ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಏರಿಕೆ

|
Google Oneindia Kannada News

ಬೆಂಗಳೂರು, ಏಪ್ರಿಲ್ 27: ಕೊರೊನಾ ಮೊದಲನೇ ಅಲೆಯ ಹೊಡೆತದ ನಂತರ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಭಾರೀ ಹೆಚ್ಚಳ ಕಂಡಿದೆ.

ಬೆಂಗಳೂರು ಅಂತರಾಷ್ಟ್ರೀಯ ವಿಮಾನ ಲಿಮಿಟೆಡ್ ಬಹಿರಂಗ ಪಡಿಸಿರುವಂತೆ 2020-21 ಕ್ಕೆ ಹೋಲಿಸಿದರೆ, ಈ ಪ್ರಸಕ್ತ ವರ್ಷದಲ್ಲಿ ದೇಶೀಯ ವಿಮಾನ ಪ್ರಯಾಣಿಕರ ಸಂಖ್ಯೆ 45% ರಷ್ಟು ಹೆಚ್ಚಳವಾಗಿದ್ದರೆ, ವಿದೇಶ ಪ್ರಯಾಣ ಮಾಡುವ ಪ್ರಯಾಣಿಕರ ಸಂಖ್ಯೆ 136% ರಷ್ಟು ಹೆಚ್ಚಳವಾಗಿದೆ. ಕೊರೊನಾ ಪೂರ್ವಕ್ಕೂ ಮುನ್ನ ಅಂದರೆ 2019 ರಲ್ಲಿ ಕೇಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 33.65 ಮಿಲಿಯನ್‌ ಜನರು ಓಡಾಟ ನಡೆಸಿದ್ದರು. ಆದ್ರೆ ಕೊರೊನಾ ಮೊದಲನೇ ಅಲೆ ಬಂದಿದ್ದರಿಂದ 2020-21 ರಲ್ಲಿ 10.91 ಮಿಲಿಯನ್‌ಗೆ ಇಳಿಕೆಯಾಗಿತ್ತು. ಸದ್ಯ ಈಗ 2021-22 ರಲ್ಲಿ ವಿಮಾನ ಪ್ರಯಾಣಿಕರ ಸಂಖ್ಯೆ 16.28 ಮಿಲಿಯನ್ ಏರಿಕೆಯಾಗಿದೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಬಿಐಎಎಲ್, ಪ್ರಯಾಣಿಕರ ಸಂಖ್ಯೆ ಹೆಚ್ಚಿಸುವುದಕ್ಕಾಗಿ ಕಳೆದ ವರ್ಷ ವಿಮಾನ ನಿಲ್ದಾದಲ್ಲಿ ವಿಧಿಸಿದ್ದ ಕಠಿಣ ಕ್ರಮಗಳನ್ನು ಸಡಿಲಗೊಳಿಸಿದ್ದೆವು. ಅಲ್ಲದೆ ನಿಲ್ದಾಣದಲ್ಲಿ ಕೊರೊನಾ ಟೆಸ್ಟಿಂಗ್ ಮತ್ತು ವ್ಯಾಕ್ಸಿನೇಷನ್ ಕೂಡ ನೀಡಲಾಗುತ್ತಿತ್ತು. ಇದರಿಂದ ಆರ್ಥಿಕ ಚಟುವಟಿಕೆಯೂ ಕೊಂಚ ಚೇತರಿಕೆ ಕಾಣಲು ಸಾಧ್ಯವಾಗಲು ಕಾರಣವಾಯಿತು ಎಂದು ತಿಳಿಸಿದೆ.

ಸದ್ಯಕ್ಕೆ ವಿಮಾನ ಕಾರ್ಯಾಚರಣೆಯ ಪ್ರಮಾಣ ಕೂಡ ಹೆಚ್ಚಾಗಿದ್ದು, 64% ರಷ್ಟು ಹೆಚ್ಚಾಗಿದೆ. ಒಟ್ಟು 1,48,320 ವಿಮಾನಗಳು ಕಾರ್ಯ ನಿರ್ವಹಿಸಿದ್ದು, ಇದರಲ್ಲಿ 15,482 ಅಂತರಾಷ್ಟ್ರೀಯ ವಿಮಾನಗಳು ಮತ್ತು 1,32,838 ದೇಶಿಯ ವಿಮಾನಗಳು ಸೇರಿವೆ. ಅದರಲ್ಲೂ ಡಿಸೆಂಬರ್ 19,2021 ರಂದು ಅತಿ ಹೆಚ್ಚು ವಿಮಾನ ಕಾರ್ಯಾಚರಣೆಗಳು ದಾಖಲಾಗಿದ್ದು, ಅಂದು ಒಂದೇ ದಿನ 590 ವಿಮಾನಗಳು ಹಾರಾಟ ನಡೆಸಿವೆ. ಮತ್ತೊಂದೆಡೆ ಡಿಸೆಂಬರ್ 24,2021 ರಂದು ಒಂದೇ ದಿನ ಕೇಂಪೆಗೌಡ ವಿಮಾನ ನಿಲ್ದಾಣಕ್ಕೆ 82,022 ಪ್ರಯಾಣಿಕರು ಆಗಮಿಸಿದ್ದರು.

Kempegowda International Airport passengers footfall jumps to 16.28 million last fiscal

ಕಳೆದ ವರ್ಷಕ್ಕೆ ಹೋಲಿಸಿಕೊಂಡರೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವಿಮಾನ ಕಾರ್ಯಾಚರಣೆಯಲ್ಲಿ ಪ್ರಗತಿ ಕಂಡು ಬಂದಿದೆ. ದೆಹಲಿ ಕೊಲ್ಕತ್ತಾ, ಮುಂಬೈ, ಹೈದರಬಾದ್ ಮತ್ತು ಗೋವಾ ಪ್ರಮುಖ ದೇಶಿಯ ಮಾರ್ಗಗಳಿಗೆ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಕಾರ್ಯಾಚರಣೆ ನಡೆಸಲಾಗಿದೆ. ಇದೇ ಅವಧಿಯಲ್ಲೇ 20 ಅಂತಾರಾಷ್ಟ್ರೀಯ ಸ್ಥಳಗಳಿಗೂ ಕಾರ್ಯಾಚರಣೆ ನಡೆಸಲಾಗಿದೆ. ಈ ಮೂಲಕ ಆರ್ಥಿಕ ಚಟುವಟಿಕೆಯನ್ನು ಹೆಚ್ಚಿಸಿಕೊಂಡಿದೆ.

Kempegowda International Airport passengers footfall jumps to 16.28 million last fiscal

ಮುಂಬರುವ ತಿಂಗಳುಗಳಲ್ಲಿ ಹೆಚ್ಚಿನ ವಿಮಾನಯಾನ ಸಂಸ್ಥೆಗಳು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದಲೇ ಕಾರ್ಯಾಚರಣೆ ಮರು ಪ್ರಾರಂಭಿಸುವುದರಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಗತಿ ಕಾಣುವ ನಿರೀಕ್ಷೆಯಿದೆ. ನಿಗದಿತ ಅಂತರಾಷ್ಟ್ರೀಯ ಕಾರ್ಯಾಚರಣೆಗಳು ಮಾರ್ಚ್ 21,2022 ರಿಂದ ಜಾರಿಗೆ ಬಂದಿದ್ದು, ಇದರ ಅನುಸಾರ ವಿಮಾನಯಾನ ಸಂಸ್ಥೆಗಳು ತಮ್ಮ ಪೂರ್ವ ಕೋವಿಡ್ ಅಂತರಾಷ್ಟ್ರೀಯ ನೆಟ್‌ವರ್ಕ್‌ ಅನ್ನು ಮರುಸ್ಥಾಪಿಸಲು ನಿರ್ಧರಿಸಿದೆ, ಅಲ್ಲದೆ ಬೆಂಗಳೂರು ವಿಮಾನ ನಿಲ್ದಾಣದಿಂದ ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದ ವೇಳೆಗೆ ವಿಮಾನಯಾನ ಸಂಸ್ಥೆಗಳು ತಮ್ಮ ಅಂತರಾಷ್ಟ್ರೀಯ ಪೂರ್ವ ಕೋವಿಡ್‌ ತಡೆರಹಿತ ಸ್ಥಳಗಳಿಗೆ ಸೇವೆ ಸಲ್ಲಿಸುವ ನಿರೀಕ್ಷೆಯಿದೆ ಎಂದು ಬಿಐಎಎಲ್ ಪ್ರಕಟಣೆಯಲ್ಲಿ ತಿಳಿಸಿದೆ.

English summary
Kempegowda International Airport saw a big jump in passenger traffic; passengers footfall jumps to 16.28 million last fiscal year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X