• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೆಂಪೇಗೌಡ ಪ್ರಶಸ್ತಿ ಮೊತ್ತ ನೆರೆ ಪರಿಹಾರಕ್ಕೆ ನೀಡಿದ ಬಿಬಿಎಂಪಿ

By Nayana
|

ಬೆಂಗಳೂರು, ಸೆಪ್ಟೆಂಬರ್ 5: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 500ಕ್ಕೂ ಹೆಚ್ಚು ಮಂದಿಗೆ ಈ ಸಾಲಿನ ಕೆಂಪೇಗೌಡ ಪ್ರಶಸ್ತಿ ದೊರೆತಿತ್ತು. ಪ್ರಶಸ್ತಿ ಮೊತ್ತವನ್ನು ಸಿಎಂ ನೆರೆ ಪರಿಹಾರ ನಿಧಿಗೆ ನೀಡಲು ಬಿಬಿಎಂಪಿ ನಿರ್ದರಿಸಿದೆ.

ಈ ಬಾರಿ ಕೆಂಪೇಗೌಡ ಪ್ರಶಸ್ತಿ ಹಣವನ್ನು ಕೊಡಗು ಪರಿಹಾರಕ್ಕೆ ಬಳಸಿಕೊಳ್ಳಲು ಪುರಸ್ಕೃತರು ಮನವಿ ಮಾಡಿರುವ ಹಿನ್ನೆಲೆಯಲ್ಲಿ ಬಿಬಿಎಂಪಿಯು ಈ ನಿರ್ಧಾರಕ್ಕೆ ಬಂದಿದೆ. 75ಲಕ್ಷ ಹಣವನ್ನು ನೆರೆ ಪರಿಹಾರ ನಿಧಿಗೆ ನೀಡಲು ನಿರ್ದರಿಸಿದ್ದು, ಗುರುವಾರ ಚರ್ಚೆ ನಡೆಯಲಿದ್ದು ಅಂತಿಮ ನಿರ್ಧಾರವನ್ನು ತಿಳಿಸಲಿದ್ದಾರೆ.

ಸುದೀಪ್, ರಮೇಶ್ ಅರವಿಂದ್ ಸೇರಿ 300 ಮಂದಿ ಸಾಧಕರಿಗೆ ಕೆಂಪೇಗೌಡ ಪ್ರಶಸ್ತಿ ಸುದೀಪ್, ರಮೇಶ್ ಅರವಿಂದ್ ಸೇರಿ 300 ಮಂದಿ ಸಾಧಕರಿಗೆ ಕೆಂಪೇಗೌಡ ಪ್ರಶಸ್ತಿ

ಸಮಾಜ ಸೇವೆ, ಸಾಹಿತ್ಯ, ಚಲನ ಚಿತ್ರ, ಪತ್ರಿಕೋದ್ಯಮ, ವೈದ್ಯಕೀಯ, ರಂಗಭೂಮಿ, ನೃತ್ಯ, ಸಂಗೀತ ಸೇರಿದಂತೆ ವಿವಿಧ ರಂಗದಲ್ಲಿ ಸಾಧನೆ ಮಾಡಿದವರಿಗೆ ಬಿಬಿಎಂಪಿ ಕೆಂಪೇಗೌಡ ಪ್ರಶಸ್ತಿ ನೀಡುತ್ತಾ ಬಂದಿದೆ.

2018ನೇ ಸಾಲಿನ ಕೆಂಪೇಗೌಡ ಪ್ರಶಸ್ತಿಯನ್ನು ಕನ್ನಡದ ಕಲಾವಿದರುಗಳಾದ ರಮೇಶ್ ಅರವಿಂದ್, ದರ್ಶನ್, ಸುದೀಪ್, ಸೃಜನ್ ಲೋಕೇಶ್ ಅವರುಗಳಿಗೆ ಲಭಿಸಿತ್ತು. ಪ್ರಶಸ್ತಿಯು 25ಸಾವಿರ ರೂಪಾಯಿ ನಗದು ಹಾಗೂ ಫಲಕವನ್ನು ಒಳಗೊಂಡಿದೆ ಈ ಮೊತ್ತವನ್ನು ಕೊಡಗು ಪರಿಹಾರ ನಿಧಿಗೆ ನೀಡಲು ಮುಂದಾಗಿದ್ದಾರೆ.

ಖ್ಯಾತ ಕೃಷಿ ತಜ್ಞರಾದ ಪದ್ಮಭೂಷಣ ಮಹದೇವಪ್ಪ, ಖ್ಯಾತ ಚಿತ್ರ ನಟರಾದ ಸುದೀಪ್, ರಮೇಶ್ ಅರವಿಂದ್, ಸೃಜನ್ ಲೋಕೇಶ್, ಖ್ಯಾತ ನಿರ್ದೇಶಕರಾದ ಟಿ ಎನ್ ಸೀತಾರಾಂ, ಬಿ. ಸುರೇಶ್, ಫಸ್ಟ್ ನ್ಯೂಸ್ ಪ್ರಧಾನ ಸಂಪಾದಕರಾದ ಎಸ್. ಹೆಚ್. ಮಾರುತಿ ಹಾಗೂ ಮೆಟ್ರೋ ವಿಭಾಗದ ಮುಖ್ಯಸ್ಥ, ಸೀನಿಯರ್ ಆಯಂಕರ್ ಸೋಮಣ್ಣ ಮಾಚಿಮಾಡ ಸೇರಿದಂತೆ ಇನ್ನೂ ಹಲವು ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿರಿಯ ಪತ್ರಕರ್ತರು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 500ಕ್ಕೂ ಹೆಚ್ಚು ಗಣ್ಯರು 2018ನೇ ಸಾಲಿನ ಕೆಂಪೇಗೌಡ ಪ್ರಶಸ್ತಿಗೆ ಭಾಜನರಾಗಿದ್ದಾರೆ.

English summary
BBMP has decided to donate cash of Kempegowda award which was conferred recently.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X