• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೆಂಪೇಗೌಡ ಬಡಾವಣೆ ನಿವೇಶನಕ್ಕೆ ಅರ್ಜಿ ಇಲ್ಲಿ ಸಿಗುತ್ತದೆ

|

ಬೆಂಗಳೂರು, ನವೆಂಬರ್ 02 : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ನಿರ್ಮಿಸುತ್ತಿರುವ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿನ ವಿವಿಧ ಆಳತೆಯ 5 ಸಾವಿರ ನಿವೇಶನಗಳ ಹಂಚಿಕೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಯಾವ ಬ್ಯಾಂಕ್‌ಗಳಲ್ಲಿ ಅರ್ಜಿಗಳು ದೊರೆಯಲಿವೆ ಎಂಬ ಮಾಹಿತಿ ಇಲ್ಲಿದೆ.

ನಿಯಮಗಳು : ಸೂಚಿಸಿರುವ ನೋಂದಣಿ ಶುಲ್ಕವನ್ನು ಪಾವತಿ ಮಾಡಿ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಪಟ್ಟಿ ಮಾಡಿರುವ ಬ್ಯಾಂಕ್‌ನಲ್ಲಿ ಶುಲ್ಕ ಪಾವತಿ ಮಾಡಬೇಕು. ಹೆಸರು ನೋಂದಣಿಯಾದ ನಂತರ ದೊರೆಯುವ ನೋಂದಣಿ ಕಾರ್ಡ್‌ ಅನ್ನು ಇಟ್ಟುಕೊಳ್ಳಬೇಕು. [ನಿವೇಶನದ ದರಗಳ ಮಾಹಿತಿ ಇಲ್ಲಿದೆ]

ಈಗಾಗಲೇ ಹೆಸರು ನೋಂದಣಿ ಮಾಡಿಕೊಂಡವರು ವ್ಯತ್ಯಾಸದ ನೋಂದಣಿ ಶುಲ್ಕವನ್ನು ಪಾವತಿ ಮಾಡಬೇಕು. ಸೂಚಿತ ಬ್ಯಾಂಕ್‌ಗಳಲ್ಲಿ ಅಗತ್ಯ ಶುಲ್ಕಗಳನ್ನು ಪಾವತಿ ಮಾಡಿ ಜೊತೆಗೆ ನೋಂದಣಿ ಕಾರ್ಡ್‌ಅನ್ನು ಹಾಜರು ಪಡಿಸಿ ನಿಗದಿತ ಖಾಲಿ ಅರ್ಜಿಗಳನ್ನು ಪಡೆಯಬೇಕು.

ಆರ್ಥಿಕವಾಗಿ ಹಿಂದುಳಿದವರಿಗೆ/ಪ.ಜಾ/ಪ.ಪಂಗಡದವರಿಗೆ 200 ರೂ., ಇತರ ಎಲ್ಲಾ ವರ್ಗದವರಿಗೆ 400 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ನವೆಂಬರ್ 2ರ ಸೋಮವಾರದಿಂದ ಅರ್ಜಿ ವಿತರಣೆ ಆರಂಭವಾಗಲಿದ್ದು, ಆರಂಭಿಕ ಠೇವಣಿಯ ಜೊತೆ ಅರ್ಜಿಗಳನ್ನು ಸಲ್ಲಿಕೆ ಮಾಡಲು ಕೊನೆಯ ದಿನಾಂಕ ಡಿಸೆಂಬರ್ 31, 2015.

ಅರ್ಜಿಗಳು ಎಲ್ಲಿ ದೊರೆಯುತ್ತವೆ : ಕೆನರಾ ಬ್ಯಾಂಕ್, ಬಿಡಿಎ ಶಾಖೆ, ಕುಮಾರ ಪಾರ್ಕ್ ಪಶ್ಚಿಮ.

ಕಾರ್ಪೋರೇಷನ್ ಬ್ಯಾಂಕ್ : ಕಾರ್ಪೋರೇಷನ್ ಬ್ಯಾಂಕ್ ಕುಮಾರ ಪಾರ್ಕ್ ಪಶ್ಚಿಮ. ಕೆ.ಪಿ.ವೆಸ್ಟ್ ಬ್ಯಾಂಚ್, ಕೆಂಗೇರಿ, ರಾಜರಾಜೇಶ್ವರಿ ನಗರ, ಬನಶಂಕರಿ, ಮಲ್ಲೇಶ್ವರಂ 18 ಕ್ರಾಸ್, ಯಶವಂತಪುರ, ಎಸ್.ಸಿ.ರೋಡ್, ವೈಟ್ ಫೀಲ್ಡ್, ಏರ್‌ಪೋರ್ಟ್ ರಸ್ತೆ, ಇಂದಿರಾ ನಗರ, ಬಾಗಮನೆ ಟೆಕ್ ಪಾರ್ಕ್, ಕೋರಮಂಗಲ, ನಾಗರಭಾವಿ, ರಾಜಾಜಿನಗರ, ಆರ್‌.ಟಿ.ನಗರ, ವಿದ್ಯಾರಣ್ಯಪುರ, ನೆಲಮಂಗಲ, ಎನ್‌.ಟಿ.ರೋಡ್.

ಗ್ರಾಮಾಂತರ ಶಾಖೆಗಳು : ದೊಡ್ಡಬಳ್ಳಾಪುರ, ದೇವನಹಳ್ಳಿ, ಜಿಲ್ಲಾ ಕೇಂದ್ರಗಳು : ಮಂಗಳೂರು ಎಂ.ಜಿ.ರಸ್ತೆ, ಮೈಸೂರು, ಹುಬ್ಬಳ್ಳಿ, ಬೆಳಗಾವಿ, ಶಿವಮೊಗ್ಗ, ಧಾರವಾಡ, ಬಳ್ಳಾರಿ, ಕಾರವಾರ, ಕಲಬುರಗಿ, ವಿಜಯಪುರ, ರಾಯಚೂರು, ದಾವಣಗೆರೆ, ಮಡಿಕೇರಿ, ಉಡುಪಿ, ಕೋಲಾರ, ಮಂಡ್ಯ, ಚಿಕ್ಕಬಳ್ಳಾಪುರ.

ಸ್ಟೇಟ್ ಬ್ಯಾಂಕ್ ಆಫ್ ಮೈಸೂರು : ಸರ್ಪಟೈಂನ್ ರಸ್ತೆ ಶೇಷಾದ್ರಿಪುರಂ, ಹೆಚ್‌.ಆರ್‌.ಬಿ.ಆರ್. ಲೇಔಟ್, ಗಂಗಾನಗರ, ರಾಮಮೂರ್ತಿ ನಗರ, ವೈಟ್ ಫೀಲ್ಡ್, ಕಾಕ್ಸ್ ಟೌನ್, ಶೇಷಾದ್ರಿಪುರಂ, ವೈಯಾಲಿಕಾವಲ್, ಯಲಹಂಕ, ಯಶವಂತಪುರ, ರಾಜಾಜಿನಗರ, ಎಂ.ಎಸ್.ಬಿಲ್ಡಿಂಗ್, ಚಾಮರಾಜಪೇಟೆ, ಹನುಮಂತನಗರ, ಸಿಬಿಎಬಿ ಕಾಂಪ್ಲೆಕ್ಸ್, ವಿಜಯನಗರ, ಎಸ್‌.ಬಿ.ಎಂ.ಕಾಲೋನಿ, ರಾಜರಾಜೇಶ್ವರಿ ನಗರ, ವಿ.ವಿ.ಪುರಂ, ಬನಶಂಕರಿ 2ನೇ ಹಂತ, ಬಿಳೇಕಳ್ಳಿ, ಕೊಡ್ಲು, ಬಸವನಗುಡಿ, ಜುನಗರ, ಎಂ.ಜಿ.ರಸ್ತೆ, ಮಾಧವ ನಗರ.

ಗ್ರಾಮಾಂತರ ಶಾಖೆಗಳು : ದೊಡ್ಡ ಬಳ್ಳಾಪುರ, ದೇವನಳ್ಳಿ. ಜಿಲ್ಲಾ ಕೇಂದ್ರಗಳು : ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ರಾಮನಗರ, ಶಿವಮೊಗ್ಗ, ತುಮಕೂರು, ಬಾಗಲಕೋಟೆ, ಬೆಳಗಾವಿ, ವಿಜಯಪುರ, ಧಾರವಾಡ, ಗದಗ, ಹಾವೇರಿ, ಕಾರವಾರ, ಬಳ್ಳಾರಿ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ಯಾದಗಿರಿ, ಚಾಮರಾಜನಗರ, ಚಿಕ್ಕಮಗಳೂರು, ಮಂಗಳೂರು, ಹಾಸನ, ಮಡಿಕೇರಿ, ಮಂಡ್ಯ, ಮೈಸೂರು, ಉಡುಪಿ.

ಐಸಿಐಸಿಐ ಬ್ಯಾಂಕ್ : ಯಶವಂತಪುರ ಶಾಖೆ, ಬೆಂಗಳೂರು ಕಂಟೋನ್‌ಮೆಂಟ್, ಮಲ್ಲೇಶ್ವರಂ, ಎಂ.ಜಿ.ರಸ್ತೆ, ಎನ್‌.ಆರ್.ರಸ್ತೆ, ಬೆಳ್ಳಂದೂರು, ಇಂದಿರಾನಗರ, ಕೋರಮಂಗಲ, ಮಹದೇವಪುರ, ಹೆಚ್‌.ಆರ್.ಬಿ.ಆರ್.ಬಡಾವಣೆ, ಆರ್‌.ಟಿ.ನಗರ, ಸಹಕಾರ ನಗರ, ಯಶವಂತಪುರ, ಬನಶಂಕರಿ, ಬನ್ನೇರುಘಟ್ಟ ರಸ್ತೆ, ಜಯನಗರ, ವಿಜಯನಗರ

ಜಿಲ್ಲಾ ಕೇಂದ್ರಗಳು : ಮಂಗಳೂರು, ಮಣಿಪಾಲ್, ಮೈಸೂರು, ಚನ್ನಪಟ್ಟಣ, ಹಾವೇರಿ, ಕುಂದಾಪುರ, ದಾವಣಗೆರೆ, ಹಾಸನ, ಬಳ್ಳಾರಿ, ರಾಯಚೂರು, ಹುಬ್ಬಳ್ಳಿ, ಅಥಣಿ, ಬೆಳಗಾವಿ, ಧಾರವಾಡ, ಹಾಸನ, ತುಮಕೂರು, ಹೊಸಪೇಟೆ, ಶಿವಮೊಗ್ಗ

ಆಕ್ಸಿಸ್ ಬ್ಯಾಂಕ್ : ಮೆಜೆಸ್ಟಿಕ್ ಶಾಖೆ, ಎಂ.ಜಿ.ರಸ್ತೆ, ಜಯನಗರ, ಬಸವೇಶ್ವರ ನಗರ, ಯಲಹಂಕ, ಬನಶಂಕರಿ, ಇಂದಿರಾನಗರ, ಕೋರಮಂಗಲ, ಮಲ್ಲೇಶ್ವರಂ, ಕಾಕ್ಸ್‌ಟೌನ್, ಮಾರತ್ತಹಳ್ಳಿ, ಜೆ.ಪಿ.ನಗರ, ಆರ್.ಟಿ.ನಗರ, ವಿಜಯನಗರ, ಚಾಮರಾಜಪೇಟೆ, ರಾಜಾಜಿನಗರ, ಪೀಣ್ಯ, ಸಹಕಾರನಗರ, ಮೆಜೆಸ್ಟಿಕ್, ಹೆಚ್‌.ಎಸ್‌.ಆರ್.ಬಡಾವಣೆ, ಶಾಂತಿನಗರ, ಕಾವೇರಿ ಭವನ, ನಾಗರಭಾವಿ, ಬಸವನಗುಡಿ, ಜೆ.ಸಿ.ರಸ್ತೆ, ಕನ್ನಿಂಗ್ ಹ್ಯಾಮ್ ರಸ್ತೆ.

ಜಿಲ್ಲಾ ಕೇಂದ್ರಗಳು : ಹುಬ್ಬಳ್ಳಿ, ಮಂಗಳೂರು, ಬೆಳಗಾವಿ, ಉಡುಪಿ, ದಾವಣಗೆರೆ, ಕಲಬುರಗಿ

ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ : ಎಸ್.ಬಿ.ಮಾರ್ಕೆಟ್ ಚಿಕ್ಕಪೇಟೆ, ಜೆ.ಸಿ.ರಸ್ತೆ, ಐಟಿಪಿಎಲ್ ಕುಂದನಹಳ್ಳಿ, ಬನ್ನೇರುಘಟ್ಟ ರಸ್ತೆ, ನ್ಯೂ ಗುರುಪ್ಪನಪಾಳ್ಯ, ಡಬಲ್ ರಸ್ತೆ, ಇಂದಿರಾನಗರ, ಹಲಸೂರು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bangalore Development Authority (BDA) has invited applications for sites in the Kempegowda Layout. Applications available at all nationalized banks. Here is a bank list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more