ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಈಜುಕೊಳಗಳನ್ನು ಆರಂಭಿಸಲು ಕೆಎಸ್ಎ ಒತ್ತಾಯ

|
Google Oneindia Kannada News

ಬೆಂಗಳೂರು, ಮೇ 31: ಕೊರೊನಾವೈರಸ್‌ ಲಾಕ್‌ಡೌನ್‌ನಿಂದ ಕಳೆದ ಎರಡು ತಿಂಗಳು ಈಜುಕೊಳಗಳು ಬಂದ್ ಆಗಿವೆ. ಇದರಿಂದ ಈಜುಪ್ರಿಯರಿಗೆ ನಿರಾಸೆಯಾಗಿದೆ.

ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆ, ಈಜುಕೊಳದ ನೀರಿನಲ್ಲಿ ಕ್ಲೋರಿನ್ ಇರುವುದರಿಂದ ಕೋವಿಡ್ ಸೋಂಕು ಹರಡುವ ಸಾಧ್ಯತೆ ತೀರಾ ವಿರಳ ಎಂದು ಹೇಳಿರುವ ಬೆನ್ನಲ್ಲೇ ರಾಜ್ಯದಲ್ಲೂ ಈಜುಕೊಳಗಳನ್ನು ಆರಂಭಿಸಬೇಕು ಎಂಬ ಕೂಗು ಕೇಳಿ ಬಂದಿವೆ.

ಲಾಕ್ ಡೌನ್ 5.0; ವಿನಾಯಿತಿ ಇದ್ದರೂ ಇವುಗಳ ಪಾಲನೆ ಕಡ್ಡಾಯಲಾಕ್ ಡೌನ್ 5.0; ವಿನಾಯಿತಿ ಇದ್ದರೂ ಇವುಗಳ ಪಾಲನೆ ಕಡ್ಡಾಯ

ಕರ್ನಾಟಕ ಈಜು ಸಂಸ್ಥೆ (KSA) ಈ ಕುರಿತು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, ಈಜುಕೊಳಗಳನ್ನು ತೆರೆದು ಈಜುಪಟುಗಳಿಗೆ ಈಜಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದೆ.

Karnataka Swimming Association Demand For Swimming Pools Open

ಸಂಸ್ಥೆ ಅಧ್ಯಕ್ಷ ಗೋಪಾಲ್ ಹೊಸೂರ್, ಈಜುಕೊಳದಲ್ಲಿ ಕ್ಲೋರಿನ್ ಇರುವುದರಿಂದ ಕೊರೊನಾ ವೈರಸ್‌ ಸೋಂಕು ಹರಡುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ, ಸಾಂಕ್ರಾಮಿಕ ರೋಗಗಳ ಕೇಂದ್ರ ಮತ್ತು ಅಂತರರಾಷ್ಟ್ರೀಯ ಈಜು ಫೆಡರೇಷನ್ ಈಗಾಗಲೇ ಹೇಳಿದೆ. ಆದ್ದರಿಂದ ಈಜುಕೊಳಗಳನ್ನು ಆರಂಭಿಸಲು ಅನುಮತಿ ಕೊಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಈಜುಕೊಳಗಳಿಗೆ, ಈಜು ತರಬೇತಿಗೆ ಬರುವ ಮಕ್ಕಳು, ಜನರಿಗೆ ಕೊರೊನಾವೈರಸ್ ಕುರಿತು ಜಾಗೃತಿ ಮೂಡಿಸಲಾಗುವುದು. ಸಾಮಾಜಿಕ ಅಂತರ, ಸ್ಯಾನಿಟೈಸಿಂಗ್, ಶೌಚಾಲಯಗಳಲ್ಲಿ ನೈರ್ಮಲ್ಯ ಮತ್ತಿತರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲಾಗುವುದು. ಆದ್ದರಿಂದ ಈಜುಕೊಳಗಳ ಆರಂಭಕ್ಕೆ ಅವಕಾಶ ನೀಡಬೇಕು' ಎಂದು ಗೋಪಾಲ್ ಹೊಸುರು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

English summary
Demad For Swimming Pool Opening From Karnataka Swimming Association. KSA President Gopal Hosuru Urge To Government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X