ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾವೇರಿ ಆಸ್ಪತ್ರೆಯಲ್ಲಿ ಹೃದಯ ಶಸ್ತ್ರಚಿಕಿತ್ಸೆಗೆ ಹೊಸ ತಂತ್ರಜ್ಞಾನ ಸೇರ್ಪಡೆ

|
Google Oneindia Kannada News

ಬೆಂಗಳೂರು, ಫೆ .19: ವಿವಿಧ ತಂತ್ರಜ್ಞಾನ ಅವಳಡಿಸಿಕೊಂಡು ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಚಿಕಿತ್ಸೆ ನೀಡುತ್ತಿರುವ ಕಾವೇರಿ ಹಾಸ್ಪೆಟಲ್ ಹೃದ್ರೋಗ ಚಿಕಿತ್ಸೆಗಾಗಿ ನೂತನವಾಗಿ ಕಾರ್ಡಿಯಾಕ್ ಕ್ಯಾತ್‍ಲ್ಯಾಬ್' ಕೇಂದ್ರವನ್ನು ನಿರ್ಮಾಣ ಮಾಡಿದೆ. ಈ ಕೇಂದ್ರದ ಉದ್ಘಾಟನೆ ಸಮಾರಂಭವು ಫೆಬ್ರವರಿ 19ರಂದು ಕೋನಪ್ಪನ ಅಗ್ರಹಾರದಲ್ಲಿರುವ ಕಾವೇರಿ ಹಾಸ್ಪೆಟಲ್‍ನಲ್ಲಿ ನಡೆಯಲಿದೆ. ಶ್ರೀ ಜಯದೇವ ಹೃದಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕರಾದ ಡಾ. ಸಿ.ಎನ್. ಮಂಜುನಾಥ್ ಅವರು ಚಾಲನೆ ನೀಡಲಿದ್ದಾರೆ.

ಕಾವೇರಿ ಆಸ್ಪತ್ರೆಯಲ್ಲಿ ಕರ್ತವ್ಯನಿರ್ವಹಿಸುತ್ತಿರುವ ಹಿರಿಯ ಹೃದಯ ತಜ್ಞರಾದ ಡಾ.ಜಿ.ವಿವೇಕ್, ಡಾ.ಗಣೇಶ್ ನಲ್ಲೂರು ಶಿವು ಭಾಗವಹಿಸಲಿದ್ದಾರೆ. ಈ ಇಬ್ಬರು ವೈದ್ಯರು ಹೃದ್ರೋಗ ವಿಷಯದಲ್ಲಿ ಹೆಚ್ಚು ಪರಿಣಿತಿ ಹೊಂದಿದ್ದು, ದೇಶ ಹಾಗೂ ವಿದೇಶದ ಹಲವು ಆಸ್ಪತ್ರೆಗಳ ಲ್ಲಿ ಕಾರ್ಯ ನಿರ್ವಹಿಸಿದ್ದಾರೆ.

ಈ ತಂತ್ರಜ್ಞಾನದಿಂದ ಹೆಚ್ಚಿನ ಗುಣಮಟ್ಟದ ಇಮೇಜ್‍ಗಳನ್ನು ಪಡೆಯಬಹುದಾಗಿದೆ. ಅದರಲ್ಲೂ, ಕಡಿಮೆ ಪ್ರಮಾಣದ ವಿಕಿರಣದ ಬಳಕೆಯಲ್ಲಿ ಎಂಬುದು ಅತ್ಯಂತ ವಿಶೇಷ. ಆಸ್ಪತ್ರೆಗಳ ಸಹಯೋಗದೊಂದಿಗೆ ಹಲವಾರು ವಿಶ್ವ ದರ್ಜೆಯ ವೈದ್ಯರ ಸಲಹೆ ಮೇರೆಗೆ ತಂತ್ರಜ್ಞಾನವನ್ನು ರೂಪಿಸಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಹೃದಯ ಸಂಬಂಧಿ ರೋಗಗಳು ವಿವಿಧ ಸ್ವರೂಪಗಳನ್ನು ಪಡೆದುಕೊಳ್ಳುತ್ತಿದ್ದು, ಇದನ್ನು ಪತ್ತೆ ಮಾಡುವುದೇ ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ಈ ತಂತ್ರಜ್ಞಾನ ಹೆಚ್ಚು ಉಪಕಾರಿಯಾಗಿ ಕೆಲಸ ಮಾಡಲಿದೆ ಹಾಗೂ ಒಂದು ಟಚ್‍ನಲ್ಲಿ ಎಲ್ಲವೂ ದೊರೆಯಲಿದೆ.

Kauvery hospital at konappana agrahara gets new Cardiac Cath Lab

ತಂತ್ರಜ್ಞಾನದ ಮುಖ್ಯಾಂಶಗಳು:

- ಇದು ಹೊಸ ತಂತ್ರಜ್ಞಾನದ ಥೆರಪಿಯಾಗಿದೆ.

- ಹೆಚ್ಚಿನ ಗುಣಮಟ್ಟದ ಇಮೇಜ್ ನೀಡಲಿದೆ

- ಕಡಿಮೆ ರೇಡಿಯೇಷನ್ ಡೋಸ್

- ಟೇಬಲ್ ಸೈಡ್ ಟಚ್ ಸ್ಕ್ರೀನ್

- ಆಂಜಿಯೋಗ್ರಾಂ ಮಾಡಲು ಅನುಕೂಲವಾಗಿದೆ

- ಹೃದಯ ಸಂಬಂಧಿತ ರೋಡ್ ಮ್ಯಾಪಿಂಗ್

- ಹೃದಯ ಅನ್ವೇಷಣೆ

- ಅಡ್ವಾನ್ಸ್ ಮಾರ್ಕರ್ ಟೂಲ್ ಇನ್ ಟಚ್ ಸ್ಕ್ರೀನ್

Recommended Video

18ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ಸಂಭ್ರಮ-ಎಚ್ಡಿಕೆ ವಿರುದ್ಧ ಬೇಸರ ವ್ಯಕ್ತಪಡಿಸಿದ ಅಶ್ವಥ ನಾರಾಯಣ | Oneindia Kannada

ಈ ಕ್ಯಾತ್‍ಲ್ಯಾಬ್‍ನಲ್ಲಿ ಫಿಲಿಪ್ಸ್ ಅಜುರಿಯನ್ -7 M12 (Philips Azurion -7 M12) ಎಂಬ ತಂತ್ರಜ್ಞಾನ ಅವಳಡಿಸಿಕೊಂಡಿದ್ದು, ಆ ಮೂಲಕ ಹೃದಯ ಸಂಬಂಧಿ ರೋಗಗಳಿಗೆ ಅಡ್ವಾನ್ಸ್ ತಂತ್ರಜ್ಞಾನದ ಮೂಲಕ ಶಸ್ತ್ರ ಚಿಕಿತ್ಸೆಯನ್ನು ಮಾಡಬಹುದಾಗಿದೆ. ಫಿಲಿಪ್ಸ್ ಅಜುರಿಯನ್-7 M12 ಎಂಬ ತಂತ್ರಜ್ಞಾನದ ಸಹಾಯದಿಂದ ಶಸ್ತ್ರಚಿಕಿತ್ಸೆ ಮಾಡುವುದರಿಂದ ಹೆಚ್ಚಿನ ನಿಖರತೆ ಸಾಧಿಸಲು ಅನುಕೂಲವಾಗುತ್ತದೆ.

English summary
Kauvery hospital at Konappana Agrahara, Bengaluru gets new Cardiac Cath Lab today Dr C. N Manjunath launched new facility.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X