ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 14 ವರ್ಷದಲ್ಲಿ 25 ಕೋಟಿ ಪ್ರಯಾಣಿಕರು

|
Google Oneindia Kannada News

ಬೆಂಗಳೂರು, ಜೂ. 30: ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಆರಂಭವಾದ ವರ್ಷ 2008ರಿಂದ 2022ರ ಜೂನ್ ಕೊನೆಯ ವಾರಾಂತ್ಯದ ವೇಳೆಗೆ ಒಟ್ಟು 250 ಮಿಲಿಯನ್ (25 ಕೋಟಿ) ಪ್ರಯಾಣಿಕರಿಗೆ ಸೇವೆ ನೀಡಿ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದೆ.

ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾಣ ನಿಲ್ದಾಣ (ಕೆಐಎಎಲ್)ದಿಂದ ಕಳೆದ 14ವರ್ಷದಲ್ಲಿ ಎರಡು ಮಿಲಿಯನ್ ನಷ್ಟು ವಾಯ ಸಂಚಾರ (ವಿಮಾನ ಹಾರಾಟ) ಆಗಿದ್ದು, ಇದರಡಿ ಪ್ರಯಾಣಿಸಿದವರ ಸಂಖ್ಯೆ ಒಟ್ಟು 25 ಕೋಟಿ ಆಗಿದೆ. ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ಜತೆಯಾಗಿ ಅತ್ಯಧಿಕ ಪ್ರಯಾಣಿಕರಿಗೆ ಸೇವೆ ನೀಡಿರುವ ದಕ್ಷಿಣ ಭಾರತದಲ್ಲೇ ಅತಿ ವೇಗವಾಗಿ ಸಾಧನೆ ಮಾಡಿದ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆ ಕೆಐಎಎಲ್ ಪಾತ್ರವಾಗಿದೆ.

ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾಣ ನಿಲ್ದಾಣದಿಂದ ಇತರೆಡೆಗೆ ಹೊಸ ಮಾರ್ಗಗಳ ಸೇರ್ಪಡೆ ಮಾಡಲಾಗಿದೆ. ಈಗಾಗಲೇ ಅಸ್ಥಿತ್ವದಲ್ಲಿರುವ ಮಾರ್ಗಗಳಿಗೆ ತೆರಳುವ ಪ್ರಯಾಣಿಕರ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ. ಈ ಕಾರಣದಿಂದ ವೇಗವಾಗಿ ಇಷ್ಟೊಂದು ಪ್ರಮಾಣದ ಪ್ರಯಾಣಿಕರಿಗೆ ಸೇವೆ ಕಲ್ಪಿಸಲು ಸಾಧ್ಯವಾಗಿದೆ ಎಂದು ಕೆಐಎ ಮೂಲಗಳು ತಿಳಿಸಿವೆ.

14ವರ್ಷದ ಹಿಂದೆ ಆರಂಭ

14ವರ್ಷದ ಹಿಂದೆ ಆರಂಭ

ಬೆಂಗಳೂರು ಹೃದಯ ಭಾಗದಿಂದ ಅಂದಾಜು 30ಕಿ.ಮೀ. ದೂರದಲ್ಲಿರುವ ದೇವನಹಳ್ಳಿಯಲ್ಲಿ 2018ರ ಮೇ 23 ರಾಜ್ಯದ ಮೊದಲ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಕೆಐಎಲ್ ತನ್ನ ಸೇವೆ ಆರಂಭಿಸಿತು. ಇದಾದ ಬಳಿಕ ವಿಮಾನ ನಿಲ್ದಾಣಕ್ಕೆ ಮತ್ತು ಬೆಂಗಳೂರಿನ ಮೆಜೆಸ್ಟಿಕ್ ಹಾಗೂ ಇನ್ನಿತರ ಭಾಗಗಳಲ್ಲಿ ಬಿಎಂಟಿಸಿ, ಹವಾ ನಿಯಂತ್ರಿತ ಬಸ್‌ಗಳು ಸಹ ಓಡಾಡಲು ಆರಂಭಿಸಿದವು. ಈಗಲೂ ಹತ್ತು ನಿಮಿಷಕ್ಕೆ ಒಂದರಂತೆ ಬಸ್‌ಗಳು ಏರ್ಪೋರ್ಟ್ ಗೆ ಸಂಚರಿಸುತ್ತವೆ. ಆ ಮಟ್ಟಿನಲ್ಲಿ ಪ್ರಯಾಣಿಕರು ಕೆಐಎ ಸೇವೆ ಪಡೆಯುತ್ತಿವೆ ಎನ್ನಬಹುದು.

ನಿಧಾನ ಕಾಲದಲ್ಲೂ ವೇಗದ ಸಾಧನೆ:

ನಿಧಾನ ಕಾಲದಲ್ಲೂ ವೇಗದ ಸಾಧನೆ:

ಭಾರತ ಮತ್ತು ರಾಜ್ಯ ರಾಜಧಾನಿ ಬೆಂಗಳೂರಿಗೆ ಕೋವಿಡ್ ಒಕ್ಕರಿಸದ ಬಳಿಕ ಕೆಲವು ದಿನ ಅಂತಾರಾಷ್ಟ್ರೀಯ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಕೋವಿಡ್ ಪಿಡುಗಿನ ನಿಧಾನಗತಿಯ ಅವಧಿಯಲ್ಲಿ ಸಹ ಸುಮಾರು ಕೋಟಿಗಟ್ಟಲೆ ಜನರು ವಿಮಾನಯಾನ ಮಾಡಿದ್ದಾರೆ.

ಹೀಗೆ ನಿಧಾನಗತಿಯಲ್ಲಿ ಕೆಐಎ ಸಾಗಿದರೂ ಐತಿಹಾಸಿಕ ದಾಖಲೆ ಬರೆದಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾಣ ನಿಲ್ದಾಣ ವೇಗವಾಗಿ ಬೆಳೆಯುತ್ತಿದೆ ಎನ್ನುವುದಕ್ಕೆ ಇದೆ ಸಾಕ್ಷಿಯಾಗಿದೆ. 2018ರ ಒಂದು ವರ್ಷದಲ್ಲಿ 3.23 ಕೋಟಿ ಹಾಗೂ 2019ರಲ್ಲಿ 3.36 ಕೋಟಿ ಪ್ರಯಾಣಿಕರಿಗೆ ಕೆಐಎ ತನ್ನ ಸೇವೆ ನೀಡಿತ್ತು.

ಎಕ್ಸಪ್ರೆಸ್ ಕಾರ್ಗೋ ಟರ್ಮಿನಲ್ ಪರಿಚಯ:

ಎಕ್ಸಪ್ರೆಸ್ ಕಾರ್ಗೋ ಟರ್ಮಿನಲ್ ಪರಿಚಯ:

ಖಾಸಗಿ ವಿಮಾನ ನಿಲ್ದಾಣ ಆಯೋಜಕರಿಗೆ ವಾರ್ಷಿಕ ಶೇ.25ರಷ್ಟು ಸರಕು ನಿರ್ವಹಿಸಲು ನೆರವಾಗುವಂತೆ ಪ್ರಥಮ ಭಾರಿ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾಣ ನಿಲ್ದಾಣದಲ್ಲಿ ಮೀಸಲಾದ ಎಕ್ಸಪ್ರೆಸ್ ಕಾರ್ಗೋ ಟರ್ಮಿನಲ್ ಪರಿಚಯಿಸಲಾಯಿತು. ಇದು ಖಾಸಗಿ ವಿಮಾನ ನಿಲ್ದಾಣ ಆಯೋಜಕರನ್ನು ಸೆಳೆಯುವಲ್ಲಿ ಸಫಲವಾಯಿತು. ಇದರ ಜತೆಗೆ ತನ್ನದೇ ಉತ್ತಮ ಸೇವೆಗಾಗಿ ಅನೇಕ ಪ್ರಶಸ್ತಿ ಪುರಸ್ಕಾರಗಳಿಗೂ ಕೆಐಎ ಪಾತ್ರವಾಗಿದೆ.

ಕೋರಿಯರ್ ಸೇವೆ, ಸರಕು ಸಾಗಾಣೆ ವೇಗ ಹೆಚ್ಚಳ

ಕೋರಿಯರ್ ಸೇವೆ, ಸರಕು ಸಾಗಾಣೆ ವೇಗ ಹೆಚ್ಚಳ

ಏರ್ಪೋರ್ಟ್ ಆಯೋಜಕರಾದ ಬಿಐಎಎಲ್ ಸಂಸ್ಥೆಯು ಎರಡು ಲಕ್ಷ ಚದರ ಅಡಿಯಲ್ಲಿ ಎಕ್ಸಪ್ರೆಸ್ ಕೊರಿಯರ್ ಸಂಸ್ಥೆಗಳಾದ ಡಿಎಚ್ಎಲ್ ಎಕ್ಸಪ್ರೆಸ್ ಮತ್ತು ಫೆಡ್ ಎಕ್ಸ್ ಅನ್ನು ಅಭಿವೃದ್ಧಿ ಪಡಿಸಲಿದೆ. ಎಕ್ಸಪ್ರೆಸ್ ಇಂಡಸ್ಟ್ರಿ ಕೌನ್ಸಿಲ್ ಆಫ್ ಇಂಡಿಯಾವು ಕೊರಿಯರ್ ಕಂಪನಿಗಳಿಗೆ ಈಗಾಗಲೇ ಸದೃಢ ಸೇವೆ ಒದಗಿಸುತ್ತಿದೆ. ಕೋರಿಯರ್ ಸಾಮಾನ್ಯ ಬಳಕೆದಾರರ ಎಕ್ಸಪ್ರೆಸ್ ಟರ್ಮಿನಲ್ ಅನ್ನು ನಿರ್ವಹಿಸುತ್ತಿದೆ. ರಾಜಧಾನಿಯಲ್ಲಿ ಈ ಸಂಸ್ಥೆ ಇಕಾಮರ್ಸ್‌ಗೆ ಉತ್ತೇಜನ ನೀಡುತ್ತಿದೆ.

ಮುಖ್ಯವಾಗಿ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಇತ್ತೀಚೆಗೆ ತನ್ನ ಸರಕು ಸಾಗಾಣಿಕೆ ವ್ಯವಸ್ಥೆಯ ವೇಗ ಹೆಚ್ಚಿಸಿಕೊಂಡಿದೆ. ಹೀಗಾಗಿಯೇ ಏರ್ಪೋರ್ಟ್ ಅನ್ನು ಭಾರತದ ಸರಕು ಸಾಗಾಣೆಯಲ್ಲಿ ಭಾರತದ ಮೊದಲ ಮೆಟ್ರೋ ನಿಲ್ದಾಣ ಎಂದು ಕರೆಯಲಾಗುತ್ತದೆ ಎಂದು ತಿಳಿದು ಬಂದಿದೆ.

Recommended Video

ಉದಯಪುರ್ ಟೈಲರ್ ಹತ್ಯೆ ನಂತರ ಕರ್ನಾಟಕದಲ್ಲಿ ಶುರುವಾಯ್ತು ನನ್ನ ಕತ್ತು ಸೀಳಬೇಡಿ ಅಭಿಯಾನ | Oneindia Kannada

English summary
Bangalore Kempegowda International Airport has Create a new milestone by serving a total of 250 million (25 crore) passengers by the last weekend of June 2022 from the year of its inception in 2008.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X