ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking: ಲಂಚದ ಹಣ ಹಿಂದಿರುಗಿಸುವಾಗ ಲೋಕಾ ಪೊಲೀಸರ ಬಲೆಗೆ ಬಿದ್ದ ಕೆಎಎಸ್‌ ಅಧಿಕಾರಿಗಳು!

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 21: ಕೆಎಎಸ್‌ ಹಿರಿಯ ಅಧಿಕಾರಿ ಎ.ಬಿ. ವಿಜಯ್ ಕುಮಾರ್ ಮತ್ತು ರಘುನಾಥ್ ಎಂಬುವವರು ಸ್ವೀಕರಿಸಿದ್ದ ಲಂಚದ ಹಣವನ್ನು ದೂರುದಾರರಿಗೆ ಹಿಂದಿರುಗಿಸುವಾಗ ಲೋಕಾಯುಕ್ತ ಪೊಲೀಸರು ಟ್ರ್ಯಾಪ್‌ ಮಾಡಿ ರೆಡ್‌ ಹ್ಯಾಂಡ್‌ ಹಣ ಸಹಿತ ಸಿಕ್ಕಿಬಿದ್ದಿದ್ದಾರೆ.

ಲಗ್ಗೆರೆಯಲ್ಲಿರುವ ಪುರಾತನವಾದ ದುಗ್ಗಲಮ್ಮ ದೇವಸ್ಥಾನದ 0.30 ಕುಂಟೆ ಜಾಗವೂ ಕೆಐಎಡಿಬಿ ಸ್ವಾಧೀನದಲ್ಲಿಲ್ಲ ಎನ್‌ಓಸಿಯನ್ನು ನೀಡಲು ಕೆಐಎಡಿಬಿಯ ವಿಶೇಷ ಭೂಸ್ವಾಧೀನ ಅಧಿಕಾರಿ ಎಬಿ ವಿಜಯ್ ಕುಮಾರ್ ಮತ್ತು ವಿಶೇಷ ಭೂಸ್ವಾಧೀನ ಅಧಿಕಾರಿ 2 ರಘುನಾಥ್ ರವರು 2.50 ಲಕ್ಷ ಲಂಚವನ್ನು ಸ್ವೀಕರಿಸಿದ್ದರು. ಲಂಚವನ್ನು ಪಡೆದು ನಿರಪೇಕ್ಷಣಾ ಪತ್ರವನ್ನು ನೀಡಿದ್ದರು.

ಜಪ್ತಿ ಮಾಡಿದ ಚಿನ್ನಾಭರಣವನ್ನು ಪೊಲೀಸರು ವರ್ಷಾನುಗಟ್ಟಲೆ ವಶದಲ್ಲಿಟ್ಟುಕೊಳ್ಳುವಂತಿಲ್ಲ: HCಜಪ್ತಿ ಮಾಡಿದ ಚಿನ್ನಾಭರಣವನ್ನು ಪೊಲೀಸರು ವರ್ಷಾನುಗಟ್ಟಲೆ ವಶದಲ್ಲಿಟ್ಟುಕೊಳ್ಳುವಂತಿಲ್ಲ: HC

ರಾಮಚಂದ್ರ ಎಂಬುವವರಿಂದ ದೂರು
ಈ ವಿಚಾರದಲ್ಲಿ ರಾಮಚಂದ್ರ ಮತ್ತು ಭಗತ್ ಸಿಂಗ್ ಅರಣ್ ಮೇಲಾಧಿಕಾರಿಗೆ ದೂರನ್ನು ನೀಡಿದ್ದರು. ಈ ದೂರನ್ನು ಹಿಂಪಡೆಯಲು ತಾವು ಲಂಚವಾಗಿ ಪಡೆದಿದ್ದ 2.50 ಲಕ್ಷದ ಜೊತೆ 50 ಸಾವಿರ ಹೆಚ್ಚುವರಿ ಹಣವನ್ನು ಸೇರಿಸಿ ಒಟ್ಟು 30 ಲಕ್ಷ ರೂಪಾಯಿ ಹಣವನ್ನು ನೀಡುವ ವೇಳೆಯಲ್ಲಿ ಲೋಕಾಯುಕ್ತ ಪೊಲೀಸರು ರೆಡ್ ಹ್ಯಾಂಡಾಗಿ ಇಬ್ಬರು ಅಧಿಕಾರಿಗಳು ಸಿಕ್ಕಿಬಿದ್ದಿದ್ದಾರೆ.

KAS officers caught by Loka police while returning bribe money

ಲೋಕಾಯುಕ್ತ ಡಿವೈಎಸ್ಪಿ ಪ್ರದೀಪ್ ನೈತೃತ್ವದಲ್ಲಿ ಟ್ರ್ಯಾಪ್
ಲೋಕಾಯುಕ್ತ ಡಿವೈಎಸ್ಪಿ ಪ್ರದೀಪ್ ನೈತೃತ್ವದಲ್ಲಿ ಟ್ರ್ಯಾಪ್ ಕಾರ್ಯವನ್ನು ಯಶಸ್ವಿಯಾಗಿ ಮಾಡಲಾಗಿದೆ. ಪುರಾತನವಾದ ದೇವಸ್ಥಾನದ ಜಾಗಕ್ಕೆ ನಿರಪೇಕ್ಷಣಾ ಪತ್ರವನ್ನು ನೀಡುವ ಸಲುವಾಗಿ ಸ್ವೀಕರಿಸಿದ್ದ ಲಂಚದ ಹಣದಿಂದಾಗಿ ಕೆಎಎಸ್ ಅಧಿಕಾರಿಗಳಾದ ಎಬಿ ವಿಜಯ್ ಕುಮಾರ್ ಮತ್ತು ರಘುನಾಥ್ ಸಿಕ್ಕಿಬಿದ್ದಿದ್ದು ಲೋಕಾಯುಕ್ತ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.

KAS officers caught by Loka police while returning bribe money

ಲೋಕಾಯುಕ್ತಕ್ಕೆ ಮರಳಿ ಅಧಿಕಾರ ಬಂದ ಬಳಿಕ ಟ್ರ್ಯಾಪ್ ಕಾರ್ಯಚರಣೆಗಳು ಯಶಸ್ವಿಯಾಗಿ ನಡೆಯುತ್ತಿದೆ. ಲೋಕಾಯುಕ್ತ ಬಿಎಸ್‌ ಪಾಟೀಲ್ ನೇತೃತ್ವದಲ್ಲಿ ಮಾರ್ಗದರ್ಶನದಲ್ಲಿ ನಡೆಸಲಾಗುತ್ತಿದ್ದು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಪೊಲೀಸರ ಟ್ರ್ಯಾಪ್ ಬಲೆಗೆ ಬೀಳುತ್ತಿದ್ದಾರೆ.

English summary
KAS Senior Officer A.B.Vijay Kumar and Raghunath While were returning the bribe money received to the complainant, the Lokayukta police trapped them and caught them with the red hand money, Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X