ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಇಎ: ವೃತ್ತಿಪರ ಕೌನ್ಸೆಲಿಂಗ್ ಗೆ ಮೊಬೈಲ್ ಆ್ಯಪ್

By Nayana
|
Google Oneindia Kannada News

ಬೆಂಗಳೂರು, ಜನವರಿ 29 : ಮುಂದಿನ ಶೈಕ್ಷಣಿಕ ವರ್ಷದ ಸಾಮಾನ್ಯ ಪ್ರವೇಶ ಪರೀಕ್ಷೆ ವೇಳೆ ಕಾಲೇಜುಗಳ ಆಯ್ಕೆ ಸಂಬಂಧ ಮೊಬೈಲ್ ಅಪ್ಲಿಕೇಷನ್ ಬಿಡುಗಡೆಗೊಳಿಸಿ ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆ ಮತ್ತಷ್ಟು ಸರಳೀಕೃತಗೊಳಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಚಿಂತನೆ ನಡೆಸಿದೆ.

ವಿವಿಧ ವೃತ್ತಿಪರ ಕೋರ್ಸ್ ಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಿಇಟಿ ಪರೀಕ್ಷೆ ವೇಳೆ ಸೀಟ್ ಮೆಟ್ರಿಕ್ಸ್ ಆಯ್ಕೆ ಸಂಬಂಧಿಸಿದಂತೆ ಕಾಲೇಜುಗಳು ಹಾಗೂ ವೃತ್ತಿಗಳ ಆಯ್ಕೆಗೆ ನೆರವಾಗುವಂತೆ ಅಪ್ಲಿಕೇಷನ್ ನ್ನು ಆಂಡ್ರಾಯ್ಡ್ ಫೋನುಗಳಿಗೆ ಶೀಘ್ರ ಬಿಡುಗಡೆ ಮಾಡುವುದಾಗಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

KEA

ಆಪ್ಷನ್ ಎಂಟ್ರಿಯ ಜತೆಗೆ ದಾಖಲೆ ಪರಿಶೀಲನೆಗೂ ಈ ಅಪ್ಲಿಕೇಷನ್ ನಲ್ಲಿ ಅವಕಾಶ ನೀಡಲಾಗಿದೆ. ಇದೇ ಮೊದಲ ಬಾರಿಗೆ ಆ್ಯಂಡ್ರಾಯ್ಡ್ ಮೊಬೈಲ್ ನಲ್ಲಿ ಬರುತ್ತಿರುವ ಈ ಅಪ್ಲಿಕೇಷನ್ ನಿಂದ ವಿದ್ಯಾರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕೇಂದ್ರಗಳಿಗೆ ಬರದೆ ಮನೆಯಲ್ಲಿಯೇ ಕುಳಿತು ಸಿಇಟಿ ಕೌನ್ಸಿಲಿಂಗ್ ಗೆ ಸಂಬಂಧಿಸಿದಂತೆ ಎಲ್ಲಾ ಪ್ರಕ್ರಿಯೆಗಳನ್ನು ಮಾಡಬಹುದಾಗಿದೆ.

ಕಳೆದ ವರ್ಷ 1 ಲಕ್ಷ 80 ಸಾವಿರ ವಿದ್ಯಾರ್ಥಿಗಳು ಸಿಇಟಿ ಮೂಲಕ ಎಂಜಿನಿಯರಿಂಗ್, ಅಗ್ರಿಕಲ್ಚರ್, ಫಾರ್ಮಸಿ ಮತ್ತು ವೆಟರ್ನರಿ ವಿಜ್ಞಾನಕ್ಕೆ ಸಂಬಂಧಿಸಿದ ಕೋರ್ಸ್ ಗಳಿಗೆ ಪ್ರವೇಶ ಪಡೆದಿದ್ದರು. ಈ ಬಾರಿಯೂ ಕೂಡ ೧ ಲಕ್ಷ ೮೦ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಾಮಾನ್ಯ ಪ್ರವೇಶ ಪರೀಕ್ಷೆ ಪಡೆಯುವ ಸಾಧ್ಯತೆಗಳಿವೆ.

ವೃತ್ತಪರ ಕೋರ್ಸ್ ಗಳು ಹಾಗೂ ಕಾಲೇಜುಗಳಿಗೆ ಸಂಬಂಧಿಸಿದ ಮಾಹಿತಿ ಮಾತ್ರವಲ್ಲದೆ, ಆಯಾ ವಿದ್ಯಾರ್ಥಿಗಳ ನೋಂದಣಿ ಹಾಗೂ ಮೂಲ ದಾಖಲೆ ಪರಿಶೀಲನೆ ವೇಳೆಯೂ ಈ ಅಪ್ಲಿಕೇಷನ್ ನಿಂದ ನೆರವಾಗಲಿದೆ.

ಸದ್ಯ ವಿದ್ಯಾರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿಗೆ ಬಂದು ದಾಖಲಾತಿಗಳನ್ನು ಸಲ್ಲಿಸುವ ವ್ಯವಸ್ಥೆ ಇದ್ದು ಮುಂದಿನ ದಿನಗಳಲ್ಲಿ ಅವರ ಮೂಲ ದಾಖಲೆ ಕುರಿತಂತೆ ಅಪ್ಲಿಕೇಷನ್ ಮೂಲಕವೇ ಖಚಿತ ಮಾಹಿತಿ ಪಡೆಯುವ ಸೌಲಭ್ಯ ಲಭ್ಯವಾಗಲಿದೆ.

ವಿದ್ಯಾರ್ಥಿಗಳು ಹಾಗೂ ಕಾಲೇಜು ಶಿಕ್ಷಕರಿಂದ ಪಡೆದ ಮಾಹಿತಿ ಹಾಗೂ ಸಲಹೆಗಳ ಅನುಸಾರ ಈ ವರ್ಷದಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಹೆಚ್ಚು, ಡಿಜಿಟಲ್ ಹಾಗೂ ತಾಂತ್ರಿಕತೆ ಅಳವಡಿಸಿಕೊಳ್ಳಲು ಮುಂದಾಗಿದ್ದು ಅದರ ಭಾಗವಾಗಿ ವಿದ್ಯಾರ್ಥಿಗಳಿಗೆ ಈ ಮೊಬೈಲ್ ಅಪ್ಲಿಕೇಷನ್ ಬಿಡುಗಡೆ ಮಾಡಲಾಗುತ್ತಿದೆ.

English summary
Karnataka Examination Authority is planning to launch a android mobile app for students those will participate in CET for seat matrix and other selection process.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X