ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅರವಿಂದ್, ವಿಮಾನ ಹೈಜಾಕ್ ಗೆ ಉಗ್ರರ ಸ್ಕೆಚ್

By Mahesh
|
Google Oneindia Kannada News

ಬೆಂಗಳೂರು, ಜ.19: ರಾಷ್ಟ್ರೀಯ ತನಿಖಾ ದಳ (ಎನ್ ಐಎ) ವಶದಲ್ಲಿರುವ ಕುಖ್ಯಾತ ಉಗ್ರ ಹಾಗೂ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಸಹ ಸಂಸ್ಥಾಪಕ ಯಾಸಿನ್ ಭಟ್ಕಳ್ ಬಿಡುಗಡೆಗೆ ಉಗ್ರರು ಹೊಸ ಬೆದರಿಕೆ ಪೂರ್ವಕ ಆಗ್ರಹ ಸಲ್ಲಿಸಿದ್ದಾರೆ. ಭಟ್ಕಳನನ್ನು ಬಿಡುಗಡೆ ಮಾಡದಿದ್ದರೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅಪಹರಣ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಂಡಿಯನ್ ಏರ್ ಲೈನ್ಸ್ ಹೈಜಾಕ್ ಮಾಡಲಾಗುತ್ತದೆ ಎಂದು ಐಎಂ ಉಗ್ರರು ಬೆದರಿಕೆ ಒಡ್ಡಿದ್ದಾರೆ.

ಇಂಡಿಯನ್ ಏರ್ ಲೈನ್ಸ್ ಗೆ ಸೇರಿದ ವಿಮಾನವನ್ನು ಅಪಹರಣ ಮಾಡಲು ರೂಪಿಸಿರುವುದು ಹಾಗೂ ದೆಹಲಿ ಸಿಎಂ ಕೇಜ್ರಿವಾಲ್ ಅವರ ಅಪಹರಣದ ಸಂಚು ರೂಪಿಸಿರುವ ವಿಷಯವನ್ನು ಕೇಂದ್ರ ಗುಪ್ತಚರ ಇಲಾಖೆ ದೃಢಪಡಿಸಿದೆ. ಹೀಗಾಗಿ ಅರವಿಂದ್ ಅವರಿಗೆ ಒದಗಿಸಿರುವ ಜಡ್ ಶ್ರೇಣಿ ಭದ್ರತೆ ಹೆಚ್ಚಿಸಲಾಗುವುದು ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣ ಸ್ಫೋಟ ಪ್ರಕರಣದ ಆರೋಪಿಯೂ ಆಗಿರುವ ಯಾಸಿನ್ ಭಟ್ಕಳನ ವಿಚಾರಣೆಯನ್ನು ಬೆಂಗಳೂರು ಪೊಲೀಸರು ಗೌಪ್ಯಸ್ಥಳವೊಂದರಲ್ಲಿ ಮುಂದುವರೆಸಿದ್ದಾರೆ.

ಎನ್ ಐಎ ವಶದಿಂದ ಭಟ್ಕಳನನ್ನು ವಿಚಾರಣೆ ಸಲುವಾಗಿ ಬೆಂಗಳೂರಿಗೆ ಕರೆಸಿಕೊಳ್ಳಲಾಗಿದೆ. ಜ.28ರ ತನಕ ವಿಚಾರಣೆ ರಹಸ್ಯ ಸ್ಥಳವೊಂದರಲ್ಲಿ ನಡೆಯಲಿದೆ. 2010ರ ಏ.17ರಂದು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಸ್ಫೋಟಕ್ಕೆ ಕ್ಚ್ಚಾವಸ್ತು ಎಲ್ಲಿಂದ ಪೂರೈಕೆಯಾಯಿತು, ಜಿಲೆಟಿನ್ ಕಡ್ಡಿಗಳು, ಹಣ ಪೂರೈಕೆ ಯಾರು ಮಾಡಿದರು, ಸ್ಫೋಟದ ಸ್ಕೆಚ್ ಹಾಕಿದ್ದು ಯಾರು? ಹುಬ್ಬಳ್ಳಿ, ಮಂಗಳೂರು ಮುಂತಾದ ಕಡೆ ಉಗ್ರರ ನೆಟ್ವರ್ಕ್ ಇರುವ ಬಗ್ಗೆ ಕೂಡಾ ಯಾಸಿನ್ ನನ್ನು ಪ್ರಶ್ನಿಸಲಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ ಹೇಳಿದ್ದಾರೆ.[ಚಿತ್ರಗಳಲ್ಲಿ : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ]

Kejriwal may be abducted, KIA Plan Hijack to secure Yasin Bhatkal's release: Sources

ಕೆಐಎಗೆ ಭದ್ರತೆ: ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಕೂಡಲೇ ಹೆಚ್ಚಿನ ಭದ್ರತೆ ಒದಗಿಸಬೇಕೆಂದು ಗುಪ್ತಚರ ಇಲಾಖೆ ಅಧಿಕಾರಿಗಳು ನಾಗರಿಕ ವಿಮಾನಯಾನ ಇಲಾಖೆಗೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೆಚ್ಚುವರಿಯಾಗಿ ಸಿಐಎಸ್ ಎಫ್, ಸಿಆರ್‌ಪಿಎಫ್, ಕೆಎಸ್‌ಆರ್‌ಪಿ ಸೇರಿದಂತೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.

ಈ ಹಿಂದೆ ನೇಪಾಳ ರಾಜಧಾನಿ ಕಠ್ಮಂಡುವಿನಲ್ಲಿ ಇಂಡಿಯನ್ ಏರ್ ಲೈನ್ಸ್ ವಿಮಾನವನ್ನು ಅಪಹರಿಸಿದ ಮಾದರಿಯಲ್ಲೇ ಇಂಡಿಯನ್ ಮುಜಾಹಿದ್ದೀನ್ ಉಗ್ರರು ವಿಮಾನವನ್ನು ಹೈಜಾಕ್ ಮಾಡಲು ಸದ್ದಿಲ್ಲದೆ ಸಂಚು ರೂಪಿಸಿದ್ದಾರೆ ಎಂದು ಭಾನುವಾರ ಗುಪ್ತಚರ ಇಲಾಖೆ ಸೂಚನೆ ಕೊಟ್ಟಿದೆ.

ಭಾನುವಾರ ಬೆಳಗ್ಗೆನಿಂದಲೇ ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ನಿಲ್ದಾಣಕ್ಕೆ ಪ್ರವೇಶ ಮಾಡುವ ಮತ್ತು ಹೊರಹೋಗುವ ಪ್ರಯಾಣಿಕರು, ವಾಹನಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ವಿಮಾನ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ತಿರುಗಾಡುವ ವ್ಯಕ್ತಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ.

ಅಲ್ಲದೆ, ನಗರಕ್ಕೆ ಪ್ರವೇಶ ಮಾಡುವ ಮತ್ತು ಹೊರಹೋಗುವ ವಿಮಾನಗಳನ್ನು ಬಿಗಿ ತಪಾಸಣೆ ನಡೆಸಿಯೇ ಹಾರಾಟಕ್ಕೆ ಅನುಮತಿ ನೀಡಲಾಗುತ್ತಿದೆ. ಇಡೀ ವಿಮಾನ ನಿಲ್ದಾಣವನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ಯಾವುದೇ ಪರಿಸ್ಥಿತಿಯನ್ನು ನಿಭಾಯಿಸಲು ಸನ್ನದ್ಧವಾಗಿರುವಂತೆ ಸೂಚನೆ ಕೊಡಲಾಗಿದೆ. ಬಸ್‌ಗಳು, ಕ್ಯಾಬ್, ಕಾರು ಸೇರಿದಂತೆ ನಿಲ್ದಾಣಕ್ಕೆ ಬಂದು ಹೋಗುವ ವಾಹನಗಳ ಮೇಲೂ ನಿಗಾ ವಹಿಸಲಾಗಿದೆ.

English summary
Delhi Chief Minister Arvind Kejriwal may be abducted and a plane from Kempegowda International Airport Bangalore will be hijacked to demand the release of Indian Mujahideen (IM) co-founder Yasin Bhatkal, sources said on Sunday(Jan.19).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X