ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ದಶಪಥ ರಸ್ತೆ, ಮೆಟ್ರೋ ಮಾರ್ಗ, ವಿಶೇಷತೆಗಳು

|
Google Oneindia Kannada News

ಬೆಂಗಳೂರು, ಜೂನ್ 6: ಕೆಂಪೇಗೌಡ ಅಂತಾರಾಷ್ಟ್ರೀಯ ನಿಲ್ದಾಣದಲ್ಲಿ ಶೀಘ್ರವೇ ದಶ ಪಥದ ರಸ್ತೆ ನಿರ್ಮಾಣವಾಗಲಿದೆ.

ಕೆಐಎ ನಿಲ್ದಾಣದ ಆವರಣದಲ್ಲಿ ಮುಖ್ಯ ಸಂಪರ್ಕ ರಸ್ತೆಯನ್ನು ಹತ್ತು ಪಥದ ರಸ್ತೆಯನ್ನಾಗಿಸಲು ನಿರ್ಧರಿಸಲಾಗಿದೆ. ರಸ್ತೆಯ ಮಧ್ಯದಲ್ಲಿ ನೆಲಮಟ್ಟದಲ್ಲಿ ಮೆಟ್ರೋ ರೈಲು ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತಿದೆ. ಕೆಐಎ ಆಡಳಿತ ಮಂಡಳಿ ಯೋಜನೆ ರೂಪಿಸಿಕೊಂಡು ನಿಲ್ದಾಣಕ್ಕೆ ಸಂಬಂಧಿಸಿದಂತೆ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ.

 2021ರಲ್ಲಿ 2ನೇ ಟರ್ಮಿನಲ್ ಪೂರ್ಣ

2021ರಲ್ಲಿ 2ನೇ ಟರ್ಮಿನಲ್ ಪೂರ್ಣ

2021ರಲ್ಲಿ ಕೆಐಎನಲ್ಲಿ ನಿರ್ಮಾಣವಾಗುತ್ತಿರುವ ಎರಡನೇ ಟರ್ಮಿನಲ್ ನಿರ್ಮಾಣ ಕಾರ್ಯ ಪೂರ್ಣಗೊಳ್ಳುತ್ತದೆ. ಪ್ರಯಾಣಿಕರ ವಾಹನ ದಟ್ಟಣೆ ನಿಭಾಯಿಸಲು 4.5 ಕಿ.ಮೀ ದೂರ ಉದ್ದದ 4 ಪಥದ ಎಂಎಆರ್ ಪಥಗಳನ್ನು ದಶಪಥಗಳಿಗೆ ವಿಸ್ತರಿಸಲಾಗುತ್ತಿದೆ.

 ಈಗಿರುವ ರಸ್ತೆಗೆ ಸಮಾನಾಂತರವಾಗಿ ರಸ್ತೆ ನಿರ್ಮಾಣ

ಈಗಿರುವ ರಸ್ತೆಗೆ ಸಮಾನಾಂತರವಾಗಿ ರಸ್ತೆ ನಿರ್ಮಾಣ

ಈಗಿರುವ ರಸ್ತೆಗೆ ಸಮಾನವಾಗಿ ರಸ್ತೆ ನಿರ್ಮಿಸಲಾಗುತ್ತಿದೆ. ಮುಂದಿನ ವಾರದಿಂದ ಹೊಸ ರಸ್ತೆಯಲ್ಲಿ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತದೆ. ರಸ್ತೆಯ ಮಧ್ಯಭಾಗದಲ್ಲಿ ಮೆಟ್ರೋ ರೈಲು ಹಳಿ ಸಾಗುವಂತೆ 32 ಮೀಟರ್ ಅಗಲದ ಜಾಗವನ್ನು ಮೀಸಲಿಡಲಾಗಿದೆ.

ವಿಮಾನದಲ್ಲಿ ಗಾಳಿ ಬರುತ್ತಿಲ್ಲ ಎಂದು ಪ್ರಯಾಣಿಕ ಮಾಡಿದ್ದೇನು? ವಿಮಾನದಲ್ಲಿ ಗಾಳಿ ಬರುತ್ತಿಲ್ಲ ಎಂದು ಪ್ರಯಾಣಿಕ ಮಾಡಿದ್ದೇನು?

 ಎರಡು ಬದಿಯಲ್ಲಿ ತಲಾ ಐದೈದು ಪಥದ ರಸ್ತೆ

ಎರಡು ಬದಿಯಲ್ಲಿ ತಲಾ ಐದೈದು ಪಥದ ರಸ್ತೆ

ಎರಡು ಬದಿಯಲ್ಲಿ ತಲಾ ಐದೈದು ಪಥದ ರಸ್ತೆಯನ್ನು ನಿರ್ಮಾಣ ಮಾಡಲಾಗುತ್ತದೆ. ರಸ್ತೆಯ ಎರಡೂ ಬದಿಗಳಲ್ಲಿ ಹಚ್ಚ ಹಸಿರಿನಿಂದ ಕಂಗೊಳ್ಳಿವಂತೆ ಮಾಡಲಾಗುತ್ತದೆ. ಟರ್ಮಿನಲ್ ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ರಸ್ತೆ ಕಾಮಗಾರಿ ಪೂರ್ಣಗೊಳ್ಳುತ್ತದೆ. ಕಾಮಗಾರಿ ಅವಧಿಯಲ್ಲಿ ನಿಲ್ದಾಣಕ್ಕೆ ಬರುವ ಹೋಗುವ ವಾಹನಗಳಿಗೆ ಯಾವುದೇ ತೊಂದರೆಯಾಗದಂತೆ ಕೆಲಸ ನಿರ್ವಹಿಸಲಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ.

 ಹಾಗಾದರೆ ಮೆಟ್ರೋ ಸಾಗುವುದೆಲ್ಲಿ

ಹಾಗಾದರೆ ಮೆಟ್ರೋ ಸಾಗುವುದೆಲ್ಲಿ

ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ನಮ್ಮ ಮೆಟ್ರೋ ಕಾಮಗಾರಿಗೆ ಭೂಸ್ವಾಧೀನ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ. ಆದರೆ, ನಿಲ್ದಾಣದ ಆವರಣದಲ್ಲಿ ಮೆಟ್ರೋ ಸಂಚರಿಸುವ ಮಾರ್ಗದ ನೀಲನಕ್ಷೆ ಸಿದ್ಧವಾಗಿದೆ. ಬಳ್ಳಾರಿ ರಸ್ತೆಯಲ್ಲಿ ನಗರದ ಕಡೆಯಿಂದ ಎಲಿವೇಡೆಟ್ ಮಾರ್ಗದಲ್ಲಿ ಬಂದು, ಟ್ರಂಪೆಟ್ ಜಂಕ್ಷನ್‌ನಲ್ಲಿ ಎಡತಿರುವು ಪಡೆದು ಒಳ ಪ್ರವೇಶಿಸಿದ ನಂತರ ನಲ ಮಟ್ಟದಲ್ಲಿ ನಮ್ಮ ಮೆಟ್ರೋ ಸಂಚರಿಸಲಿದೆ.

ಕೆಂಪೇಗೌಡ ಏರ್‌ಪೋರ್ಟ್‌ ಸುತ್ತಮುತ್ತಲ ನಿವಾಸಿಗಳಿಗೆ ನಿತ್ಯ ನರಕ ಕೆಂಪೇಗೌಡ ಏರ್‌ಪೋರ್ಟ್‌ ಸುತ್ತಮುತ್ತಲ ನಿವಾಸಿಗಳಿಗೆ ನಿತ್ಯ ನರಕ

English summary
Kempegowda International Airport will get 10 lane roads, Road widening work has been started.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X