ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ವಿಮಾನ ನಿಲ್ದಾಣದ ಮುಖ್ಯ ರಸ್ತೆ ಜೂ.10 ರಿಂದ ಬಂದ್

|
Google Oneindia Kannada News

ಬೆಂಗಳೂರು, ಜೂನ್ 06 : ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್‌ಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಜೂನ್ 10ರಿಂದ ಬಂದ್ ಆಗಲಿದೆ. ವಿಮಾನ ನಿಲ್ದಾಣದ ಆವರಣದ ಎಲ್ಲಾ ವಾಹನಗಳನ್ನು ಹೊಸ ಆರು ಪಥದ ರಸ್ತೆಗೆ ಬದಲಾಯಿಸಲಾಗುತ್ತದೆ.

ವಿಮಾನ ನಿಲ್ದಾಣದ ಟರ್ಮಿನಲ್‌ಗೆ ಸಂಪರ್ಕಿಸುವ ಮುಖ್ಯ ರಸ್ತೆಯನ್ನು ಅಗಲೀಕರಣ ಮಾಡಲಾಗುತ್ತಿದೆ. ಈಗಿರುವ 4 ಪಥದ ರಸ್ತೆಯನ್ನು 10 ಪಥವಾಗಿ ವಿಸ್ತರಣೆ ಮಾಡಲಾಗುತ್ತದೆ. ಈ ಕಾಮಗಾರಿಯ ಹಿನ್ನಲೆಯಲ್ಲಿ ವಾಹನ ಸಂಚಾರ ಸ್ಥಗಿತಗೊಳ್ಳಲಿದೆ.

ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ದಶಪಥ ರಸ್ತೆ, ಮೆಟ್ರೋ ಮಾರ್ಗ, ವಿಶೇಷತೆಗಳುಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ದಶಪಥ ರಸ್ತೆ, ಮೆಟ್ರೋ ಮಾರ್ಗ, ವಿಶೇಷತೆಗಳು

ವಿಮಾನ ನಿಲ್ದಾಣದಲ್ಲಿ ಈಗ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಪೂರಕವಾಗಿ ರಸ್ತೆಯನ್ನು ಅಗಲೀಕರಣ ಮಾಡಲಾಗುತ್ತಿದೆ. ಇದರಿಂದಾಗಿ ಮುಖ್ಯ ರಸ್ತೆಯಲ್ಲಿ ವಾಹನ ಸಂಚಾರ ಬಂದ್ ಆಗಲಿದ್ದು, ವಾಹನಗಳು ಹೊಸ ಆರುಪಥದ ರಸ್ತೆ ಮೂಲಕ ನಿಲ್ದಾಣಕ್ಕೆ ತೆರಳಬಹುದು.

ಕೆಂಪೇಗೌಡ ಏರ್‌ಪೋರ್ಟ್‌ಗೆ ಗುಲಾಬಿ ಟ್ಯಾಕ್ಸಿಕೆಂಪೇಗೌಡ ಏರ್‌ಪೋರ್ಟ್‌ಗೆ ಗುಲಾಬಿ ಟ್ಯಾಕ್ಸಿ

Kempegowda International Airport main access road closed from June 10

ಜೂನ್ 10 ರಿಂದ ಕಾಮಗಾರಿ ಆರಂಭವಾಗಲಿದ್ದು, ವಾಹನ ಸವಾರರಿಗೆ ಈ ಕುರಿತು ಮಾಹಿತಿ ನೀಡಲಾಗುತ್ತಿದೆ. Main Access Road (MAR) ಕಾಮಗಾರಿ 2021ಕ್ಕೆ ಅಂತ್ಯಗೊಳ್ಳುವ ನಿರೀಕ್ಷೆ ಇದೆ. ಅಲ್ಲಿಯ ತನಕ ಪರ್ಯಾಯ ಮಾರ್ಗದಲ್ಲೇ ಸಂಚಾರ ನಡೆಸಬೇಕಿದೆ.

ಬೆಂಗಳೂರಿನ ಕೆಇಎಲ್‌ಗೆ ಬೆಳಗಾವಿಯಿಂದ ವಿದ್ಯುತ್, ಘಟಕ ಆರಂಭಬೆಂಗಳೂರಿನ ಕೆಇಎಲ್‌ಗೆ ಬೆಳಗಾವಿಯಿಂದ ವಿದ್ಯುತ್, ಘಟಕ ಆರಂಭ

ವರ್ಷದಿಂದ ವರ್ಷಕ್ಕೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಭೇಟಿ ನೀಡುವ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದೆ. 2018-19ನೇ ಸಾಲಿನಲ್ಲಿ 33.1 ಮಿಲಿಯನ್ ಜನರು ಭೇಟಿ ನೀಡಿದ್ದಾರೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಶೇ 23.8ರಷ್ಟು ಹೆಚ್ಚು ಪ್ರಯಾಣಿಕರು ಆಗಮಿಸಿದ್ದಾರೆ.

English summary
Kempegowda International Airport (KIA) Bengaluru Main Access Road (MAR) will be closed for traffic from June 10, 2019. Traffic to terminals to be diverted to new South Access Road.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X