೆಯಲ್ಲಿ ಭಾಗವಹಿಸಿದ್ದ 19 ಜನರ ಹೆಸರನ್ನು ಮತ್ತು ವಿಳಾಸವನ್ನು ಪಟ್ಟಿ ಮಾಡಿದ್ದ ಪೊಲೀಸರು ಕಾರ್ಯಚರಣೆಯನ್ನು ಮಾಡಿ ಆರೋಪಿಗಳ ಹೆಡೆ ಮುರಿಯನ್ನು ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

 ರಾಜ್ಯದ ಬೇರೆ ಬೇರೆ ಭಾಗದ ಆರೋಪಿಗಳು

ರಾಜ್ಯದ ಬೇರೆ ಬೇರೆ ಭಾಗದ ಆರೋಪಿಗಳು

A1 ನಾಸೀರ್ ಪಾಷಾ- ಬೆಂಗಳೂರು
A2 ಮನ್ಸೂರ್ ಅಹಮದ್ - ಬೆಂಗಳೂರು
A3 ಶೇಕ್ ಇಜಾಜ್ ಅಲಿ - ಕಲಬುರಗಿ
A4 ಮೊಹಮದ್ ಕಲಿಮುಲ್ಲಾ - ಮೈಸೂರು
A5 ಮೊಹಮ್ಮದ್ ಅಶ್ರಫ್ ಅಂಕಜಲ್ - ಮಂಗಳೂರು
A6 ಮೊಹಮದ್ ಶರೀಫ್ -ಸ ಮಂಗಳೂರು
A7 ಅಬ್ದುಲ್ ಖಾದೀರ್ ಪುತ್ತುರು - ದಕ್ಷಿಣ ಕನ್ನಡ
A8 ಮೊಹಮ್ಮದ್ ತಪ್ಸೀರ್ - ಬಂಟ್ವಾಳ ದಕ್ಷಿಣ ಕನ್ನಡ
A9 ಮೊಹಿಯುದ್ದಿನ್ - ಮಂಗಳೂರು
A10 ನವಾಜ್ ಕಾವುರ್ - ಮಂಗಳೂರು
A11 ಅಶ್ರಫ್ - ಮಂಗಳೂರು
A12 ಅಬ್ದುಲ್ ರಜಾಕ್ - ಪುತ್ತೂರು ದಕ್ಷಿಣ ಕನ್ನಡ
A13 ಅಯುಬ್ ಕೆ - ಪುತ್ತೂರು ದಕ್ಷಿಣ ಕನ್ನಡ
A14 ಶಾಹಿದ್ ಖಾನಗ - ಶಿವಮೊಗ್ಗ
A15 ತಾಹಿರ್ - ದಾವಣಗೆರೆ
A16 ಇಮಾದುದ್ದೀನ್ - ದಾವಣಗೆರೆ
A17 ಅಬ್ದುಲ್ ಅಜಿಜ್ ಅಬ್ದುಲ್ - ಶಿರಸಿ ಉತ್ತರ ಕನ್ನಡ
A18 ಮೌಸಿನ್ ಅಬ್ದುಲ್ ಶಾಕುರ್ - ಶಿರಸಿ ಉತ್ತರ ಕನ್ನಡ
A19 ಮೊಹಮ್ಮದ್ ಫಯಾಜ್ - ಗಂಗಾವತಿ ಕೊಪ್ಪಳ
ಈ 19 ಆರೋಪಿಗಳ ಪೈಕಿಯಲ್ಲಿ ಬೆಂಗಳೂರು ಪೊಲೀಸರು 14 ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

 ದ್ವೇಷವನ್ನು ಸೃಷ್ಟಿಸುವ ಕ್ರಿಮಿನಲ್ ಪಿತೂರಿ

ದ್ವೇಷವನ್ನು ಸೃಷ್ಟಿಸುವ ಕ್ರಿಮಿನಲ್ ಪಿತೂರಿ

ಕೆ.ಜೆ ಹಳ್ಳಿ ಪೊಲೀಸ ಠಾಣೆಯ ಅ. ಸಂ. 328/2022 u/s 120(B) r/w 121, 121(a) ಮತ್ತು 153(a) IPC, ತನಿಖೆಯ ಮುಂದುವರಿದ ಭಾಗವಾಗಿ ಬೆಂಗಳೂರು ನಗರ ಪೊಲೀಸರು ಕರ್ನಾಟಕ ರಾಜ್ಯದಾದ್ಯಂತ ಜಿಲ್ಲಾ ಪೊಲೀಸ್ ಘಟಕಗಳ ನೆರವಿನೊಂದಿಗೆ, (ಕೆಲ ಕಿಡಿಗೇಡಿಗಳು ಸಮುದಾಯಗಳ ನಡುವೆ ಅಸಂಗತತೆ ಮತ್ತು ದ್ವೇಷವನ್ನು ಸೃಷ್ಟಿಸುವ ಕ್ರಿಮಿನಲ್ ಪಿತೂರಿ ನಡೆಸುತ್ತಿರುವ ನಿರ್ದಿಷ್ಟ ಮಾಹಿತಿ ಆಧಾರದ ಮೇಲೆ) ನಡೆದಿದ್ದ ರೈಡ್‌.

 ಮ್ಯಾಜಿಸ್ಟ್ರೇಟ್‌ ಮುಂದೆ ಹಾಜರು

ಮ್ಯಾಜಿಸ್ಟ್ರೇಟ್‌ ಮುಂದೆ ಹಾಜರು

ಸೆಪ್ಟೆಂಬರ್ 22ರಂದು ನಡೆಸಿದ ಸರಣಿ ರೈಡ್‌ಗಳ ನಂತರ 14 ಜನರನ್ನು ಬಂಧಿಸಲಾಗಿದೆ. ಇಬ್ಬರು ಆರೋಪಿಗಳು ಬೆಂಗಳೂರು ನಗರಕ್ಕೆ ಸೇರಿದವರಾಗಿದ್ದರೆ, ಉಳಿದವರು ಕರ್ನಾಟಕದ ವಿವಿಧ ಪ್ರದೇಶಗಳಿಗೆ ಸೇರಿದವರಾಗಿರುತ್ತಾರೆ. ಎಲ್ಲಾ ಆರೋಪಿಗಳನ್ನು ಇಂದು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ

 ಹತ್ತೊಂಬತ್ತು ತಂಡಗಳ ರಚನೆಯಾಗಿತ್ತು

ಹತ್ತೊಂಬತ್ತು ತಂಡಗಳ ರಚನೆಯಾಗಿತ್ತು

ಬೆಂಗಳೂರು ಪೊಲೀಸರು ಏಕಕಾಲದಲ್ಲಿ ಕಾರ್ಯಚರಣೆಯನ್ನು ಮಾಡಲು ಪ್ಲಾನ್ ಮಾಡಿದ್ದರು. ಅದರಂತೆ ಸಿಸಿಬಿ ಡಿಸಿಪಿ ಶರಣಪ್ಪ, ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ ಗುಳೇದ್ ನೇತ್ರತ್ವದಲ್ಲಿ ಹತ್ತೊಂಬತ್ತು ತಂಡ ಮಾಡಲಾಗಿತ್ತು. ರಾಜ್ಯದ ಬೇರೆ ಬೇರೆ ಭಾಗಗಳಿಗೆ ತೆರಳಿದ ಪೊಲೀಸರ ತಂಡ 14 ಜನರನ್ನು ಬಂಧಿಸಿ ಕರೆತಂದಿದೆ. ಈ ಮೂಲಕ ಬೆಂಗಳೂರಿನಲ್ಲಿ ಕೋಮು ದ್ವೇಷವನ್ನು ಕದಡಲು ನಡೆಸಿದ್ದ ದೊಡ್ಡ ಪಿತೂರಿ ಬಯಲಾಗಿ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ.

English summary
Bengaluru police have managed to arrest 14 accused after conducting series of raids in connection with the case registered at KG Halli police station. The raid was carried out based on specific information that some miscreants were hatching a criminal conspiracy to create communal hatred, Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X