ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೊಸ 241 ಟಾಟಾ ಬಸ್ ಗಳಿಗೆ ಸಿದ್ದರಾಮಯ್ಯರಿಂದ ಚಾಲನೆ

By Mahesh
|
Google Oneindia Kannada News

ಬೆಂಗಳೂರು, ಆಗಸ್ಟ್ 18: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು 241 ಟಾಟಾ ಮೋಟಾರ್ಸ್ ಹೊಸ ಬಸ್ ಗಳಿಗೆ ಹಸಿರು ನಿಶಾನೆ ತೋರಿದರು. ಈ ಸಂದರ್ಭದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮತ್ತು ಟಾಟಾ ಮೋಟಾರ್ಸ್ ನ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಜವಾಹರಲಾಲ್ ನೆಹರೂ ನ್ಯಾಷನಲ್ ಅರ್ಬನ್ ರಿನ್ಯೂವಲ್ ಮಿಷನ್(JNNRM) ನೆರವಿನೊಂದಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(KSRTC) ಈ ಬಸ್ ಗಳನ್ನು ಸಂಚಾರ ನಡೆಸಲಿದೆ. [ಬೆಂಗಳೂರು-ಚೆನ್ನೈ ನಡುವೆ ದೇಶದ ಮೊದಲ ಬಯೋ ಬಸ್]

ಈ ಹೊಸ ವಿನ್ಯಾಸದ ಬಸ್‍ಗಳನ್ನು ಹೊಸ ಪೀಳಿಗೆಯ ಸುಧಾರಿತ ಎಂಜಿನ್, ಉದ್ದವಾದ ಕಿಟಕಿಗಳು, ತುರ್ತು ನಿರ್ಗಮನ, ಅಗ್ನಿ ನಿರೋಧಕ ಉಪಕರಣಗಳು ಸೇರಿದಂತೆ ಹಲವು ಸೌಲಭ್ಯಗಳೊಂದಿಗೆ ವಿನ್ಯಾಸಗೊಳಿಸಲಾಗಿದೆ. [ಕೆಎಸ್ಸಾರ್ಟಿಸಿ ಪ್ರೀಮಿಯರ್ ಬಸ್ ಗಳ ದರ ಇಳಿಕೆ]

ಎಲೆಕ್ಟ್ರಾನಿಕ್ ಏರ್ ಸಸ್ಪೆನ್ಷನ್ ಹೊಂದಿದ್ದು, 700 ಮಿಲಿಮೀಟರ್‍ನಷ್ಟು ಗ್ಯಾಂಗ್ ವೇ ಇದ್ದು, ಪ್ರಯಾಣಿಕರಿಗೆ ಆರಾಮವಾಗಿ ಕುಳಿತುಕೊಳ್ಳಲು ಸಾಕಷ್ಟು ಸ್ಥಳಾವಕಾಶ ಇದೆ. ಈ ಮೂಲಕ ಈ ಬಸ್‍ಗಳು ಪ್ರಯಾಣಿಕರ ಸ್ನೇಹಿ ಬಸ್ ಗಳಾಗುವುದರಲ್ಲಿ ಅನುಮಾನವಿಲ್ಲ.

ಟಾಟಾ ಮೋಟಾರ್ಸ್ ಹೊಸ ಬಸ್ ಗಳಿಗೆ ಹಸಿರು ನಿಶಾನೆ

ಟಾಟಾ ಮೋಟಾರ್ಸ್ ಹೊಸ ಬಸ್ ಗಳಿಗೆ ಹಸಿರು ನಿಶಾನೆ

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು 241 ಟಾಟಾ ಮೋಟಾರ್ಸ್ ಹೊಸ ಬಸ್ ಗಳಿಗೆ ಹಸಿರು ನಿಶಾನೆ ತೋರಿದರು.

JNNRM ನೆರವಿನೊಂದಿಗೆ KSRTC

JNNRM ನೆರವಿನೊಂದಿಗೆ KSRTC

ಜವಾಹರಲಾಲ್ ನೆಹರೂ ನ್ಯಾಷನಲ್ ಅರ್ಬನ್ ರಿನ್ಯೂವಲ್ ಮಿಷನ್(JNNRM) ನೆರವಿನೊಂದಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(KSRTC) ಈ ಬಸ್ ಗಳನ್ನು ಸಂಚಾರ ನಡೆಸಲಿದೆ.

ಹೊಸ ಸುರಕ್ಷಣಾ ವಿನ್ಯಾಸವುಳ್ಳ ಬಸ್

ಹೊಸ ಸುರಕ್ಷಣಾ ವಿನ್ಯಾಸವುಳ್ಳ ಬಸ್

ಭಾರತ ಸರ್ಕಾರ ನಿಗದಿಪಡಿಸಿರುವ ಅರ್ಬನ್ ಬಸ್ ಸ್ಪೆಸಿಫಿಕೇಶನ್ 2 ಗೆ ಪೂರಕವಾಗಿ ಏರ್‍ಸಸ್ಪೆನ್ಷನ್, ಮಲ್ಟಿಪ್ಲೆಕ್ಸ್ ವೈರಿಂಗ್ ಮೂಲಕ ಈ ಬಸ್ ಗಳನ್ನು ವಿನ್ಯಾಸಗೊಳಿಸಲಾಗಿದೆ.

ವೇಗದಲ್ಲಿ ಸಂಚರಿಸಲು ನೆರವಾಗಲಿದೆ

ವೇಗದಲ್ಲಿ ಸಂಚರಿಸಲು ನೆರವಾಗಲಿದೆ

ಅಧಿಕ ಸಾಮರ್ಥ್ಯದ ಆಕ್ಸಲೇಟರ್ ಹೊಂದಿದ್ದು ಪ್ರತಿ ಸೆಕೆಂಡಿಗೆ 0.8 ಮೀಟರ್ ಸಾಮರ್ಥ್ಯ ಹೊಂದಿದೆ. ಈ ಮೂಲಕ ಬಸ್ ವೇಗದಲ್ಲಿ ಸಂಚರಿಸಲು ನೆರವಾಗಲಿದ್ದು, ಪ್ರತಿದಿನ ಕಚೇರಿಗೆ ತೆರಳುವವರು ನಿಗದಿತ ಸಮಯಕ್ಕೆ ಕಚೇರಿಯನ್ನು ತಲುಪಬಹುದಾಗಿದೆ.

ಇಂಟಲಿಜೆಂಟ್ ಟ್ರಾನ್ಸ್ ಪೋರ್ಟ್ ಸಿಸ್ಟಂ

ಇಂಟಲಿಜೆಂಟ್ ಟ್ರಾನ್ಸ್ ಪೋರ್ಟ್ ಸಿಸ್ಟಂ

ಇಂಟಲಿಜೆಂಟ್ ಟ್ರಾನ್ಸ್ ಪೋರ್ಟ್ ಸಿಸ್ಟಂ ಇದ್ದು, ಪಬ್ಲಿಕ್ ಇನ್‍ಫರ್ಮೇಶನ್ ಸಿಸ್ಟಂ, ಆಟೋಮ್ಯಾಟಿಕ್ ವೆಹಿಕಲ್ ಲೊಕೇಶನ್ ಸಿಸ್ಟಂ, ಸೆಕ್ಯೂರಿಟಿ ನೆಟ್‍ವರ್ಕ್ ಸಿಸ್ಟಂ, ವೆಹಿಕಲ್ ಹೆಲ್ತ್ ಮಾನಿಟರಿಂಗ್ ಅಂಡ್ ಡಯಾಗ್ನಾಸ್ಟಿಕ್ ಸಿಸ್ಟಂ ಅನ್ನು ಒಳಗೊಂಡಿದೆ. ಇದಲ್ಲದೇ, ಕಂಟ್ರೋಲ್ ರೂಂನಲ್ಲಿ ಕುಳಿತು ಬಸ್ ಸಂಚಾರವನ್ನು ನೇರಪ್ರಸಾರದಲ್ಲಿ ಅವಲೋಕಿಸಲು ಜಿಪಿಆರ್‍ಎಸ್ ಸಂಪರ್ಕವನ್ನೂ ಈ ಬಸ್ ಗಳು ಒಳಗೊಂಡಿವೆ.

ಚಾಲಕರ ಆರೋಗ್ಯಕ್ಕೆ ಹೆಚ್ಚು ಆದ್ಯತೆ

ಚಾಲಕರ ಆರೋಗ್ಯಕ್ಕೆ ಹೆಚ್ಚು ಆದ್ಯತೆ

ಚಾಲಕರ ಆರೋಗ್ಯಕ್ಕೆ ಹೆಚ್ಚು ಆದ್ಯತೆ ನೀಡಲಾಗಿದ್ದು, ಆರಾಮವಾಗಿ ಬಸ್ ಚಲಾಯಿಸಲು ಸಾಧ್ಯವಾಗುವ ರೀತಿಯಲ್ಲಿ ಸೀಟನ್ನು ವಿನ್ಯಾಸಗೊಳಿಸಲಾಗಿದ್ದು, ನಾಲ್ಕು ಹಂತದಲ್ಲಿ ಈ ಸೀಟನ್ನು ಹೊಂದಿಸಿಕೊಳ್ಳಬಹುದಾಗಿದೆ.

ಸಿಬ್ಬಂದಿಗೆ ಸೂಕ್ತ ತರಬೇತಿ

ಸಿಬ್ಬಂದಿಗೆ ಸೂಕ್ತ ತರಬೇತಿ

ಕರ್ನಾಟಕದಲ್ಲಿ ಟಾಟಾ ಮೋಟಾರ್ಸ್ ನ 13,000 ಕ್ಕೂ ಅಧಿಕ ಬಸ್ ಗಳು ಕಾರ್ಯಾಚರಿಸುತ್ತಿವೆ. ಈ ಹಿನ್ನೆಲೆಯಲ್ಲಿ ಬಸ್ ಗಳ ಸುಗಮ ಸಂಚಾರ ಮತ್ತು ಚಾಲನೆಗೆ ಅನುಕೂಲ ಆಗಲೆಂಬ ಕಾರಣಕ್ಕೆ ಟಾಟಾ ಮೋಟಾರ್ಸ್ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಚಾಲಕರಿಗೆ ಮತ್ತು ಸಿಬ್ಬಂದಿಗೆ ಸೂಕ್ತ ತರಬೇತಿಯನ್ನೂ ನೀಡುತ್ತಿದೆ.

English summary
Karnataka Chief Minister Siddaramaiah and Transport Minister Ramalinga Reddy along with officials from Tata Motors flagged off 241 Tata Motors buses today.The Tata Motors buses were procured by Karnataka under the Jawaharlal Nehru National Urban Renewal Mission (JNNURM) for operation by KSRTC (Karnataka State Road Transport Corporation).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X