ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹೊಸ ಸಾಧನೆ ಗರಿ

|
Google Oneindia Kannada News

ಬೆಂಗಳೂರು, ಮಾರ್ಚ್, 18: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ. 100 ಮಿಲಿಯನ್ ಪ್ರಯಾಣಿಕರಿಗೆ ಸೇವೆ ಗೈದ ಸಾಧನೆಯನ್ನು ನಿಲ್ದಾಣ ಮಾರ್ಚ್ 18ಕ್ಕೆ ಪಡೆದುಕೊಂಡಿದೆ.

ಮುಂಬೈನಿಂದ ಜೆಟ್ ಏರ್ ವೇಸ್ ನಲ್ಲಿ ಆಗಮಿಸಿದವಿನಯ್ ಕುಲಕರ್ಣಿ ಅವರೇ 100ನೇ ಮಿಲಿಯನ್ ಪ್ರಯಾಣಿಕ. ಅವರನ್ನು ಕೆಂಪೇಗೌಡ ವಿಮಾನ ನಿಲ್ದಾಣದ ಅಧಿಕಾರಿಗಳು ಸಂಭ್ರಮದಿಂದ ಬರಮಾಡಿಕೊಂಡರು.[ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪರ್ಯಾಯ ರಸ್ತೆ]

bengaluru

ವಿಮಾನ ನಿಲ್ದಾಣಕ್ಕೆ ಇದೊಂದು ವಿಶೇಷ ದಿನ. ಕಳೆದ ಎಂಟು ವರ್ಷಗಳ ನಿರಂತರ ಸೇವೆ ಮೂಲಕ ಇಂಥದ್ದೊಂದು ಸಾಧನೆ ಮಾಡಲಾಗಿದೆ.ನಿಲ್ದಾಣದ ಸಂಘಟಿತ ಶ್ರಮವೇ ಇದಕ್ಕೆಲ್ಲ ಕಾರಣ ಎಂದು ಮ್ಯಾನೆಜಿಂಗ್ ಡೈರೆಕ್ಟರ್ ಜಿ ವಿ ಸಂಜಯ್ ರೆಡ್ಡಿ ತಿಳಿಸಿದರು.[ರಾಜ್ಯದ 5 ವಿಮಾನ ನಿಲ್ದಾಣ ಅಭಿವೃದ್ಧಿ]

2008ರಲ್ಲಿ ಆರಂಭವಾದ ನಿಲ್ದಾಣ ಇಂಥ ಸಾಧನೆಗೆ ಪಾತ್ರವಾಗಿದೆ. ದಿನಕ್ಕೆ ಸರಾಸರಿ 52 ಸಾವಿರ ಜನ ಪ್ರಯಾಣಿಕರು ವಿಮಾನ ನಿಲ್ದಾಣದ ಮೂಲಕ ಹೋಗಿ ಬಂದು ಮಾಡುತ್ತಾರೆ. ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದಲೂ ನಿಲ್ದಾಣ ಪ್ರಮುಖ ಕಾರ್ಯ ನಿರ್ವಹಿಸುತ್ತಿದೆ.

English summary
Bengaluru International Airport Limited (BIAL) today greeted its 100 millionth passenger at the Kempegowda International Airport Bengaluru (KIAB) reaching another historic milestone in less than eight years of operations. This achievement ushered in multiple celebrations at the airport. The 100 millionth passenger Mr. Vinay Kulkarni arriving from Mumbai on Jet Airways 9w394 and was greeted by the airport's management.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X