ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಸ್ತೂರಿ ರಂಗನ್ ವರದಿಗೆ ರಾಜ್ಯ ಸಂಪುಟ ಸಭೆಯಲ್ಲಿ ಭಾರಿ ವಿರೋಧ

|
Google Oneindia Kannada News

ಬೆಂಗಳೂರು, ಜುಲೈ22: ಪಶ್ಚಿಮಘಟ್ಟಗಳ ಪರಿಸರ ಸೂಕ್ಷ್ಮ ವಲಯಕ್ಕೆ ಸಂಬಂಧಿಸಿದಂತೆ ಕೇಂದ್ರ ಪರಿಸರ ಇಲಾಖೆ ನೀಡಿರುವ ಐದನೇ ಅಧಿಸೂಚನೆಗೆ ಆಕ್ಷೇಪಣೆಯನ್ನು ಸಲ್ಲಿಸಲು 60 ದಿನಗಳ ಅವಕಾಶವನ್ನು ಕರ್ನಾಟಕ ರಾಜ್ಯಕ್ಕೆ ನೀಡಲಾಗಿತ್ತು. ಇದೀಗ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ವರದಿಯ ಕುರಿತಾದ ಅಧಿಸೂಚನೆಗೆ ಒಕ್ಕೊರಲಿನಿಂದ ವಿರೋಧ ವ್ಯಕ್ತಪಡಿಸಿದ್ದಾರೆ.

ಪಶ್ಚಿಮ ಘಟ್ಟದ ಪರಿಸರ ಸೂಕ್ಷ್ಮ ವಲಯ ಎಂದು ಕರ್ನಾಟಕ, ಮಹಾರಾಷ್ಟ್ರ, ಗೋವಾ, ತಮಿಳುನಾಡು ಸೇರಿದಂತೆ ರಾಜ್ಯ ಹಲವು ಜಿಲ್ಲೆಗಳ ವ್ಯಾಪ್ತಿಯಲ್ಲಿ ಪ್ರದೇಶವನ್ನು ಗುರುತಿಸಲಾಗಿದೆ. ಮೊದಲು ಗಾಡ್ಗಿಳ್ ವರದಿಯನ್ನು ನೀಡಲಾಗಿತ್ತು. 2011ರಲ್ಲಿ ಇಸ್ರೋ ವಿಜ್ಞಾನಿಯಾಗಿದ್ದ ಕಸ್ತೂರಿ ರಂಗನ್ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗಿತ್ತು. ಈ ವೇಳೆ ನೀಡಲಾಗಿದ್ದ ವರದಿಯನ್ನು ಕಸ್ತೂರಿ ರಂಗನ್ ವರದಿ ಎಂದೇ ಕರೆಯಲಾಗುತ್ತದೆ.

ಕಸ್ತೂರಿರಂಗನ್ ವರದಿಯಲ್ಲಿ ರಾಜ್ಯದ ಶಿವಮೊಗ್ಗ, ಉಡುಪಿ, ಚಾಮರಾಜನಗರ, ಮೈಸೂರು, ಕೊಡಗು, ಉತ್ತರ ಕನ್ನಡ, ಬೆಳಗಾವಿ, ಚಿಕ್ಕಮಗಳೂರು, ಹಾಸನ ಜಿಲ್ಲೆಗಳ ಭೂಪ್ರದೇಶದಗಳು ವ್ಯಾಪ್ತಿಗೆ ಬರುತ್ತದೆ. ರಾಜ್ಯದಲ್ಲಿನ 20,668 ಚದರ ಕಿ.ಮೀ ಒಳಗೊಂಡಿದ್ದು. ಕಸ್ತೂರಿ ರಂಗನ್ ವರದಿಯಂತೆ 37% ಭಾಗವನ್ನು ಪರಿಸರ ಸೂಕ್ಷ್ಮ ವಲಯ ಎಂದು ಗುರುತಿಸಲಾಗಿದೆ. ಈ ವರದಿಯನ್ನು ಒಪ್ಪಿಕೊಂಡರೇ ರಾಜ್ಯದ 1500ಕ್ಕೂ ಹೆಚ್ಚು ಹಳ್ಳಿಗಳಿಗೆ ಸಮಸ್ಯೆಯಾಗಲಿದೆ ಎಂದು ರಾಜ್ಯ ಸಂಪುಟ ಸಭೆಯಲ್ಲಿ ವಿರೋದವನ್ನು ವ್ಯಕ್ತಪಡಿಸಲಾಗಿದೆ.

 ರಾಜ್ಯ ಸಂಪುಟ ಸಭೆಯಲ್ಲಿ ಭಾರಿ ವಿರೋಧ

ರಾಜ್ಯ ಸಂಪುಟ ಸಭೆಯಲ್ಲಿ ಭಾರಿ ವಿರೋಧ

ಕೇಂದ್ರ ಪರಿಸರ ಇಲಾಖೆ ಜುಲೈ 4ರಂದು ಅಧಿಸೂಚನೆಯನ್ನು ಹೊರಡಿಸಿ ಆಕ್ಷೇಪಣೆಯನ್ನು ಸಲ್ಲಿಸಲು 60 ದಿನಗಳ ಕಾಲಾವಕಾಶವನ್ನು ನೀಡಿದೆ. ಕಸ್ತೂರಿ ರಂಗನ್ ವರದಿಯನ್ನು ಆಧರಿಸಿ ಹೊರಡಿಸಿರುವ ಆದೇಶವನ್ನು ಅಧಿಸೂಚನೆಯನ್ನು ಅನುಸರಿಸಿದರೆ ರಾಜ್ಯದ ಕರಾವಳಿ, ಮಲೆನಾಡು, ಪಶ್ಚಿಮ ಘಟ್ಟದ ವ್ಯಾಪ್ತಿಯಲ್ಲಿ ವಾಸಿಸುವ ಜನ ಜೀವನವೇ ಅಸ್ತವ್ಯಸ್ತವಾಗಿ ಬಿಡುತ್ತದೆ ಎಂಬ ಕಾರಣಕ್ಕಾಗಿ ರಾಜ್ಯ ಸಚಿವ ಸಂಪುಟ ಜುಲೈ 22ರಂದು ನಡೆದ ಸಭೆ ಒಮ್ಮತದ ತೀರ್ಮಾನವನ್ನು ಮಾಡಿದ್ದು. ಕೇಂದ್ರಕ್ಕೆ ಎರಡು ಸಲ ಈ ಹಿಂದಿನ ಅವಧಿಯಲ್ಲೂ ವಿರೋಧವನ್ನು ವ್ಯಕ್ತಪಡಿಸಿದ್ದರು. ಮತ್ತೆ 5ನೇ ಸಲ ಅಧಿಸೂಚನೆಯನ್ನು ಹೊರಡಿಸಿರುವುದರಿಂದ ಈ ಅಧಿಸೂಚನೆಯನ್ನು ವಿರೋಧಿಸುವುದಾಗಿ ಸಂಪುಟ ತೀರ್ಮಾನವನ್ನು ಮಾಡಿದೆ.

 ಶಾಸಕರಿಂದಲೂ ವಿರೋದ ವ್ಯಕ್ತವಾಗಿತ್ತು

ಶಾಸಕರಿಂದಲೂ ವಿರೋದ ವ್ಯಕ್ತವಾಗಿತ್ತು

ಕೇಂದ್ರ ಅಧಿಸೂಚನೆಯಂತೆ ಪಾಲನೆಯನ್ನು ಮಾಡಿದರೆ ಮಲೆನಾಡು, ಪಶ್ಚಿಮಘಟ್ಟದ ವ್ಯಾಪ್ತಿಯಲ್ಲಿ ಬದುಕುವ ಜನರ ಬದುಕು ಮೂರಬಟ್ಟೆಯಾಗಲಿದೆ. ಜನರನ್ನು ಒಕ್ಕಲೆಬ್ಬಿಸುವ ಕೆಲಸವಾಗುತ್ತದೆ. ರಸ್ತೆ ಸೇರಿ ಮನೆಗಳನ್ನು ನಿರ್ಮಿಸುವಂತಿಲ್ಲ. ಆಸ್ಪತ್ರೆಗಳನ್ನು ಕಟ್ಟುವಂತಿಲ್ಲ. ರಸ್ತೆ ನಿರ್ಮಾಣ ಮಾಡುವಂತಿಲ್ಲ. 1500ಕ್ಕೂ ಹೆಚ್ಚು ಹಳ್ಳಿಯ ಜನರ ಬದುಕು ಬೀದಿಗೆ ಬೀಳುತ್ತದೆ. ಉದ್ಯಮ ಸ್ಥಾಪನೆಯನ್ನು ಮಾಡಬೇಕಾದ ಕೇಂದ್ರದ ಅನುಮತಿ ಪಡೆಯಬೇಕು. ಜಮೀನು ಮಾಡಬೇಕಾದರೆ ಗೊಬ್ಬರ ಸೇರಿದಂತೆ ಕೆಲವು ಕೆಮಿಕಲ್ ಬಳಸುವಂತಿಲ್ಲ. ಹೀಗೆ ಪಟ್ಟಿಯನ್ನು ಮಾಡಿದರೇ ಜನರು ಬದುಕು ಹಾಳಾಗುವುದು ಖಚಿತವಾಗಲಿದೆ. ಇದರಿಂದಾಗಿಯೇ ಪಶ್ಚಿಮ ಘಟ್ಟ ವ್ಯಾಪ್ತಿಯ ಎಲ್ಲಾ ಶಾಸಕರು ಈ ಅಧಿಸೂಚನೆಯನ್ನು ವಿರೋಧಿಸಿದ್ದರು.

 ಕಸ್ತೂರಿ ರಂಗನ್ ವರದಿ ಅನುಷ್ಟಾನ ಅಸಾಧ್ಯ

ಕಸ್ತೂರಿ ರಂಗನ್ ವರದಿ ಅನುಷ್ಟಾನ ಅಸಾಧ್ಯ

ರಾಜ್ಯ ಸಂಪುಟ ಸಭೆಯಲ್ಲಿ ಪಶ್ಚಿಮಘಟ್ಟಗಳನ್ನು ಕುರಿತಂತೆ ಕೇಂದ್ರ ಪರಿಸರ ಇಲಾಖೆ ಅಧಿಸೂಚನೆಯನ್ನು ವಿರೋಧಿಸಲಾಗಿದೆ. ಅದರಂತೆ ಕೇಂದ್ರ ಪರಿಸರ ಇಲಾಖೆಯ ಸಚಿವರನ್ನು ಮತ್ತು ಪ್ರಧಾನಿಯನ್ನು ಭೇಟಿಯಾಗಿ ತಮ್ಮ ವಿರೋಧವನ್ನು ವ್ಯಕ್ತಪಡಿಸಿ, ಕಸ್ತೂರಿ ರಂಗನ್ ವರದಿ ಅನುಷ್ಟಾನ ಅಸಾಧ್ಯ ಎಂಬುದನ್ನು ಮನವರಿಕೆ ಮಾಡಿಕೊಡುವ ಕೆಲಸವನ್ನು ಮಾಡಲಿದ್ದಾರೆ.

 ಸಂಪುಟ ಸಭೆಯ ನಿಲುವು ತಿಳಿಸಿದ ಸಚಿವರು

ಸಂಪುಟ ಸಭೆಯ ನಿಲುವು ತಿಳಿಸಿದ ಸಚಿವರು

ಸಚಿವ ಸಂಪುಟ ಸಭೆಯಲ್ಲಿ ಪಶ್ಚಿಮಘಟ್ಟಗಳನ್ನು ಕುರಿತಾಗಿ ವಿರೋಧಿಸಿ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ. ರಾಜ್ಯದ ಎಲ್ಲಾ ಸಚಿವರು ಒಮ್ಮತದ ತೀರ್ಮಾನವನ್ನು ಮಾಡಲಾಗಿದೆ. ಶೀಘ್ರದಲ್ಲೇ ಕೇಂದ್ರಕ್ಕೆ ನಿಯೋಗವನ್ನು ತೆಗೆದುಕೊಂಡು ಹೋಗುತ್ತೇವೆ ಎಂದು ಸಚಿವ ಮಾಧುಸ್ವಾಮಿಯವರು ಸ್ಪಷ್ಟಪಡಿಸಿದ್ದಾರೆ.

Recommended Video

ಮೈದಾನದಲ್ಲೇ ಅಯ್ಯರ್ ಮತ್ತು ಶಿಖರ್ ಧವನ್ ಮಸ್ತಿ ಹೇಗಿತ್ತು ನೋಡಿ | *Cricket | OneIndia Kannada

English summary
The Kasturirangan committee report has proposed 37% of the total area of Western Ghats to be declared as Eco-Sensitive Area (ESA).Karnataka state cabinet oppose the report on july 22. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X