ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಮ್ಯಾರಥಾನ್‌- ಮುಂದುವರಿದ ಕೀನ್ಯಾ ಪ್ರಾಬಲ್ಯ

By Ashwath
|
Google Oneindia Kannada News

ಬೆಂಗಳೂರು, ಮೇ.18: ಟಿಸಿಎಸ್‌ ವಿಶ್ವ 10ಕೆ ಮ್ಯಾರಥಾನ್‌ನಲ್ಲಿ ಈ ಬಾರಿಯೂ ಕೀನ್ಯಾ ಅಥ್ಲೀಟ್‌ಗಳ ಪ್ರಾಬಲ್ಯ ಮುಂದುವರಿದಿದೆ. ಜೆಫ್ರಿ ಕ್ಯಾಮ್‌‌‌ವೋರರ್‌‌ ಮತ್ತು ಲುಸಿ ಕಬು ಕ್ರಮವಾಗಿ ಪುರುಷರ ಹಾಗೂ ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ.

ಬೆಂಗಳೂರಿನಲ್ಲಿ ಶನಿವಾರ ರಾತ್ರಿ ಸುರಿದ ಭರ್ಜರಿ ಮಳೆಯಿಂದ ಉಷ್ಣಾಂಶ ಕಡಿಮೆ ಇದ್ದುದ್ದರಿಂದ ಭಾನುವಾರ ಮುಂಜಾನೆ ನಡೆದ ಮ್ಯಾರಥಾನ್‌ನಲ್ಲಿ ನಗರದ ಜನತೆ ಉತ್ಸಾಹದಿಂದ ಭಾಗವಹಿಸಿದ್ದರು.

ಟಾಟಾ ಕನ್ಸಲ್ಟನ್ಸಿ ಸರ್ವಿಸಸ್ (ಟಿಸಿಎಸ್) ಆಶ್ರಯದಲ್ಲಿ ನಡೆದ ಈ ಮ್ಯಾರಥಾನ್‌ನಲ್ಲಿ ಭಾರತೀಯರ ವಿಭಾಗದಲ್ಲಿ ರಾಜ್ಯದ ಮಡಿಕೇರಿ ಮೂಲದ ಬಿ.ಸಿ. ತಿಲಕ್‌ ಮತ್ತು ಮಹಾರಾಷ್ಟದ ಸ್ವಾತಿ ಗಾಧವೆ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಪ್ರಶಸ್ತಿಯನ್ನು ಗೆದ್ದುಕೊಂಡರು.

ಜೆಫ್ರಿ ಕ್ಯಾಮ್‌‌‌ವೋರರ್‌ ಆರಂಭದಲ್ಲೇ ಗಳಿಸಿದ ಮುನ್ನಡೆಯನ್ನು ಕೊನೆಯ ತನಕ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿ 27 ನಿಮಿಷ 44 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿ ಆರು ವರ್ಷದ ಹಿಂದಿನ ದಾಖಲೆಯನ್ನು ಮುರಿಯುವುದರೊಂದಿಗೆ, 21 ಸಾವಿರ ಡಾಲರ್‌ (ಸುಮಾರು 12 ಲಕ್ಷ ರೂ.) ಪ್ರಶಸ್ತಿ ಮುಡಿಗೇರಿಸಿಕೊಂಡರು.

ತೀವ್ರ ಪೈಪೋಟಿ ನೀಡಿದ ಉಗಾಂಡದ ಜೋಶುವಾ ಚೆಪುಟಿಜಿ 28 ನಿಮಿಷ 24 ಸೆಕೆಂಡ್‌‌ನಲ್ಲಿ ಎರಡನೆಯರವಾಗಿ ಗುರಿ ಮುಟ್ಟಿ 15 ಸಾವಿರ ಡಾಲರ್‌ ಬಹುಮಾನ ಗಳಿಸಿದರೆ, ಇಥಿಯೋಪಿಯಾದ ಕಿಂಡೆ ಅಟ್ನಾವೊ 28 ನಿಮಿಷ 35 ಸೆಕೆಂಡ್‌ನಲ್ಲಿ ಗುರಿ ಮುಟ್ಟಿ ಮೂರನೇ ಸ್ಥಾನಿಯಾಗಿ 9 ಸಾವಿರ ಡಾಲರ್‌ ಬಹುಮಾನ ಪಡೆದರು.

ಮಹಿಳೆಯರ ವಿಭಾಗದ ಅಗ್ರ ಮೂರು ಸ್ಥಾನಗಳು ಕೀನ್ಯಾದ ಪಾಲಾಗಿದೆ. ಲುಸಿ ಕಬು 31 ನಿಮಿಷ 48 ಸೆಕೆಂಡ್‌ನಲ್ಲಿ ಗುರಿ ತಲುಪಿ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದರೆ, ಜೊಯ್ಸ್‌‌‌‌ ಚೆಪ್‌‌‌ಕಿರು 31 ನಿಮಿಷ 55 ಸೆಕೆಂಡ್‌ ಗುರಿತಲುಪಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಲೈನೆಟ್‌‌‌‌‌ ಮಸೈ 32 ನಿಮಿಷ 28 ಸೆಕೆಂಡ್‌‌ನಲ್ಲಿ ಗುರಿ ಮುಟ್ಟುವ ಮೂಲಕ ಮೂರನೇ ಸ್ಥಾನ ಗಳಿಸಿದ್ದಾರೆ.

ಬಿಸಿ.ತಿಲಕ್‌ ‌‌30 ನಿಮಿಷ 26 ಸೆಕೆಂಡ್‌ ಗಳಿಸಿ 12ನೇಯವರಾಗಿ ಗುರಿ ಮುಟ್ಟಿದರೆ, ಸ್ವಾತಿ 37 ನಿಮಿಷ 22 ಸೆಕೆಂಡ್‌ ಗಳಿಸಿ 11ನೇಯವರಾಗಿ ಗುರಿ ಮುಟ್ಟಿದರು.

ಭಾರತ ಪುರುಷರ ವಿಭಾಗದಲ್ಲಿ ಪದಕ ಗೆದ್ದ ಬಿ.ಸಿ.ತಿಲಕ್‌, ಅನೀಶ್‌ ಥಾಪ, ನಿತೇಂದ್ರ ಸಿಂಗ್‌ ರಾವತ್‌‌‌ ಭಾರತೀಯ ಸೇನೆಯ ವಿವಿಧ ಘಟಕಗಳಲ್ಲಿ ಉದ್ಯೋಗದಲ್ಲಿದ್ದಾರೆ.

 ಪುರುಷರ ವಿಭಾಗದ ಚಾಂಪಿಯನ್‌:

ಪುರುಷರ ವಿಭಾಗದ ಚಾಂಪಿಯನ್‌:

ಪುರುಷರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಕಿನ್ಯಾದ ಜೆಫ್ರಿ ಕ್ಯಾಮ್‌‌‌ವೋರರ್‌ ಗುರಿ ಮುಟ್ಟುತ್ತಿರುವುದು

 ಮಹಿಳೆಯರವಿಭಾಗದ ಚಾಂಪಿಯನ್‌:

ಮಹಿಳೆಯರವಿಭಾಗದ ಚಾಂಪಿಯನ್‌:

ಮಹಿಳೆಯರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಕಿನ್ಯಾದ ಲುಸಿ ಕಬು ಗುರಿ ತಲುಪುತ್ತಿರುವುದು.

ಪುರುಷರ ವಿಭಾಗ(ಭಾರತ)

ಪುರುಷರ ವಿಭಾಗ(ಭಾರತ)

ಪುರುಷರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಬಿ.ಸಿ.ತಿಲಕ್‌(ಮಧ್ಯದಲ್ಲಿರುವುದು) ದ್ವಿತೀಯ ಸ್ಥಾನ ಪಡೆದ ಅನಿಷ್‌‌ ಥಾಪಾ(ಬಲ) ತೃತೀಯ ಸ್ಥಾನ ಪಡೆದ ನಿತೇಂದ್ರ ಸಿಂಗ್‌ ರಾವತ್‌‌‌(ಎಡ) ಸಂಭ್ರಮಿಸುತ್ತಿರುವುದು.

ಮಹಿಳೆಯರ ವಿಭಾಗ(ಭಾರತ)

ಮಹಿಳೆಯರ ವಿಭಾಗ(ಭಾರತ)

ಮಹಿಳೆಯರ ವಿಭಾಗದಲ್ಲಿ ಪ್ರಥಮ ಸ್ಥಾನ ಸ್ವಾತಿ (ಮಧ್ಯದಲ್ಲಿರುವುದು), ಜಯಶ್ರೀ ಬೊರಾಗೆ (ಬಲ), ಸುಪ್ರೀಯಾ ಪಾಟೀಲ್‌‌‌(ಎಡ) ಸಂಭ್ರಮಮಿಸುತ್ತಿರುವುದು.

 ಕಾರ್ಯಕ್ರಮದ ರಾಯಭಾರಿಗಳು

ಕಾರ್ಯಕ್ರಮದ ರಾಯಭಾರಿಗಳು

ಕಾರ್ಯ‌ಕ್ರಮದ ರಾಯಭಾರಿಗಳಾದ ಅಮೆರಿಕದ ಅಥ್ಲೆಟ್‌ ಕಾರ್ಲ್‌ ಲೂಯಿಸ್‌‌‌, ಬಾಲಿವುಡ್‌ ನಟ ಜಾನ್‌ ಅಬ್ರಹಾಂ, ಪುನೀತ್‌ ರಾಜ್‌ಕುಮಾರ್‌ ವಿಶ್ವ10ಕೆ ಮ್ಯಾರಥಾನ್‌ಧ್ವಜ ಹಾರಿಸುತ್ತಿರುವುದು.

 ಟಿಸಿಎಸ್‌ ಮ್ಯಾರಥಾನ್‌:

ಟಿಸಿಎಸ್‌ ಮ್ಯಾರಥಾನ್‌:


ಮ್ಯಾರಥಾನ್‌ಲ್ಲಿ ವಿವಿಧ ವೇಷಗಳನ್ನು ಧರಿಸಿ ಓಡುತ್ತಿರುವುದು.

ಕಾರ್ಪೋರೇಟ್‌ ಮ್ಯಾರಥಾನ್‌

ಕಾರ್ಪೋರೇಟ್‌ ಮ್ಯಾರಥಾನ್‌

ಮ್ಯಾರಥಾನ್‌‌ನಲ್ಲಿ ಒಟ್ಟು 25 ಸಾವಿರಕ್ಕೂ ಅಧಿಕ ಮಂದಿ ಉತ್ಸಾಹದಿಂದ ಪಾಲ್ಗೊಂಡಿದ್ದರು.

 ಮ್ಯಾರಥಾನ್‌ನಲ್ಲಿ ಮೋದಿ:

ಮ್ಯಾರಥಾನ್‌ನಲ್ಲಿ ಮೋದಿ:

ನರೇಂದ್ರ ಮೋದಿ ವೇಷಧಾರಿ ಮ್ಯಾರಥಾನ್‌‌ನಲ್ಲಿ ಓಡುತ್ತಿರುವುದು

ದಾರಿಬಿಡಿ ದಾರಿಬಿಡಿ ಬಸವ ಬಂದ

ದಾರಿಬಿಡಿ ದಾರಿಬಿಡಿ ಬಸವ ಬಂದ

ಮ್ಯಾರಥಾನ್‌‌ ನಡುವೆ ಕಾಣಿಸಿಕೊಂಡ ಬಸವ

 ದಿನವಿಡಿ ಉಲ್ಲಾಸ

ದಿನವಿಡಿ ಉಲ್ಲಾಸ

"ಕೆಲಸ ಮಧ್ಯೆ ಬೆಳಗ್ಗೆ ಓಡುವ ಹವ್ಯಾಸವನ್ನು ಬೆಳೆಸಿದ್ದರೆ ದಿನವಿಡಿ ಉಲ್ಲಾಸದಿಂದ ಇರುತ್ತೇವೆ. ಬೆಂಗಳೂರಿನಲ್ಲಿ ಮ್ಯಾರಥಾನ್‌ ನಡೆಯುದರಿಂದ ನಾನು ಭಾಗವಹಿಸಿದ್ದೇನೆ"
ಸಂದೀಪ್‌‌‌, ಎಸ್‌ಎಸ್‌ಜಿಎ ಉದ್ಯೋಗಿ

 ರನ್‌ ರನ್‌ ರನ್‌:

ರನ್‌ ರನ್‌ ರನ್‌:

ವಿಶ್ವ ಮಹಿಳಾ ಮ್ಯಾರಥಾನ್‌ನಲ್ಲಿ ಭಾರತದ ವನಿತೆಯರು ಓಡುತ್ತಿರುವುದು.

 ಹಿರಿಯರ ಓಟ:

ಹಿರಿಯರ ಓಟ:

ಬೆಂಗಳೂರು ಮ್ಯಾರಥಾನ್‌ನಲ್ಲಿ ಉತ್ಸಾಹದಿಂದ ಭಾಗವಹಿಸಿದ ಹಿರಿಯರು

ಕಾರ್ಪೋರೆಟ್‌ ಮ್ಯಾರಥಾನ್‌

ಕಾರ್ಪೋರೆಟ್‌ ಮ್ಯಾರಥಾನ್‌

ಮ್ಯಾರಥಾನ್‌ನಲ್ಲಿ ಭಾಗವಹಿಸಿದ ಬೆಂಗಳೂರಿನ ಸಿಟ್ರಿಕ್ಸ್‌ ಸಂಸ್ಥೆಯ ಉದ್ಯೋಗಿಗಳು

ಕಾರ್ಪೋರೇಟ್‌ ಮ್ಯಾರಥಾನ್‌

ಕಾರ್ಪೋರೇಟ್‌ ಮ್ಯಾರಥಾನ್‌

ಮ್ಯಾರಥಾನ್‌ ಭಾಗವಹಿಸಿದ ಚಂದನ್‌ ಗೌಡ ಮತ್ತು ಅಶ್ವಲ್‌ ರಾವ್‌ (ಹನಿವೇಲ್‌) ಸಂಭ್ರಮಾಚರಣೆ

ಕಾರ್ಪೋರೇಟ್‌ ಮ್ಯಾರಥಾನ್‌

ಕಾರ್ಪೋರೇಟ್‌ ಮ್ಯಾರಥಾನ್‌

ಮ್ಯಾರಥಾನ್‌ನಲ್ಲಿ ಭಾಗವಹಿಸಿದ ಬೆಂಗಳೂರಿನ ಸಿಟ್ರಿಕ್ಸ್‌ ಸಂಸ್ಥೆಯ ಉದ್ಯೋಗಿಲೋಕೇಶ್ ಮತ್ತು ಸ್ನೇಹಿತರು

ಕಾರ್ಪೋರೇಟ್‌ ಮ್ಯಾರಥಾನ್‌

ಕಾರ್ಪೋರೇಟ್‌ ಮ್ಯಾರಥಾನ್‌

ಇನ್‌‌ಫೋಸಿಸ್‌ನ ತೇಜೇಶ್‌ ಹಾಗೂ ಸಂದೀಪ್‌ ರೆಡ್ಡಿ ಸಂಭ್ರಮಾಚರಣೆ

ಕಾರ್ಪೋರೇಟ್‌ ಮ್ಯಾರಥಾನ್‌

ಕಾರ್ಪೋರೇಟ್‌ ಮ್ಯಾರಥಾನ್‌

ಮ್ಯಾರಥಾನ್‌ನಲ್ಲಿ ವಿವಿಧ ವೇಷಗಳನ್ನು ಧರಿಸಿ ಓಡುತ್ತಿರುವುದು.

English summary
Kenyans Geoffrey and Lucy set course record at TCS World 10K. Geoffrey clocked an excellent 27:44 while Kabuu also came up with a brilliant new time of 31:48.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X