ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಒಂದು ಅರಣ್ಯ ಘಟಕ, ಕಾರ್ಯಗಳು

|
Google Oneindia Kannada News

ಬೆಂಗಳೂರು, ಮೇ 17: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶೀಘ್ರ ಅರಣ್ಯ ಘಟಕವೊಂದನ್ನು ನಿರ್ಮಿಸಲಾಗುತ್ತಿದೆ. ಏರ್‌ಪೋರ್ಟ್‌ಗೆ ಅರಣ್ಯಕ್ಕೆ ಏನು ಸಂಬಂಧ ಅಂತೀರಾ ಮುಂದೆ ಓದಿ..

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಇತ್ತೀಚೆಗೆ ರಕ್ತ ಚಂದನ, ಶ್ರೀಗಂಧ ಉತ್ಪನ್ನಗಳನ್ನು ವಿದೇಶಕ್ಕೆ ಕಳ್ಳಸಾಗಣೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ ಇದಕ್ಕೆ ಕಡಿವಾಣ ಹಾಕಲು ಅರಣ್ಯ ಇಲಾಖೆ ನಿರ್ಧರಿಸಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೇ ಅರಣ್ಯ ಘಟಕವೊಂದನ್ನು ಸ್ಥಾಪಿಸಿ ಸಿಬ್ಬಂದಿಗಳನ್ನು ನೇಮಿಸಲಾಗುತ್ತದೆ.

ವಿಮಾನದಲ್ಲಿ ಗಾಳಿ ಬರುತ್ತಿಲ್ಲ ಎಂದು ಪ್ರಯಾಣಿಕ ಮಾಡಿದ್ದೇನು? ವಿಮಾನದಲ್ಲಿ ಗಾಳಿ ಬರುತ್ತಿಲ್ಲ ಎಂದು ಪ್ರಯಾಣಿಕ ಮಾಡಿದ್ದೇನು?

ವಿಮಾನಗಳ ಮೂಲಕ ಆನೆ ದಂತ, ಅದರ ಉತ್ಪನ್ನಗಳು, ಪ್ರಾಣಿಗಳ ಚರ್ಮ, ಉಗುರು ಸೇರಿ ಹಲವು ಅರಣ್ಯ ಉತ್ಪನ್ನಗಳ ಅಕ್ರಮ ಸಾಗಾಣಿಕೆ ನಡೆಯುತ್ತಿದೆ. ಈ ಕುರಿತು ಅರಣ್ಯ ಇಲಾಖೆಗೆ ಹಲವು ದೂರುಗಳು ಬಂದಿವೆ. ಕೆಲವು ಸಂದರ್ಭದಲ್ಲಿ ವಿಮಾನ ನಿಲ್ದಾಣದಲ್ಲಿರುವ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಪರಿಶೀಲನೆಯ ನಂತರವೂ ಈ ಅಕ್ರಮಗಳು ನಡೆಯುತ್ತಿರುವ ಬಗ್ಗೆ ಅನುಮಾನ ವ್ಯಕ್ತವಾಗಿತ್ತು.

Kempegowda International airport will have Forest wing soon

ಅರಣ್ಯ ಘಟಕಕ್ಕೆ ಇಲಾಖೆಯಿಂದ ಉಪವಲಯ ಅರಣ್ಯ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗುವುದು, ಈ ಅಧಿಕಾರಿಗಳಿಗೆ ಅರಣ್ಯ ಉತ್ಪನ್ನ ಹಾಗೂ ವನ್ಯ ಜೀವಿಗಳಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಇರುತ್ತದೆ, ಅಲ್ಲದೆ ಇಲಾಖೆಯಿಂದ ತರಬೇತಿ ಪಡೆದ ಅಧಿಕಾರಿಗಳು ಇರುತ್ತಾರೆ ಎಂದು ಅರಣ್ಯ ಸಂರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.

English summary
Kempegowda international airport have decided to establish Forest wing to protest valuable trees and its products.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X