ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಲಸಂರಕ್ಷಣೆಗೆ ಉತ್ತಮ ನಿದರ್ಶನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ

By ಒನ್‌ಇಂಡಿಯಾ ಡೆಸ್ಕ್
|
Google Oneindia Kannada News

ಬೆಂಗಳೂರು, ಆಗಸ್ಟ್ 02: ಜಲಸಂರಕ್ಷಣೆ ವಿಚಾರದಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (ಕೆಎಎ) ಶೇ 100ರಷ್ಟು ಪ್ರಗತಿ ಸಾಧಿಸಿದ್ದು, ವಿಮಾನ ನಿಲ್ದಾಣದಲ್ಲಿ ಈಗ ನೀರಿನ ಬಳಕೆಗಿಂತ ಮರುಪೂರಣ ಪ್ರಮಾಣ ಹೆಚ್ಚಾಗಿದೆ.

ಜಲ ಸಂರಕ್ಷಣೆಗೆಂದೇ ವಿಮಾನ ನಿಲ್ದಾಣದಲ್ಲಿ ಸಾಕಷ್ಟು ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಕ್ಯಾಂಪಸ್‌ನಲ್ಲಿ ನೀರನ್ನು ಸಂಗ್ರಹಿಸಲು ಹಾಗೂ ಸದುಪಯೋಗಪಡಿಸಿಕೊಳ್ಳಲು 315 ಮಳೆ ನೀರು ಕೊಯ್ಲು ಹೊಂಡಗಳನ್ನು ಅಭಿವೃದ್ಧಿಪಡಿಸಲಾಗಿದೆ. ನೀರಿನ ಉಳಿತಾಯಕ್ಕೆ ಏನೇನು ಸಾಧ್ಯವೋ ಆ ಪ್ರಯತ್ನಗಳನ್ನು ನಡೆಸಲಾಗುತ್ತಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದೇಶಕ್ಕೆ ಮಾದರಿಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದೇಶಕ್ಕೆ ಮಾದರಿ

"ವಿಮಾನ ನಿಲ್ದಾಣದಲ್ಲಿ ಜಲಸಂರಕ್ಷಣೆಯನ್ನು ಸಾಧಿಸಲು ಸಮೀಕ್ಷೆಗಳು, ಸಂಶೋಧನೆಗಳು ಹಾಗೂ ತಜ್ಞರ ಅಭಿಪ್ರಾಯಗಳನ್ನು ದಾರಿಯನ್ನಾಗಿ ಮಾಡಿಕೊಳ್ಳಲಾಯಿತು. ಇದು ಪಾಲಿಕೆ ನೀರಿನ ಮೇಲಿನ ಅವಲಂಬನೆಯನ್ನು ತಗ್ಗಿಸಲು ಕಾರಣವಾಯಿತು. ಸಾವಿರಾರು ಲೀಟರ್ ನೀರಿನ ಸಂರಕ್ಷಣೆಗೆ ಅನುವು ಮಾಡಿಕೊಟ್ಟಿತು. 1.37 ಸೂಚ್ಯಂಕದ ಜಲ ಸಂರಕ್ಷಣೆಯನ್ನು ಸಾಧಿಸಲು ಸಹಕಾರಿಯಾಯಿತು" ಎಂದು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ವಕ್ತಾರ ಮಾಹಿತಿ ನೀಡಿದರು.

Kempegowda International Airport Become 100 Percent Water Positive

ಪ್ರತಿ ದಿನ ಇಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಪ್ರಯಾಣಿಕರು ಬರುತ್ತಾರೆ ಹೋಗುತ್ತಾರೆ. ಹೀಗಾಗಿ ವಿಮಾನ ನಿಲ್ದಾಣದಲ್ಲಿ ಮೂಲಸೌಲಭ್ಯ ಹಾಗೂ ಕಾರ್ಯಾಚರಣೆಗೆ ಮಿಲಿಯನ್‌ ಲೀಟರ್‌ಗಟ್ಟಲೆ ನೀರು ಖರ್ಚಾಗುತ್ತದೆ. ದಿನನಿತ್ಯದ ಈ ನೀರಿನ ಅಗತ್ಯವನ್ನು ಪರಿಗಣಿಸಿದ ಬೆಂಗಳೂರು ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್ ಸಂಸ್ಥೆ ಹಲವು ಯೋಜನೆಗಳನ್ನು ಕೈಗೆತ್ತಿಕೊಂಡಿತು. ಅಂತರ್ಜಲ ಮರುಪೂರಣ, ಕೆರೆ ನೀರು ಮರುಪೂರಣ, ದ್ರವ ಹಾಗೂ ಘನ ತ್ಯಾಜ್ಯ ನಿರ್ವಹಣೆಯಂಥ ಕ್ರಮಗಳನ್ನು ಕೈಗೊಂಡಿತು. ಈ ಮೂಲಕ ಅಂತರ್ಜಲ ಕಲುಷಿತವಾಗುವುದನ್ನು ತಡೆಯುವ ಪ್ರಯತ್ನಗಳು ನಡೆಯಿತು ಎಂದು ವಕ್ತಾರರು ವಿವರಿಸಿದರು.

2.5 ದಶಲಕ್ಷ ಲೀಟರ್ ಸಾಮರ್ಥ್ಯದ ಕೊಳಚೆ ನೀರಿನ ಸಂಸ್ಕರಣಾ ಘಟಕ ಸ್ಥಾಪಿಸಿ ನೀರಿನ ಮರುಬಳಕೆ ಮಾಡಲು ಅಭಿವೃದ್ಧಿಪಡಿಸಲಾಯಿತು. ಇದನ್ನು ನಿಲ್ದಾಣದಲ್ಲಿ ಗಿಡಗಳಿಗೆ ನೀರಾವರಿ, ಹವಾನಿಯಂತ್ರಣ ಹಾಗೂ ಅಗ್ನಿಶಾಮಕದ ಅಗತ್ಯಗಳಿಗಾಗಿ ಬಳಸಲಾಗುತ್ತಿದೆ. ಇಷ್ಟೇ ಅಲ್ಲದೇ ವಿಮಾನ ನಿಲ್ದಾಣದ ಅಭಿವೃದ್ಧಿ ಹೊರತಾಗಿ, ಸಮುದಾಯಕ್ಕೆ ಸುರಕ್ಷಿತ ಕುಡಿಯುವ ನೀರಿನ ಯೋಜನೆಯನ್ನೂ ಕೈಗೊಂಡಿದೆ. ಐದು ಹಳ್ಳಿಗಳಲ್ಲಿ ಮಳೆ ನೀರಿನ ಕೊಯ್ಲು ಘಟಕಗಳನ್ನು ಸ್ಥಾಪಿಸಿದ್ದು, ಇದರಿಂದ ಸುಮಾರು 300 ಕುಟುಂಬಗಳಿಗೆ ನೆರವಾಗುತ್ತಿದೆ.

ನೀರು ವ್ಯರ್ಥವಾಗುವುದನ್ನು ತಪ್ಪಿಸಲು ವಿಮಾನ ನಿಲ್ದಾಣದ ಸಮೀಪವಿರುವ ವಿಸ್ತಾರವಾದ ಜಲಮೂಲ ಬೆಟ್ಟಕೋಟೆ ಕೆರೆಗೆ ಹೆಚ್ಚುವರಿ ನೀರು ಹರಿದುಹೋಗುವಂತೆ ಚರಂಡಿಗಳನ್ನು ನಿರ್ಮಿಸಲಾಗಿದೆ. "ನಾವು ಜವಾಬ್ದಾರಿಯುತವಾಗಿ ನೀರನ್ನು ಬಳಸುವ ಮೂಲಕ ನೀರಿನ ಮರುಬಳಕೆ, ಮರುಪೂರಣ ಮಾಡಿ ಜಲಸಂರಕ್ಷಣೆ ಸಾಧಿಸಿದ್ದೇವೆ" ಎಂದು ಬಿಐಎಎಲ್ ಸಿಇಒ ಹರಿ ಮರಾರ್ ತಿಳಿಸಿದ್ದಾರೆ.

ಈಚೆಗಷ್ಟೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸ್ಮಾರ್ಟ್ ಮಾಡಲಿರುವ ಕುರಿತು ಬೆಂಗಳೂರು ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್ ಪ್ರಕಟಿಸಿತ್ತು. ಡಿಜಿಟಲ್ ಸೇವೆ, ತಂತ್ರಜ್ಞಾನ, ಕಾರ್ಯಾಚರಣೆ ಹಾಗೂ ಗ್ರಾಹಕರ ಸೇವೆಗಳನ್ನು ಮತ್ತಷ್ಟು ಉತ್ತಮಪಡಿಸುವ ನಿಟ್ಟಿನಲ್ಲಿ ಐಬಿಎಂ ಕಂಪನಿಯೊಂದಿಗೆ 10 ವರ್ಷದ ಪಾಲುದಾರಿಕೆ ಒಪ್ಪಂದಕ್ಕೆ ಸಹಿ ಹಾಕಿತ್ತು.
ಭವಿಷ್ಯದಲ್ಲಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ನಿಭಾಯಿಸುವ ಹಾಗೂ ಕಾರ್ಯಾಚರಣೆಯಲ್ಲಿ ಹೊಂದಾಣಿಕೆ ತರುವ ನಿಟ್ಟಿನಲ್ಲಿ ತಂತ್ರಜ್ಞಾನದ ನೆರವು ನೀಡಲಿದೆ ಎಂದು ಘೋಷಿಸಿತ್ತು.

Recommended Video

ಕಾಶಿ ವಿಶ್ವನಾಥ ಕ್ಷೇತ್ರದಲ್ಲಿ ಕೊರೊನಾ ಮರೆತ ಭಕ್ತರು ಮಾಡಿದ್ದೇನು ನೋಡಿ | Oneindia Kannada

ಇದೇ ಮಾರ್ಚ್ ತಿಂಗಳಿನಲ್ಲಿ, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ದಕ್ಷಿಣ ಭಾರತದಲ್ಲೇ ಎರಡು ರನ್‌ವೇಗಳಿರುವ ಮೊದಲ ವಿಮಾನ ನಿಲ್ದಾಣ ಎನ್ನುವ ಖ್ಯಾತಿಗೆ ಪಾತ್ರವಾಗಿತ್ತು. ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣ ದೇಶದಲ್ಲಿ ಕ್ಯಾಟ್‌-3ಬಿ ರನ್‌ವೇ ಹೊಂದಿರುವ ದಕ್ಷಿಣ ಭಾರತದ ಏಕೈಕ ಹಾಗೂ ದೇಶದ 6ನೇ ವಿಮಾನ ನಿಲ್ದಾಣ ಎನಿಸಿಕೊಂಡಿತ್ತು.

English summary
Kempegowda International Airport (KIA) campus has become 100% water positive, replenishing more water than it consumes. Here is more details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X