ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡೀಸೆಲ್‌ ಬಸ್ಸುಗಳಿಗೆ ಗುಡ್ ಬೈ; ನಗರಕ್ಕೆ CNG ಬಸ್

By Srinath
|
Google Oneindia Kannada News

ಬೆಂಗಳೂರು, ಜೂನ್ 21: ಪ್ರಸ್ತುತ ಡೀಸೆಲಿನಿಂದ ಸಂಚರಿಸುತ್ತಿರುವ ಬಿಎಂಟಿಸಿ ಮತ್ತು ಕೆಎಸ್ಸಾರ್ಟಿಸಿ ಬಸ್ಸುಗಳು ಇನ್ನು ಮುಂದೆ ರಾಷ್ಟ್ರದ ರಾಜಧಾನಿ ದಿಲ್ಲಿಯಲ್ಲಿರುವಂತೆ ಅನಿಲ ಇಂಧನದ ಮೂಲಕ ಕಾರ್ಯನಿರ್ವಹಿಸಲಿವೆ.

ಈ ಬಗ್ಗೆ ಮಾಹಿತಿ ನೀಡಿರುವ ಬೆಂಗಳೂರು ಉಸ್ತುವಾರಿ ಸಚಿವರೂ ಆದ ಸಾರಿಗೆ ಸಚಿವ ಆರ್ ರಾಮಲಿಂಗಾ ರೆಡ್ಡಿ ಅವರು ಪರಿಸರಸ್ನೇಹಿ ಸಂಚಾರ ವ್ಯವಸ್ಥೆಗೆ ಒತ್ತು ನೀಡಲು ಸರ್ಕಾರ ತೀರ್ಮಾನಿಸಿದೆ. ಮುಂದಿನ 10 ವರ್ಷಗಳಲ್ಲಿ ರಾಜ್ಯದಲ್ಲಿ ಎಲ್ಲವೂ ಸಿಎನ್ ಜಿ (ಕಂಪ್ರೆಸ್ಡ್ ನ್ಯಾಚುರಲ್‌ ಗ್ಯಾಸ್ compressed natural gas- CNG‌) ಬಸ್ಸುಗಳಾಗಿ ಓಡಾಡಲಿವೆ ಎಂದು ತಿಳಿಸಿದ್ದಾರೆ. ಈಗಾಗಲೇ ರಾಜ್ಯಯದಲ್ಲಿ ಅನಿಲಾಧಾರಿತ ಆಟೋ ರಿಕ್ಷಾಗಳು ಭಾರಿ ಸಂಖ್ಯೆಯಲ್ಲಿ ಸಂಚರಿಸುತ್ತಿವೆ.

ಡೀಸೆಲ್‌ ಬಸ್ಸುಗಳಿಗೆ ಗುಡ್ ಬೈ: (ಸಂಚಾರ ಪೆಡಂಭೂತಕ್ಕೆ ಮತ್ತೆ ರಸ್ತೆ ಅಗಲೀಕರಣ ತಂತ್ರ)

karnataka-to-get-cng-buses-transport-minister-ramalinga-reddy

ಡೀಸೆಲ್‌ ಇಂಧನ ದುಬಾರಿ ಮತ್ತು ಮಾಲಿನ್ಯಯುಕ್ತವಾಗಿದೆ. ಹಾಗಾಗಿ ಬಸ್ಸುಗಳಲ್ಲಿ ಸಿಎನ್‌ ಜಿ ಇಂಧನ ಬಳಸಲು ತೀರ್ಮಾನಿಸಲಾಗಿದೆ. ಹಾಗಾಗಿ, ಸದ್ಯದಲ್ಲೇ ಮೊದಲ ಹಂತದಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ 67 ಬಸ್ಸು (KSRTC) ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ 310 ಸಿಎನ್‌ ಜಿ ಬಸ್ಸುಗಳನ್ನು (BMTC) ಪರಿಚಯಿಸಲಾಗುವುದು ಎಂದು ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ಕೇಂದ್ರದ ನರ್ಮ್ ಯೋಜನೆಯಡಿ ಕರ್ನಾಟಕಕ್ಕೆ ಸಿಎನ್‌ ಜಿ ಬಸ್‌ ಒದಗಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಅದಕ್ಕೆ ಸಮ್ಮತಿ ದೊರೆತಿದೆ. ಬಸ್‌ ಡಿಪೋಗಳಲ್ಲಿ ಸಿಎನ್‌ ಜಿ ತುಂಬುವ ಫಿಲ್ಲಿಂಗ್‌ ಸ್ಟೇಷನ್‌ ಗಳನ್ನು ಸಹ Gas Authority of India ಸಹಯೋಗದಲ್ಲಿ ಸ್ಥಾಪಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಗಮನಾರ್ಹ ಸಂಗತಿಯೆಂದರೆ ಜನದಟ್ಟಣೆ ಹೆಚ್ಚಾಗಿರುವ ಪ್ರಮುಖ ತಾಲೂಕು ಕೇಂದ್ರಗಳಲ್ಲಿಯೂ ನಗರ ಸಾರಿಗೆ ವ್ಯವಸ್ಥೆಯನ್ನು ಜಾರಿಗೊಳಿಸಲು ನಿರ್ಧರಿಸಲಾಗಿದೆ ಎಂದೂ ಸಚಿವರು ಹೇಳಿದರು. ಜನಸಂಖ್ಯೆ ಆಧಾರದ ಮೇಲೆ ಈಗಾಗಲೇ ಕೆಲ ಜಿಲ್ಲಾ ಕೇಂದ್ರಗಳಲ್ಲಿ ಸ್ಥಳೀಯ ನಗರ ಸಾರಿಗೆ ವ್ಯವಸ್ಥೆ ಜಾರಿಯಲ್ಲಿದೆ.

English summary
Karnataka to get CNG for BMTC and KSRTC buses said Transport minister Ramalinga Reddy in Bangalore on June 20. Joining the battle against rising air pollution levels, the BMTC has decided to bid goodbye to diesel buses and run vehicles on compressed natural gas(CNG). 'BMTC, which had decided to buy 310 luxury buses from Volvo this year, has now asked the company to supply 310 CNG buses. Similarly, 67 CNG buses are being purchased for KSRTC' Transport Minister Ramalinga Reddy said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X