ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಕ್ಷಿಣ ಭಾರತದಲ್ಲೇ ವಿಶಿಷ್ಟ ಮೈಲಿಗಲ್ಲು ಸಾಧಿಸಿದ ಕೆಂಪೇಗೌಡ ಏರ್‌ಪೋರ್ಟ್

|
Google Oneindia Kannada News

ಬೆಂಗಳೂರು,ಜನವರಿ 22:ಮಂಜು ಅಥವಾ ಮೋಡಕವಿದ ವಾತಾವರಣವಿದ್ದರೂ ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗದಂತೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಿದ್ಧವಾಗಿದೆ.

ಮೋಡಕವಿದ ವಾತಾವರಣವಿದ್ದಾಗ ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗುವುದು ಸಾಮಾನ್ಯ ಆದರೆ ಈಗ ದಟ್ಟ ಮಂಜಿನಲ್ಲೂ ವಿಮಾನಗಳ ಹಾರಾಟ ನಡೆಸುವ ಸಾಮರ್ಥ್ಯವನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೊಂದಿದೆ.

 ದೆಹಲಿ ಆವರಿಸಿದ ದಟ್ಟ ಮಂಜು; 50ಕ್ಕೂ ಹೆಚ್ಚು ವಿಮಾನಗಳು ವಿಳಂಬ ದೆಹಲಿ ಆವರಿಸಿದ ದಟ್ಟ ಮಂಜು; 50ಕ್ಕೂ ಹೆಚ್ಚು ವಿಮಾನಗಳು ವಿಳಂಬ

ಗುರುವಾರ CAT 3B ಕಂಡೀಷನ್‌ನಲ್ಲಿ ವಿಮಾನವು ಲ್ಯಾಂಡಿಂಗ್ ಆಗಿದೆ. ಈ ಮೂಲಕ ಕೆಟಗರಿ 3ಬಿ ಮೇಲ್ದರ್ಜೆಗೇರಿದ ದಕ್ಷಿಣ ಭಾರತದ ಏಕೈಕ ವಿಮಾನ ನಿಲ್ದಾಣ ಎಂಬ ಖ್ಯಾತಿಗೆ ಪಾತ್ರವಾಗಿದೆ.

Kempegowda International Airport Logs First Successful Landing After Visibility Upgrade

ಕೆಂಪೇಗೌಡ ಏರ್‌ಪೋರ್ಟ್ ಬೆಂಗಳೂರು ದಕ್ಷಿಣ ರನ್‌ ವೇ ಈಗ ಕೆಟಗರಿ 3ಬಿ ಮೇಲ್ದರ್ಜೆಗೇರಿದೆ. ಈ ಹಿಂದೆ ವಿಮಾನ ನಿಲ್ದಾಣದಲ್ಲಿ ದಟ್ಟ ಮಂಜು ಕವಿದಾಗ ಹವಾಮಾನ ವೈಪರಿತ್ಯದಿಂದ ಮಂದ ಬೆಳಕು ಇದ್ದರೆ ರನ್‌ವೇಯಲ್ಲಿ ವಿಮಾನಗಳ ಲ್ಯಾಂಡಿಂಗ್ ಮತ್ತು ಟೇಕ್‌ ಆಫ್ ಮಾಡಲು ಸಾಧ್ಯವಾಗುತ್ತಿರಲಿಲ್ಲ.

ಹವಾಮಾನ ವೈಪರಿತ್ಯವಿದ್ದಾಗ ವಿಮಾನಗಳನ್ನು ಬೇರೆ ವಿಮಾನ ನಿಲ್ದಾಣಕ್ಕೆ ಕಳುಹಿಸಲಾಗುತ್ತಿತ್ತು. ಇದೀಗ ಕೆಂಪೇಗೌಡ ಏರ್‌ಪೋರ್ಟ್ ಸಹ 3ಬಿ ಕೆಟಗರಿಗೆ ಸೇರಿದೆ.

ವಿಮಾನಗಳು ಇಳಿಯಲು ಉನ್ನತ ಮಟ್ಟದ ವ್ಯವಸ್ಥೆ, ವಿಮಾನದ ರನ್‌ ವೇ ಮತ್ತು ಸುತ್ತಲಿನ ಪ್ರದೇಶದಲ್ಲಿ ಏರ್‌ಫೀಲ್ಡ್ ಗ್ರೌಂಡ್ ಲೈಟ್ , ಬೆಳಕಿನ ವ್ಯವಸ್ಥೆ, ಇದಲ್ಲದೆ ಟ್ರ್ಯಾನ್ಸ್‌ಮಿಸ್ಸೊ ಮೀಟರ್, ಸ್ವಯಂ ಚಾಲಿತ ಹವಾಮಾನ ನಿರೀಕ್ಷಣಾಲಯ, ಮೇಲ್ಮೈ ಚಲನೆಯ ರಾಡಾರ್ ಈ ಸೌಲಭ್ಯಗಳು ವಿಮಾನ ನಿಲ್ದಾಣದಲ್ಲಿ ಇರಲಿದೆ.

Recommended Video

ಕರ್ನಾಟಕ: ಶಿವಮೊಗ್ಗ ದುರಂತ, ಉನ್ನತ ಮಟ್ಟದ ತನಿಖೆಗೆ ಸಿಎಂ ಆದೇಶ | Oneindia Kannada

ಈ ವ್ಯವಸ್ಥೆಯಲ್ಲಿ 50 ಮೀಟರ್ ರನ್‌ ವೇ ವಿಶುವಲ್ಸ್ ಇದ್ದರೂ ವಿಮಾನ ಇಳಿಸಬಹುದು ಮತ್ತು 125 ಮೀಟರ್ ರನ್‌ ವೇ ವಿಶುವಲ್ಸ್ ರೇಂಜ್‌ನಲ್ಲೂ ವಿಮಾನ ಹಾರಲಿದೆ. ಇದುವರೆಗೆ ವಿಮಾನ ಕೆಳಗಿಳಿಯಲು 550 ಮೀಟರ್ ಮತ್ತು ಹಾರಲು 300 ಮೀಟರ್ ವಿಶುವಲ್ಸ್ ರೇಂಜ್‌ಗೆ ಪರವಾನಗಿ ಇತ್ತು.

English summary
Bengaluru airport on Thursday saw its first landing under CAT IIIB conditions, which guarantees enhanced visibility for take-offs and touchdowns. An Indigo flight from Lucknow touched down successfully in the morning, said the airport authorities.:
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X