ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ವಿಮಾನ ನಿಲ್ದಾಣದ ಒಂದು ರನ್‌ ವೇ ಬಂದ್

|
Google Oneindia Kannada News

ಬೆಂಗಳೂರು, ಜುಲೈ 01 : ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಒಂದು ರನ್‌ ವೇ ಬಂದ್ ಆಗಿದೆ. ಸುಮಾರು 7 ತಿಂಗಳ ಕಾಲ ವಿವಿಧ ಕಾಮಗಾರಿಗಾಗಿ ಉತ್ತರ ರನ್‌ ವೇಯನ್ನು ಬಂದ್ ಮಾಡಲಾಗಿದೆ.

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 2 ರನ್‌ ವೇಗಳಿವೆ. 2019ರಲ್ಲಿ ಎರಡನೇ ರನ್ ವೇ (ದಕ್ಷಿಣ)ನಲ್ಲಿ ವಿಮಾನಗಳ ಹಾರಾಟವನ್ನು ಆರಂಭಿಸಲಾಗಿದೆ. ಪ್ರಸ್ತತು ಉತ್ತರ ರನ್‌ ವೇಯನ್ನು ಜೂನ್ 22ರಿಂದಲೇ ಮುಚ್ಚಲಾಗಿದೆ.

ಜುಲೈ 15ರ ತನಕ ಅಂತರಾಷ್ಟ್ರೀಯ ವಿಮಾನ ಸಂಚಾರ ರದ್ದು ಜುಲೈ 15ರ ತನಕ ಅಂತರಾಷ್ಟ್ರೀಯ ವಿಮಾನ ಸಂಚಾರ ರದ್ದು

ಇದು ಹಳೆಯ ರನ್ ವೇಯಾಗಿದ್ದು ಮೇಲ್ಮೈ ದುರಸ್ತಿ ಮತ್ತು ಸೆಂಟರ್ ಲೈನ್ ದೀಪಗಳನ್ನು ಅಳವಡಿಕೆ ಮಾಡುವ ಕೆಲಸಗಳು ಆರಂಭವಾಗಿವೆ. 2020ರ ಅಂತ್ಯದ ವೇಳೆಗೆ ಎಲ್ಲಾ ಕಾಮಗಾರಿ ಮುಗಿಯುವ ನೀರಿಕ್ಷೆ ಇದೆ.

ಹೊಸ ರಸ್ತೆ ನಿರ್ಮಾಣ; ನೆಲಮಂಗಲ-ಬೆಂಗಳೂರು ವಿಮಾನ ನಿಲ್ದಾಣ ಹೊಸ ರಸ್ತೆ ನಿರ್ಮಾಣ; ನೆಲಮಂಗಲ-ಬೆಂಗಳೂರು ವಿಮಾನ ನಿಲ್ದಾಣ

kia

ಹಳೆ ರನ್‌ ವೇ ಕಾಮಗಾರಿ ಪೂರ್ಣಗೊಳ್ಳುವ ತನಕ 2ನೇ ರನ್‌ವೇಯನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ. ಲಾಕ್ ಡೌನ್ ಪರಿಣಾಮ ವಿದೇಶಿ ವಿಮಾನಗಳ ಹಾರಾಟವಿಲ್ಲ, ಹಲವು ದೇಶಿಯ ವಿಮಾನಗಳು ಮಾತ್ರ ಹಾರಾಟ ನಡೆಸುತ್ತಿವೆ.

ವಂದೇ ಭಾರತ್ ; ಬೆಂಗಳೂರಿಗೆ 7 ವಿಮಾನ ಆಗಮನ ವಂದೇ ಭಾರತ್ ; ಬೆಂಗಳೂರಿಗೆ 7 ವಿಮಾನ ಆಗಮನ

2021ರಲ್ಲಿ ಎರಡೂ ರನ್‌ ವೇಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ. ದುರಸ್ತಿ ಬಳಿಕ ಉತ್ತರ ರನ್‌ ವೇಯಲ್ಲಿನ ಕಾರ್ಯಾಚರಣೆ ಗುಣಮಟ್ಟ ಮತ್ತಷ್ಟು ಸುಧಾರಿಸಲಿದೆ. ಮಂದ ಬೆಳಕು, ಹವಾಮಾನ ವೈಫರಿತ್ಯದ ಪರಿಸ್ಥಿತಿಯಲ್ಲೂ ಎರಡೂ ರನ್‌ವೇಗಳಲ್ಲಿ ಕಾರ್ಯಾಚರಣೆ ನಡೆಸಬಹುದಾಗಿದೆ.

English summary
kempegowda international airport (KIA) old runway closed. Runway will be closed for nearly seven months for various works. 2nd runway will use for flight operation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X