ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಂಪೇಗೌಡ ಏರ್‌ಪೋರ್ಟ್‌ನ ಮೊದಲ ರನ್‌ವೇ 8 ತಿಂಗಳು ಬಂದ್

|
Google Oneindia Kannada News

ಬೆಂಗಳೂರು, ಫೆಬ್ರವರಿ 5: ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೊದಲ ರನ್‌ವೇ ಎಂಟು ತಿಂಗಳುಗಳ ಕಾಲ ಸ್ಥಗಿತಗೊಳ್ಳಲಿದೆ.

ರನ್‌ ವೇ (09ಎಲ್‌/27ಆರ್‌)ಯನ್ನು ಮೇಲ್ದರ್ಜೆಗೇರಿಸಲಾಗುತ್ತಿದ್ದು, ಮಾರ್ಚ್ 26ರಿಂದ ನವೆಂಬರ್‌ವರೆಗೆ ರನ್‌ವೇ ಬಂದ್ ಆಗಿರಲಿದೆ.ಈ ಅವಧಿಯಲ್ಲಿಇತ್ತೀಚೆಗೆ ಕಾರ್ಯಾರಂಭಗೊಂಡಿರುವ ನೂತನ ರನ್‌ವೇ '09ಆರ್‌/27 ಎಲ್‌' ಲಭ್ಯವಿರುತ್ತದೆ. ರನ್‌ವೇ ಕಾಮಗಾರಿಯಿಂದ ವಿಮಾನಗಳ ಹಾರಾಟ, ನಿಲ್ದಾಣದ ಕಾರ್ಯಾಚರಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

 ಕೆಂಪೇಗೌಡ ವಿಮಾನ ನಿಲ್ದಾಣದಂತೆ ಕಲಬುರಗಿ ವಿ. ನಿಲ್ದಾಣದ ಅಭಿವೃದ್ದಿ: ಕಪಿಲ್ ಮೋಹನ್ ಕೆಂಪೇಗೌಡ ವಿಮಾನ ನಿಲ್ದಾಣದಂತೆ ಕಲಬುರಗಿ ವಿ. ನಿಲ್ದಾಣದ ಅಭಿವೃದ್ದಿ: ಕಪಿಲ್ ಮೋಹನ್

ಆಂತರಿಕವಾಗಿ ಪಾರ್ಕಿಂಗ್‌, ಟ್ಯಾಕ್ಸಿಂಗ್‌ ಸೇರಿದಂತೆ ಇನ್ನಿತರ ವ್ಯವಸ್ಥೆಯಲ್ಲಿ ಬದಲಾವಣೆಯಾಗಲಿದೆ. ಕಾಮಗಾರಿ ಹಿನ್ನೆಲೆಯಲ್ಲಿ ನಿಲ್ದಾಣವು ಅಗತ್ಯ ಸಿದ್ಧತೆಗಳನ್ನು ನಿಯಮಾನುಸಾರ ಮಾಡಿಕೊಳ್ಳುವ ಕುರಿತು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ನಿರ್ದೇಶನ ನೀಡಿದೆ.

Kempegowda Airport Runway Closed For 8 Months

'09ಎಲ್‌/27ಆರ್‌' ರನ್‌ವೇ ಅನ್ನು ಗೋಚರತೆ ಕಮ್ಮಿ ಇರುವ ಸಂದರ್ಭದಲ್ಲಿ ವಿಮಾನಗಳ ಲ್ಯಾಂಡಿಂಗ್‌ ಮತ್ತು ಟೇಕಾಫ್‌ಗೆ ನೆರವಾಗುವ ಇನ್ಸ್‌ಟ್ರುಮೆಂಟ್‌ ಲ್ಯಾಂಡಿಂಗ್‌ ಸಿಸ್ಟಮ್‌ (ಐಲ್‌ಎಸ್‌) ಕೆಟಗೆರಿ 1ರಿಂದ ಕೆಟಗೆರಿ 3ನೇ ದರ್ಜೆಗೆ ಏರಿಸಲಾಗುತ್ತದೆ. ನೂತನ ರನ್‌ವೇ ಐಎಲ್‌ಎಸ್‌ ಕೆಟಗೆರಿ 3 ಪ್ರಮಾಣಪತ್ರ ಹೊಂದಿದೆ.

ಈ ರನ್‌ ವೇಯನ್ನು 2008 ನಿರ್ಮಿಸಲಾಗಿತ್ತು. ಈ ಪ್ರದೇಶದಲ್ಲಿ ವಿಮಾನಗಳ ಕಾರ್ಯಾಚರಣೆಯನ್ನು ಕೂಡ ಸ್ಥಗಿತಗೊಳಿಸಲಾಗಿದೆ.ಇತ್ತೀಚೆಗಷ್ಟೇ ಎರಡನೇ ರನ್‌ವೇಯನ್ನು ಹೊಸದಾಗಿ ನಿರ್ಮಾಣ ಮಾಡಲಾಗಿದ್ದು, ವಿಮಾನಗಳು ಅಲ್ಲಿಂದಲೇ ಕಾರ್ಯಾಚರಣೆಗೊಳ್ಳಲಿದೆ.

English summary
The first runway of the Kempegowda International Airport will be closed for March 26, 2020 to November 4. 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X