ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಕ್ರಮ ಆಸ್ತಿಗಳ ಗಳಿಕೆ ಆರೋಪ ಕೆಎಎಸ್ ಅಧಿಕಾರಿ ಸುಧಾ ಅಮಾನತು

|
Google Oneindia Kannada News

ಬೆಂಗಳೂರು, ಜನವರಿ 18: ಅಕ್ರಮ ಆಸ್ತಿಗಳ ಗಳಿಕೆ ಆರೋಪ ಹೊತ್ತುಕೊಂಡಿರುವ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ಆಡಳಿತಾಧಿಕಾರಿ ಡಾ.ಬಿ.ಸುಧಾ (ಕೆ.ಎ.ಎಸ್) ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ರಾಜ್ಯ ಸರ್ಕಾರ ಆದೇಶ ನೀಡಿದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ದಲ್ಲಿ ಭೂ ಒತ್ತುವರಿ ಅಧಿಕಾರಿಯಾಗಿದ್ದ ಡಾ. ಸುಧಾ ಹಾಗೂ ಕುಟುಂಬಸ್ಥರು, ಆಪ್ತರ ಮನೆ, ಕಚೇರಿ ಮೇಲೆ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಅಧಿಕಾರಿಗಳು ದಾಳಿ ನಡೆಸಿದ್ದರು. ಚರ ಮತ್ತು ಸ್ಥಿರಾಸ್ತಿಗಳು ಪತ್ತೆಯಾಗಿದ್ದು ಇವುಗಳ ಬಗ್ಗೆ ತನಿಖೆ ಮುಂದುವರೆದಿದೆ.

ಮತ್ತೆ ಎಸಿಬಿ ದಾಳಿ, ಸುಧಾ ಮನೆಯಲ್ಲಿ ನಕಲಿ ದಾಖಲೆಗಳು ಜಪ್ತಿಮತ್ತೆ ಎಸಿಬಿ ದಾಳಿ, ಸುಧಾ ಮನೆಯಲ್ಲಿ ನಕಲಿ ದಾಖಲೆಗಳು ಜಪ್ತಿ

ಕೆಎಎಸ್ ಅಧಿಕಾರಿಯಾಗಿ 12 -13 ವರ್ಷ ಅನುಭವ ಹೊಂದಿರುವ ಸುಧಾ ಅವರ ಅಕ್ರಮ ಆಸ್ತಿ ಗಳಿಕೆ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿರಲಿಲ್ಲ. ಎಸಿಬಿ ದಾಳಿ ನಂತರ ಯಾವುದೇ ಕ್ರಮ ಜರುಗಿಸಿರಲಿಲ್ಲ. ಸುಧಾ ಅವರ ಅಕ್ರಮ ಆಸ್ತಿ ಪ್ರಕರಣವನ್ನು ಜಾರಿ ನಿರ್ದೇಶನಾಲಯ ಹಾಗೂ ಅದಾಯ ತೆರಿಗೆ ಇಲಾಖೆಗೆ ವಹಿಸುವ ಬಗ್ಗೆ ಎಸಿಬಿ ಅಧಿಕಾರಿಗಳು ಚಿಂತನೆ ನಡೆಸಿದ್ದರು

KAS officer Dr B Sudha suspended

Recommended Video

Siddaramaiah ಅವರಿಗೆ ಅವರ ಮೂಲಾನೆ ಗೊತ್ತಿಲ್ಲಾ! : CT Ravi | Oneindia Kannada

ಈ ನಡುವೆ ಸೀರಿಯಲ್ , ಸಿನಿಮಾಗಳಲ್ಲಿ ಅಪಾರ ಪ್ರಮಾಣದಲ್ಲಿ ಹಣ ಹೂಡಿಕೆ ಮಾಡಿದ್ದರು ಎಂಬ ಅಂಶವು ಬೆಳಕಿಗೆ ಬಂದಿತ್ತು. ಡಾ. ಸುಧಾ ಅವರ ಬೇನಾಮಿ ಆಸ್ತಿಗೆ ಸಂಬಂಧಿಸಿದಂತೆ 200ಕ್ಕೂಹೆಚ್ಚು ದಾಖಲೆ ಪತ್ರಗಳು, 50ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳ ವಿವರ ಲಭ್ಯವಾಗಿತ್ತು. 50 ಕೋಟಿ ರುಗೂ ಅಧಿಕ ಬೇನಾಮಿ ಆಸ್ತಿ ಪತ್ತೆಯಾಗಿತ್ತು. ಕೆಎಎಸ್ ಅಧಿಕಾರಿ ಡಾ. ಸುಧಾ, ತನ್ನ ಪರಮಾಪ್ತೆ ಸ್ನೇಹಿತೆ ರೇಣುಕಾ ಹೆಸರಿನಲ್ಲಿ ಬೇನಾಮಿ ವಹಿವಾಟು ನಡೆಸಿರುವುದು ತನಿಖೆ ವೇಳೆ ತಿಳಿದು ಬಂದಿತ್ತು.

English summary
KAS officer Dr B Sudha suspend from immediate effect. Sudha was the land acquisition officer at Bangalore Development Authority.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X