ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ; ಎರಡನೇ ರನ್ ವೇ ಆರಂಭ

By ಇಂದ್ರೇಶ್
|
Google Oneindia Kannada News

ಬೆಂಗಳೂರು, ಡಿಸೆಂಬರ್ 7: ದೇಶದ ಅತ್ಯಂತ ಹೆಚ್ಚು ಪ್ರಯಾಣಿಕರು ಬಂದು ಹೋಗುವ ವಿಮಾನ ನಿಲ್ದಾಣಗಳಲ್ಲಿ ಒಂದಾಗಿರುವ ಸಿಲಿಕಾನ್ ಸಿಟಿ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಹಿರಿಮೆಗೆ ಮತ್ತೊಂದು ಗರಿ ಮೂಡಿದೆ. 2019ರ ಡಿಸೆಂಬರ್ 6ರ ಸಂಜೆ 4.37ಕ್ಕೆ ಈ ವಿಮಾನ ನಿಲ್ದಾಣ ಹೊಸದಾದ ಮೈಲಿಗಲ್ಲನ್ನು ಸ್ಥಾಪಿಸಿದೆ.

ಇಲ್ಲಿನ ದಕ್ಷಿಣ ಭಾಗಕ್ಕಿರುವ ಎರಡನೇ ರನ್ ವೇ ಕಾರ್ಯಾರಂಭ ಮಾಡುವ ಮೂಲಕ ಈ ಹೊಸ ಮೈಲಿಗಲ್ಲನ್ನು ಸ್ಥಾಪಿಸಿತು. 4000 ಮೀಟರ್ ಉದ್ದ ಮತ್ತು 45 ಮೀಟರ್ ಗಳಷ್ಟು ಅಗಲವಿರುವ ಈ ಹೊಸ ಏರ್ ಸ್ಟ್ರಿಪ್ ನಿಂದ ಮೊದಲ ವಿಮಾನ ಸಂಜೆ 4.37ಕ್ಕೆ ಟೇಕಾಫ್ ಆಗುವ ಮೂಲಕ ದೇಶದಲ್ಲಿ ಪರ್ಯಾಯ ರನ್ ವೇಗಳನ್ನು ಸ್ವತಂತ್ರವಾಗಿ ನಿರ್ವಹಣೆ ಮಾಡುವ ಮೊದಲ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಬೆಂಗಳೂರಿನ ಈ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪಾತ್ರವಾಗಿದೆ.

ಮುಂಬೈಯನ್ನು ಹಿಂದಿಕ್ಕಲಿದೆ ಬೆಂಗಳೂರು ವಿಮಾನ ನಿಲ್ದಾಣಮುಂಬೈಯನ್ನು ಹಿಂದಿಕ್ಕಲಿದೆ ಬೆಂಗಳೂರು ವಿಮಾನ ನಿಲ್ದಾಣ

ಮುಂಬೈ ವಿಮಾನ ನಿಲ್ದಾಣವನ್ನು ಹಿಂದೆ ಸರಿಸಿ ದೇಶದ ಎರಡನೇ ಅತಿ ಹೆಚ್ಚು ಪ್ರಯಾಣಿಕರ ದಟ್ಟಣೆ ಹೊಂದಿದ ವಿಮಾನ ನಿಲ್ದಾಣವಾಗುವತ್ತ ಹೆಜ್ಜೆ ಇಟ್ಟಿದೆ. ಇದುವರೆಗೆ ಒಂದೇ ರನ್ ವೇಯಲ್ಲಿ ಅತಿ ಹೆಚ್ಚು ವಿಮಾನಗಳ ಹಾರಾಟ ಮತ್ತು ಇಳಿಯುವ ಚಟುವಟಿಕೆಗಳನ್ನು ನಿರ್ವಹಣೆ ಮಾಡುತ್ತಿದ್ದ ಏಕೈಕ ವಿಮಾನ ನಿಲ್ದಾಣ ಎಂಬ ಖ್ಯಾತಿ ಪಡೆದಿತ್ತು.

Kempegowda International Airport Launched Second Runway To South

ಇದೀಗ ಎರಡನೇ ರನ್ ವೇ ಕಾರ್ಯಾರಂಭ ಮಾಡಿರುವುದರಿಂದ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರರಾಷ್ಟ್ರೀಯ ವಿಮಾನನಿಲ್ದಾಣವನ್ನು ಹಿಂದೆ ಸರಿಸಲಿದೆ. ಈ ವಿಮಾನ ನಿಲ್ದಾಣದಿಂದ ಇನ್ನೂ ಹೆಚ್ಚು ವಿಮಾನಗಳು ಕಾರ್ಯ ನಿರ್ವಹಿಸಲಿವೆ. ಇದುವರೆಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಪ್ರತಿದಿನ 731 ವಿಮಾನಗಳನ್ನು ನಿರ್ವಹಣೆ ಮಾಡುತ್ತಿತ್ತು. ಅವುಗಳ ನಿರ್ವಹಣೆ ಒತ್ತಡದಾಯಕವಾಗಿತ್ತು. ಆದಾಗ್ಯೂ, ಇದ್ದ ಒಂದೇ ರನ್ ವೇಯಲ್ಲಿ ಇಷ್ಟೊಂದು ಪ್ರಮಾಣದ ವಿಮಾನಗಳನ್ನು ನಿಯಂತ್ರಣ ಮಾಡುವ ಮೂಲಕ ವಿಶ್ವದ ಅತ್ಯಂತ ದಟ್ಟಣೆ ಇರುವ ರನ್ ವೇ ಎಂಬ ಹೆಗ್ಗಳಿಕೆಯನ್ನೂ ಹೊಂದಿತ್ತು.

ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಪ್ರಯಾಣಿಸುವಾಗ ಎಚ್ಚರ! ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಪ್ರಯಾಣಿಸುವಾಗ ಎಚ್ಚರ!

ಈ ವಿಮಾನ ನಿಲ್ದಾಣದ ವಾರ್ಷಿಕ ಅಭಿವೃದ್ಧಿ ದರವು ಶೇ.22ರಷ್ಟಿದ್ದು, ಹಾಲಿ ಇರುವ ರನ್ ವೇ ಮೂಲಕ ಪ್ರತಿ ಗಂಟೆಗೆ 34 ವಿಮಾನಗಳ ಹಾರಾಟ ಮತ್ತು ಇಳಿಯುವಿಕೆ ಚಟುವಟಿಕೆಗಳಿಗೆ ಅವಕಾಶವಿತ್ತು. ಇದೀಗ ಎರಡನೇ ರನ್ ವೇ ಕಾರ್ಯಾರಂಭ ಮಾಡಿರುವುದರಿಂದ ವಿಮಾನಗಳ ಹಾರಾಟ ಮತ್ತು ಇಳಿಯುವಿಕೆ ಪ್ರಮಾಣದಲ್ಲಿ ಗಣನೀಯ ಹೆಚ್ಚಳವಾಗುವ ನಿರೀಕ್ಷೆಗಳಿವೆ.

ಈಗ ಎರಡೂ ರನ್ ವೇಗಳು ಕಾರ್ಯಾಚರಣೆ ನಡೆಸುತ್ತಿರುವುದರಿಂದ ವಾರ್ಷಿಕವಾಗಿ ಸುಮಾರು 6 ಕೋಟಿಯಷ್ಟು ಪ್ರಯಾಣಿಕರು ಪ್ರಯಾಣಿಸಬಹುದು ಎಂದು ಅಂದಾಜಿಸಲಾಗಿದೆ.

English summary
Kempegowda International Airport in Bengaluru has set a new milestone by launching its second runway to the south,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X