• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿಧಾನಸೌಧ ದಲ್ಲಾಳಿಗಳ ಶಾಪಿಂಗ್ ಮಾಲ್: ಕಾಂಗ್ರೆಸ್

|

ಬೆಂಗಳೂರು, ಮಾರ್ಚ್ 16: ಕರ್ನಾಟಕದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸರ್ಕಾರದ ವಿರುದ್ಧ ಕಾಂಗ್ರೆಸ್ ಟ್ವೀಟ್ ಸಮರ ಸಾರಿದೆ. ವಿಧಾನಸೌಧವು ದಲ್ಲಾಳಿಗಳ ಶಾಪಿಂಗ್ ಮಾಲ್ ಆಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಬೆಂಗಳೂರಿನಲ್ಲಿ ಇರುವ ಮುಖ್ಯಮಂತ್ರಿ ಗೃಹ ಕಚೇರಿಯು ವರ್ಗಾವಣೆ ದಂಧೆ, ಗುತ್ತಿಗೆ, ಡೀಲಿಂಗ್ ಮತ್ತು ಕಮಿಷನ್ ದಂಧೆಗಳ "ವಿಜಯೇಂದ್ರ ಸರ್ವಿಸ್ ಟ್ಯಾಕ್ಸ್"ನ ಹೆಡ್ಡಾಫೀಸ್ ನಂತೆ ಆಗಿದೆ ಎಂದು ಕಾಂಗ್ರೆಸ್ ದೂಷಿಸಿದೆ.

"ಕರ್ನಾಟಕ ಬಿಜೆಪಿಯು ಭ್ರಷ್ಟಾಚಾರವನ್ನೇ ಹಾಸಿ ಮಲಗಿದೆ. ರಾಜ್ಯದಲ್ಲಿ ನಾನೊಬ್ಬನೇ, ನನಗಿಬ್ಬರು ಎಂಬ ಅವರ ಫ್ಯಾಮಿಲಿ ಸರ್ಕಾರವಿರುವುದನ್ನು ಬಿಜೆಪಿಗರೇ ಒಪ್ಪಿಕೊಂಡಿದ್ದಾರೆ" ಎಂದು ಕಾಂಗ್ರೆಸ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದೆ. ಈ ಟ್ವೀಟ್ ಜೊತೆಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೇಳಿಕೆಗೆ ಸಂಬಂಧಿಸಿದ ಸುದ್ದಿಯೊಂದನ್ನು ಟ್ಯಾಗ್ ಮಾಡಲಾಗಿದೆ.

ಸಿಎಂ ಯಡಿಯೂರಪ್ಪ ಅವರನ್ನು ಅಭಿನಂದಿಸಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್!ಸಿಎಂ ಯಡಿಯೂರಪ್ಪ ಅವರನ್ನು ಅಭಿನಂದಿಸಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್!

ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ:

   ಕೊರೊನಾ ಏರಿಕೆ ಹಿನ್ನೆಲೆ ವಿಧಾನಸೌಧ ಸ್ಯಾನಿಟೈಸ್ ಮಾಡಿದ ಸಿಬ್ಬಂದಿ | Oneindia Kannada

   ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮತ್ತು ಅವರ ಕುಟುಂಬದ ಭ್ರಷ್ಟಾಚಾರ ಮತ್ತು ಕುಟುಂಬ ರಾಜಕಾರಣದ ವಿರುದ್ಧ ನನ್ನ ಹೋರಾಟ ನಿರಂತರವಾಗಿರುವತ್ತದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದರು. ಮುಖ್ಯಮಂತ್ರಿ ಅಲ್ಲದೇ ಇಡೀ ಕುಟುಂಬ ಭ್ರಷ್ಟಾಚಾರದಲ್ಲಿ ಭಾಗಿಯಾಗಿದೆ. ಡಿ ಗ್ರೇಡ್ ವರ್ಗಾವಣೆಗಳನ್ನೂ ಕೂಡ ಸಿಎಂ ಕುಟುಂಬದವರೇ ಮಾಡುತ್ತಿದ್ದಾರೆ. ಅಷ್ಟರ ಮಟ್ಟಿಗೆ ಸಿಎಂ ಮತ್ತು ಅವರ ಕುಟುಂಬ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಯತ್ನಾಳ್ ದೂಷಿಸಿದ್ದರು.

   English summary
   Karnataka Vidhana soudha Is A Shopping Mall For Brokers, Congress Tweet.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X