ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಂಪೇಗೌಡ ಬಡಾವಣೆ ಫಲಾನುಭವಿಗಳಿಗೆ ಹೊಸ ಆತಂಕ ಶುರು

|
Google Oneindia Kannada News

ಬೆಂಗಳೂರು, ಜೂನ್ 4: ಕೆಂಪೇಗೌಡ ಬಡಾವಣೆಯಲ್ಲಿ ನಿವೇಶನ ಹೊಂದಿರುವವರಿಗೆ ಹೊಸ ಆತಂಕ ಶುರುವಾಗಿದೆ. ನಿವೇಶನ ಹನ ಪಾವತಿಗೆ ಇದ್ದ ಗಡುವು ಮುಗಿದರೂ ಹಣ ನೀಡಲು ಸಾಧ್ಯವಾಗದೇ ಇರುವ ಫಲಾನುಭವಿಗಳಿಗೆ ದಂಡ ಪಾವತಿಸಬೇಕಾದ ಆತಂಕ ಕಾಡುತ್ತಿದೆ.

ಕೆಂಪೇಗೌಡ ಬಡಾವಣೆ: 5 ಸಾವಿರ ಜನರಿಗೆ ಹೊಡೆಯಿತು 'ಲಾಟರಿ'! ಕೆಂಪೇಗೌಡ ಬಡಾವಣೆ: 5 ಸಾವಿರ ಜನರಿಗೆ ಹೊಡೆಯಿತು 'ಲಾಟರಿ'!

ಕಳೆದ ವರ್ಷ ಎರಡನೇ ಹಂತದ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಿತ್ತು. ಹಂಚಿಕೆ ಪತ್ರ ತಲುಪಿದ 60 ದಿನಗಳಲ್ಲಿ ನಿಗದಿಯಾದ ಹಣ ಪಾವತಿಸುವಂತೆ ಸೂಚಿಸಲಾಗಿತ್ತು.

ಸೆ.25ರಂದು ಬಿಡಿಎಯ 5 ಸಾವಿರ ನಿವೇಶನ ಹಂಚಿಕೆ ಸೆ.25ರಂದು ಬಿಡಿಎಯ 5 ಸಾವಿರ ನಿವೇಶನ ಹಂಚಿಕೆ

ಬಳಿಕ ಒತ್ತಡಕ್ಕೆ ಮಣಿದು ಪಾವತಿ ದಿನಾಂಕ ವಿಸ್ತರಿಸಲಾಗಿತ್ತು. ಫಲಾನುಭವಿಗಳ ಕೈಗೆ ಹಂಚಿಕೆ ಪತ್ರ ದೊರೆತು 60 ದಿನಗಳಲ್ಲಿ ನಿವೇಶನಕ್ಕೆ ಹಣ ಪಾವತಿ ಮಾಡಬೇಕು ಎಂಬುದು ಬಿಡಿಎ ಆದೇಶವಾಗಿತ್ತು, ಬಹುತೇಕರು ಬ್ಯಾಂಕ್‌ನಲ್ಲಿ ಸಾಲ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ.

Kempegowda site beneficiaries facing new problem

ಬ್ಯಾಂಕ್ ಸಿಬ್ಬಂದಿ ದಾಖಲೆ ಪರಿಶೀಲನೆ ಮಾಡುತ್ತಿರುವುದರಿಂದ ತಡವಾಗುತ್ತಿದೆ. ಹೀಗಾಗಿ ಫಲಾನುಭವಿಗಳು ಎರಡು ತಿಂಗಳಲ್ಲಿ ಹಣ ಹೊಂದಿಸಿಕೊಳ್ಳುವುದು ಕಷ್ಟವಾಗಿದೆ ಎಂದು ಫಲಾನುಭವಿಗಳು ಹೇಳಿದ್ದಾರೆ.

16 ಕೋಟಿ ವೆಚ್ಚದಲ್ಲಿ ಕೆಂಪೇಗೌಡ ಬಡಾವಣೆ ಅಭಿವೃದ್ಧಿಗೆ ಸಿಎಂ ಚಾಲನೆ 16 ಕೋಟಿ ವೆಚ್ಚದಲ್ಲಿ ಕೆಂಪೇಗೌಡ ಬಡಾವಣೆ ಅಭಿವೃದ್ಧಿಗೆ ಸಿಎಂ ಚಾಲನೆ

ಬಿಡಿಎ ಅಧಿಕಾರಿಗಳು ಸಧ್ಯಕ್ಕೆ ದಂಡ ಪಡೆಯದೆ ಹಣ ಕಟ್ಟಿಸಿಕೊಳ್ಳುತ್ತಿದ್ದಾರೆ ಆದರೆ ಕರಾರು ಪತ್ರದಲ್ಲಿ ದಂಡ ಕಟ್ಟುವಂತೆ ನಮೂದಿಸಲಾಗಿದೆ ಎನ್ನುವುದು ಆತಂಕದ ವಿಷಯವಾಗಿದೆ.

English summary
Government did not not to BDA notification, so Kempegowda site beneficiaries need to pay fine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X