ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಾಂಡ್ಸ್ ಪೌಡರ್ ನಲ್ಲಿ ಬೆಂಗಳೂರಿಗೆ ಹೆರಾಯನ್ ಸಪ್ಲೇ : ಪೆಡ್ಲರ್ ಸೆರೆ

|
Google Oneindia Kannada News

ಬೆಂಗಳೂರು, ಸೆ. 04: ಡ್ರಗ್ ಪೆಡ್ಲರ್ ಗಳು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ಭದ್ರತಾ ವ್ಯವಸ್ಥೆಗೆ ಮಣ್ಣೆರಚಿ ಎಸ್ಕೇಪ್ ಆಗುತ್ತಾರೆ. ತಮಿಳು ಸಿನಿಮಾ ಮಾದರಿಯಲ್ಲಿ ಪಾಂಡ್ಸ್ ಪೌಡರ್ ನಲ್ಲಿ ಹೆರಾಯಿನ್ ಸಾಗಿಸಿದ ಡ್ರಗ್ ಪೆಡ್ಲರ್ ಕೆ.ಜಿ. ಹಳ್ಳಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ.

ಸೋರಾಯ್ ಸ್ಯಾಮ್ ಬೋರಿಸ್ ಸಿಂಗ್ ಬಂಧಿತ ಆರೋಪಿ. ಅಂತರ ರಾಜ್ಯಗಳಿಗೆ ಈತ ಡ್ರಗ್ ಸಾಗಣೆ ಮಾಡುತ್ತಿದ್ದ. ಬಂಧಿತನಿಂದ ಎರಡು ಲಕ್ಷ ರೂ. ಮೌಲ್ಯದ ಹತ್ತು ಗ್ರಾಂ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ. ನಗದು ಹಣ, ಡ್ರಗ್ ಸಪ್ಲೈ ಮಾಡಲು ಬಳಸಿದ್ದ ಪ್ಲಾಸ್ಟಿಕ್ ಡಬ್ಬಿಗಳು, 3 ಏರ್ ಇಂಡಿಯಾ ಫ್ಲೈಟ್ ನ ಬೋರ್ಡಿಂಗ್ ಪಾಸ್ ಮತ್ತು ಕಪ್ಪು ಬಣ್ಣದ ಬ್ಯಾಗ್ ನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಎಚ್‌ಬಿಆರ್ ಲೇಔಟ್ ನ ಅಮ್ಮಾಸ್ ಬೇಕರಿ ಹಿಂಭಾಗ ಡ್ರಗ್ ಮಾರಾಟ ಮಾಡುವ ವೇಳೆ ಕೆ.ಜಿ. ಹಳ್ಳಿ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಡ್ರಗ್ ಪೆಡ್ಲಿಂಗ್ ಯಾವೆಲ್ಲಾ ರೀತಿ ರವಾನೆಸುತ್ತಾರೆ ಎಂಬ ಕಥೆ ಆಧಾರಿತ ತಮಿಳು ಸಿನಿಮಾ "ಐಯನ್" ಸದ್ದು ಮಾಡಿತ್ತು. ಸಿನಿಮಾ ಮಾದರಿಯಲ್ಲಿಯೇ ಸೊರಾಯ್ ಸ್ಯಾಮ್ ಬೋರಿಸ್ ಡ್ರಗ್ ಪೆಡ್ಲಿಂಗ್ ಮಾಡುತ್ತಿದ್ದ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳ ಕಣ್ಣು ತಪ್ಪಿಸಿ ಡ್ರಗ್ ಪೆಡ್ಲಿಂಗ್ ಮಾಡುತ್ತಿದ್ದ. ಪೌಡರ್ ಮಾದರಿ ಇರುವ ಹೆರಾಯಿನ್ ನನ್ನು ಪಾಂಡ್ಸ್ ಪೌಡರ್ ನಲ್ಲಿ ಗೊತ್ತಿಲ್ಲದಂತೆ ಇಟ್ಟು ಸಾಗಾಟ ಮಾಡುತ್ತಿದ್ದ. ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದರೂ ಅದರಿಂದ ಬಚಾವ್ ಆಗುತ್ತಿದ್ದ. ಕಡಿಮೆ ಬೆಲೆಗೆ ಡ್ರಗ್ ತರಿಸಿ ದುಬಾರಿ ಮೊತ್ತಕ್ಕೆ ಮಾರಾಟ ಮಾಡುತ್ತಿದ್ದ. ಬೇರೆ ರಾಜ್ಯಗಳಿಂದ ಕಡಿಮೆ ಬೆಲೆಗೆ ತರುತ್ತಿದ್ದ ಡ್ರಗ್ ನ್ನು ತನ್ನ ಸಂಪರ್ಕದಲ್ಲಿರುವ ಹಳೇ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದ. ಈತನ ಬಗ್ಗೆ ಖಚಿತ ಮಾಹಿತಿ ಆಧರಿಸಿ ಡ್ರಗ್ ಖರೀದಿಸುವ ಸೋಗಿಯಲ್ಲಿಯೇ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

Bengaluru :KG Halli Police Arrest drug peddler who smuggling Heroin

ಉಡ್ತಾ ಬೆಂಗಳೂರು: ರಾಜ್ಯದಲ್ಲಿ ಒಂದಡೆ ಪೊಲೀಸರು ಡ್ರಗ್ ವಿರುದ್ಧ ದೊಡ್ಡ ಸಮರ ಸಾರಿದ್ದಾರೆ. ಆದರೆ, ಒಂದಡೆ ಸ್ಯಾಂಡಲ್ ವುಡ್ ಡ್ರಗ್ ಜಾಲವನ್ನು ಭೇದಿಸಿದ ಪೊಲೀಸರು ಹಲವಾರು ಡ್ರಗ್ ಪೆಡ್ಲರ್ ಗಳನ್ನು ಬಂಧಿಸಿದ್ದಾರೆ. ನಟಿ ಸಂಜನಾ ಗಲ್ರಾಣಿ, ರಾಗಿಣಿ ದ್ವಿವೇದಿ, ಶಿವಪ್ರಕಾಶ್, ಆದಿತ್ಯ ಆಳ್ವಾ ಸೇರಿದಂತೆ ದೊಡ್ಡ ದೊಡ್ಡ ಕುಳಗಳೇ ಡ್ರಗ್ ಪ್ರಕರಣದಲ್ಲಿ ಸಿಲುಕಿದರು. ಸೀರಿಯಲ್ ಕಲಾವಿದರು ಕೂಡ ಡ್ರಗ್ ಪ್ರಕರಣದಲ್ಲಿ ವಿಚಾರಣೆ ಎದುರಿಸಿದ್ದರು.

ಅತ್ತ ಸಿಸಿಬಿ ಪೊಲೀಸರು ಸ್ಯಾಂಡಲ್ ವುಡ್ ಡ್ರಗ್ ಡೀಲರ್ ಗಳ ಮೇಲೆ ಮುಗಿಬಿದ್ದಿದ್ದೇ ಇತ್ತ ಪೂರ್ವ ವಿಭಾಗದ ಪೊಲೀಸರು ಅಷ್ಟೇ ಮಹತ್ವದ ಡ್ರಗ್ ಡೀಲ್ ಪ್ರಕರಣಗಳನ್ನು ಬಯಲಿಗೆ ಎಳೆದರು. ಸಿಸಿಬಿ ಪೊಲೀಸರಿಗೆ ಕೈಕೊಟ್ಟ ಡ್ರಗ್ ಪೆಡ್ಲರ್ ಜಾಡು ಹಿಡಿದು ಸೆಲಿಬ್ರಿಟಿಗಳ ಡ್ರಗ್ ಜಾಲವನ್ನು ಬಯಲಿಗೆ ಎಳೆದರು. ಅಂತೂ ಕಳೆದ ಒಂದೂವರೆ ವರ್ಷದಿಂದ ಬೆಂಗಳೂರು ಪೊಲೀಸರು ಡ್ರಗ್ ವಿರುದ್ಧ ಸಮರ ಸಾರುತ್ತಲೇ ಇದ್ದಾರೆ. ವಿಪರ್ಯಾಸವೆಂದರೆ ಡ್ರಗ್ ಪ್ರಕರಣಗಳು ಬೆಂಗಳೂರಿನಲ್ಲಿ ಜಾಸ್ತಿಯಾಗುತ್ತಲೇ ಇವೆ. ಕೊರೊನಾವೈರಸ್ ಲಾಕ್ ಡೌನ್ ಸಮಯದಲ್ಲಂತೂ ಡ್ರಗ್ ಜಾಲ ಪರಕಾಷ್ಠೆ ತಲುಪಿತ್ತು.

Recommended Video

ಖಾಸಗಿ ಉದ್ಯೋಗಿಗಳ PF ಖಾತೆ ಮೇಲೆ ಕೇಂದ್ರದ ಕಣ್ಣು | Oneindia Kannada

ಆಫ್ರಿಕಾ ಮೂಲದ ಡ್ರಗ್ ಜಾಲವನ್ನು ಸೆದೆ ಬಡಿಯಲು ಪೊಲೀಸ್ ಇಲಾಖೆ ತಂತ್ರಜ್ಞಾನ ಮೊರೆ ಹೋದರೆ ಮಾದಕ ಲೋಕವನ್ನೇ ನಿಯಂತ್ರಣ ಮಾಡಲು ಅವಕಾಶವಿದೆ. ವಿದ್ಯಾರ್ಥಿ ವೀಸಾ ಮೇಲೆ ಭಾರತಕ್ಕೆ ಬರುವ ಪ್ರತಿ ವಿದ್ಯಾರ್ಥಿಗೂ ವೀಸಾ ಜೊತೆಗೆ ತಂತ್ರಜ್ಞಾನ ಆಧಾರಿತ ಗುರುತಿನ ಚೀಟಿ ನೀಡಬೇಕು. ಅವರ ವೀಸಾ ಅವಧಿ ಮುಗಿದ ಕೂಡಲೇ ಅವರ ವಿಳಾಸ ಪತ್ತೆ ಮಾಡಿ ವಿಚಾರಣೆ ನಡೆಸಲು ತುಂಬಾ ಅನುಕೂಲವಾಗುತ್ತದೆ. ಇನ್ನು ಬೆಂಗಳೂರಿನಲ್ಲಿರುವ ಪ್ರತಿ ಕಾಲೇಜು ವಿದೇಶಿ ವಿದ್ಯಾರ್ಥಿಯ ವಿವರ, ಪದವಿ ಮುಗಿಯುವ ವಿವರಗಳನ್ನು ಪೊಲೀಸ್ ಇಲಾಖೆಗೆ ನೀಡಬೇಕು. ಎಲ್ಲಾ ಡಾಟಾ ಕ್ರೋಢೀಕರಣ ಮಾಡಿ ತಂತ್ರಜ್ಞಾನ ಬಳಸಿದರೆ, ವಿದೇಶಿ ಡ್ರಗ್ ಜಾಲವನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತರಬಹುದು. ಈ ನಟ್ಟಿನಲ್ಲಿ ಇಲಾಖೆಯ ಉನ್ನತ ಅಧಿಕಾರಿಗಳು ಗಂಭೀರ ಚಿಂತನೆ ನಡೆಸಬೇಕಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಒನ್ ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ.

English summary
KG Halli police arrested Inter State Drug peddler who smuggling heroin in the name of ponds powder .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X