ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರಯಾಣಿಕರ ಸ್ವಾಗತಕ್ಕೆ ಸಿದ್ಧವಾದ ಬೆಂಗಳೂರು ವಿಮಾನ ನಿಲ್ದಾಣ

|
Google Oneindia Kannada News

ಬೆಂಗಳೂರು, ಮೇ 24 : ದೇಶಿಯ ವಿಮಾನ ಸೇವೆ ಸೋಮವಾರದಿಂದ ಆರಂಭವಾಗಲಿದೆ ಎಂದು ಕೇಂದ್ರ ವಿಮಾನಯಾನ ಸಚಿವರು ಘೋಷಣೆ ಮಾಡಿದ್ದಾರೆ. ಪ್ರಯಾಣಿಕರನ್ನು ಸ್ವಾಗತಿಸಲು ಬೆಂಗಳೂರು ವಿಮಾನ ನಿಲ್ದಾಣ ಸಿದ್ಧವಾಗಿದೆ.

Recommended Video

2ತಿಂಗಳುಗಳ ಬಳಿಕ ಹಾರಾಡುತ್ತಿವೆ ಪ್ರಾದೇಶಿಕ ವಿಮಾನಗಳು | Domestic Flight Resumed | Kalburgi

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಈಗ ವಂದೇ ಭಾರತ್ ಮಿಷನ್ ಅಡಿ ಆಗಮಿಸುವ ವಿಶೇಷ ವಿಮಾನಗಳು ಮಾತ್ರ ಬರುತ್ತಿವೆ.

ದೇಶಿ ವಿಮಾನ ಪ್ರಯಾಣ: ಈ ರಾಜ್ಯಗಳಿಂದ ಬಂದವರಿಗೆ ಕ್ವಾರಂಟೈನ್ ಕಡ್ಡಾಯದೇಶಿ ವಿಮಾನ ಪ್ರಯಾಣ: ಈ ರಾಜ್ಯಗಳಿಂದ ಬಂದವರಿಗೆ ಕ್ವಾರಂಟೈನ್ ಕಡ್ಡಾಯ

ಮೇ 25ರಿಂದ ದೇಶಿಯ ವಿಮಾನ ಸೇವೆ ಆರಂಭವಾಗುತ್ತಿದ್ದು, ಪ್ರಯಾಣಿಕರನ್ನು ಸ್ವಾಗತಿಸಲು ವಿಮಾನ ನಿಲ್ದಾಣ ಸಜ್ಜಾಗಿದೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಸೇರಿದಂತೆ ವಿವಿಧ ನಿಯಮವನ್ನು ಪ್ರಯಾಣಿಕರು ಪಾಲಿಸಬೇಕಿದೆ.

ಸದ್ಯಕ್ಕೆ ರಾಜ್ಯಕ್ಕೆ ದೇಶಿಯ ವಿಮಾನ ಸೇವೆ ಬೇಡ ಎಂದ ತಮಿಳುನಾಡು ಸದ್ಯಕ್ಕೆ ರಾಜ್ಯಕ್ಕೆ ದೇಶಿಯ ವಿಮಾನ ಸೇವೆ ಬೇಡ ಎಂದ ತಮಿಳುನಾಡು

Kempegowda International Airport

ದೆಹಲಿ, ಮುಂಬೈ ಬಳಿಕ ಅತಿ ಹೆಚ್ಚು ಪ್ರಯಾಣಿಕರ ದಟ್ಟಣೆ ಇರುವುದು ಕೆಂಪೇಗೌಡ ವಿಮಾನ ನಿಲ್ದಾಣಲ್ಲಿ. ಕೊರೊನಾ ಹಿನ್ನಲೆಯಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ವಿಮಾನ ನಿಲ್ದಾಣದಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ.

ದೇಶಿಯ ವಿಮಾನ ಸೇವೆ; ಮಾರ್ಗಗಳು 7 ವಿಧವಾಗಿ ವಿಂಗಡನೆ ದೇಶಿಯ ವಿಮಾನ ಸೇವೆ; ಮಾರ್ಗಗಳು 7 ವಿಧವಾಗಿ ವಿಂಗಡನೆ

ವಿಮಾನದಲ್ಲಿ ಪ್ರಯಾಣಿಸುವ ಜನರು 2 ಗಂಟೆ ಮೊದಲು ವಿಮಾನ ನಿಲ್ದಾಣಕ್ಕೆ ತಲುಪಬೇಕು. ಪ್ರಯಾಣಿಕರಿಗೆ ಸಹಾಯಕವಾಗಲು ಬಿಎಂಟಿಸಿಯು ಬಸ್‌ಗಳನ್ನು ಓಡಿಸುತ್ತಿದೆ. ಖಾಸಗಿ ವಾಹನದಲ್ಲಿ ಜನರು ನಿಲ್ದಾಣಕ್ಕೆ ಆಗಮಿಸಲಿದ್ದಾರೆ.

ವಂದೇ ಭಾರತ್ ಮಿಷನ್ ಅಡಿ ವಿಶೇಷ ವಿಮಾನಗಳು ಈಗಾಗಲೇ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿವೆ. ಇದುವರೆಗೂ 13 ವಿಮಾನಗಳು ಬಂದಿವೆ. ಶನಿವಾರ ರಾತ್ರಿ 7.45ಕ್ಕೆ ಸಿಂಗಪುರದಿಂದ 148 ಪ್ರಯಾಣಿಕರು ಆಗಮಿಸಿದ್ದಾರೆ.

English summary
Domestic flight services will open from May 25, 2020. Bengaluru Kempegowda International Airport all set to welcome passengers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X