ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯಲಹಂಕದಲ್ಲಿ ತಾತ್ಕಾಲಿಕ ತೆರೆದ ಚಿತಾಗಾರ ನಿರ್ಮಾಣ: ಆರ್ ಅಶೋಕ್

|
Google Oneindia Kannada News

ಬೆಂಗಳೂರು, ಏಪ್ರಿಲ್ 21: ದಿನೇ ದಿನೇ ನಗರದಲ್ಲಿ ಕೊರೊನಾ ಸೋಂಕಿತರ ಸಾವು ಹೆಚ್ಚಳವಾಗುತ್ತಿದ್ದು, ಶವಕ್ಕೆ ಬೆಂಕಿ ಇಡಲು ಚಿತಾಗಾರದ ಮುಂದೆ ದಿನಗಟ್ಟಲೆ ಕಾದುನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ.

ಹೀಗಾಗಿ ನಗರದ ಯಲಹಂಕದಲ್ಲಿ 4 ಎಕರೆ ವಿಸ್ತೀರ್ಣದಲ್ಲಿ ತೆರೆದ ಚಿತಾಗಾರವನ್ನು ನಿರ್ಮಿಸಲು ಮುಂದಾಗಿರುವುದಾಗಿ ಸಚಿವ ಆರ್ ಅಶೋಕ್ ತಿಳಿಸಿದ್ದಾರೆ.

ಕರ್ನಾಟಕದಲ್ಲಿ 21794 ಹೊಸ ಕೊರೊನಾ ಪ್ರಕರಣ; 149 ಮಂದಿ ಸಾವುಕರ್ನಾಟಕದಲ್ಲಿ 21794 ಹೊಸ ಕೊರೊನಾ ಪ್ರಕರಣ; 149 ಮಂದಿ ಸಾವು

ಉಪ ಆಯುಕ್ತರಿಗೆ ಆದೇಶ ನೀಡಿದ್ದು, ಕೂಡಲೇ ತೆರೆದ ಸ್ಮಶಾನವನ್ನು ನಿರ್ಮಿಸುವಂತೆ ಸೂಚಿಸಲಾಗಿದೆ. ನಗರದಲ್ಲಿ ಒಟ್ಟು 5 ಸ್ಮಶಾನಗಳಲ್ಲಿ ಮಾತ್ರ ಕೊರೊನಾ ರೋಗಿಗಳ ಅಂತ್ಯ ಸಂಸ್ಕಾರಕ್ಕೆ ಅವಕಾಶ ನೀಡಲಾಗಿದೆ.

Karnataka To Set Up Open Air Crematorium On 4 Acre Aland At Yalahanka To Cremate Covid19 Victims

ಆದರೆ ರೋಗಿಗಳ ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಮೊದಲೆಲ್ಲಾ ಒಂದು ಅಥವಾ ಎರಡು ಕೊರೊನಾ ಸೋಂಕಿತರ ಶವ ಬಂದರೆ ಇದೀಗ ದಿನಕ್ಕೆ 30ಕ್ಕೂ ಅಧಿಕ ಶವಗಳು ಸ್ಮಶಾನ ಸೇರುತ್ತಿವೆ.

ಹಾಗೆಯೇ ಆಂಬ್ಯುಲೆನ್ಸ್ ಚಾಲಕರು ಟೋಕನ್ ಪಡೆದು ದಿನಗಟ್ಟಲೆ ಶವವಿಟ್ಟುಕೊಂಡು ಕಾಯಬೇಕಾದ ಪರಿಸ್ಥಿತಿ ಇದೆ, ರಾತ್ರಿ 2 ಗಂಟೆಯವರೆಗೂ ಸರಿತಿಯಲ್ಲಿ ನಿಂತು ಶವಸಂಸ್ಕಾರ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಈಗಿರುವ ಸ್ಮಶಾನಗಳು ಸಾಕಾಗುತ್ತಿಲ್ಲ. ಹೀಗಾಗಿ ನಗರದ ಹೊರವಲಯದಲ್ಲಿರುವ ಯಲಹಂಕದಲ್ಲಿ 4 ಎಕರೆ ಪ್ರದೇಶದಲ್ಲಿ ತಾತ್ಕಾಲಿಕ ತೆರೆದ ಸ್ಮಶಾನವನ್ನು ಸ್ಥಾಪಿಸಲು ಸರ್ಕಾರ ಮುಂದಾಗಿದೆ.

ಕರ್ನಾಟಕದಲ್ಲಿ ಮಂಗಳವಾರ ಬರೋಬ್ಬರಿ 21794 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಈ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಾಹಿತಿ ನೀಡಿದೆ. ಒಂದೇ ದಿನ 149 ಮಂದಿ ಮೃತಪಟ್ಟಿದ್ದಾರೆ. ಇದುವರೆಗೆ 13646 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

Recommended Video

ಸರ್ಕಾರದ ಹೊಸ ಕಟ್ಟು ನಿಟ್ಟಿನ ಕ್ರಮ ! | Oneindia Kannada

ಕಳೆದ 24 ಗಂಟೆಗಳಲ್ಲಿ 4571 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದುವರೆಗೆ 1025821 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯಕ್ಕೆ 159158 ಸಕ್ರಿಯ ಪ್ರಕರಣಗಳಿವೆ, ಒಟ್ಟು 1198644 ಪ್ರಕರಣಗಳಿವೆ. 751 ಮಂದಿ ಐಸಿಯುನಲ್ಲಿದ್ದಾರೆ.

English summary
Revenue Minister R Ashoka on Tuesday ordered all deputy commissioners to immediately identify government land as temporary crematorium. Such facilities will come up near cities, including Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X