ಆಡಳಿತಕ್ಕೆ ಮೇಜರ್ ಸರ್ಜರಿ; ರಾಜ್ಯದ 19 ಐಎಎಸ್ ಅಧಿಕಾರಿಗಳ ವರ್ಗಾವಣೆ
ಬೆಂಗಳೂರು, ಜನವರಿ 25: ಆಡಳಿತಕ್ಕೆ ಚುರುಕು ನೀಡಲು ಮುಂದಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಹೊಸ ವರ್ಷದಲ್ಲಿ ಮೊದಲ ಬಾರಿಗೆ ಹತ್ತೊಂಬತ್ತು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ಸೇವೆ ಸಲ್ಲಿಸಲ್ಲಿಸುತ್ತಿರುವ 19 ಮಂದಿ ಉನ್ನತ ಐಎಎಸ್ ಅಧಿಕಾರಗಳನ್ನು ಜನವರಿ 24ರಂದು ಸರ್ಕಾರವು ವರ್ಗಾವಣೆ ಮಾಡಿದೆ.
ಕೆಪಿಎಸ್‌ಸಿ ಪರೀಕ್ಷಾ ನಿಯಂತ್ರಕರಾಗಿ ಕಲಬುರಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತರಾಗಿರುವ ನಳಿನಿ ಅತುಲ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಈವರೆಗೆ ಕೆಪಿಎಸ್‌ಸಿ ಪರೀಕ್ಷಾ ನಿಯಂತ್ರಕರಾಗಿದ್ದ ಎಂ. ಕನಗವಲ್ಲಿ ಅವರನ್ನು ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ.
ವರ್ಗಾವಣೆಯಾದ ಅಧಿಕಾರಗಳ ಹೆಸರು ಮತ್ತು ವರ್ಗವಾದ ಹೊಸ ಹುದ್ದೆಯ ವಿವರ ಇಲ್ಲಿದೆ.
* ಬಿ.ಎಚ್. ಅನಿಲ್ಕುಮಾರ್- ಎಸಿಎಸ್, ಲೋಕೋಪಯೋಗಿ ಇಲಾಖೆ
* ಗರಿಮಾ ಪವಾರ್- ಸಿಇಒ, ಜಿಲ್ಲಾ ಪಂಚಾಯತ್, ಯಾದಗಿರಿ
* ವಿ.ವಿ. ಜೋತ್ಸ್ನಾ- ಎಂ ಡಿ, ಕರ್ನಾಟಕ ಸಿಲ್ಕ್ ಬೋರ್ಡ್
* ಯಶ್ವಂತ್ ಗುರುಕಾರ್- ಜಿಲ್ಲಾಧಿಕಾರಿ, ಕಲಬುರಗಿ
* ಡಾ. ಶಾಮಲಾ ಇಕ್ಬಾಲ್- ಸಾರ್ವಜನಿಕ ಉದ್ಯಮ ಕಾರ್ಯದರ್ಶಿ
* ಎಂ. ಕನಗವಲ್ಲಿ- ಅಪರ ಆಯುಕ್ತರು, ಆಹಾರ ಇಲಾಖೆ
* ವಿ.ವಿ. ಜೋತ್ಸ್ಯಾ - ಎಂಡಿ, ಕೆಎಸ್‌ಐಸಿ
* ಎಚ್.ಟಿ. ಭವ್ಯಾರಾಣಿ- ಎಂಡಿ, ಕರ್ನಾಟಕ ವಿದ್ಯುತ್ ಕಾರ್ಖಾನೆ
* ಎ.ಎ. ದಯಾನಂದ್- ಆಯುಕ್ತರು, ಹಿಂದುಳಿದ ವರ್ಗಗಳ ಇಲಾಖೆ
* ಜಿ. ಜಗದೀಶ್- ಹೆಚ್ಚುವರಿ ಎಂಡಿ, ಪ್ರವಾಸೋದ್ಯಮ ಇಲಾಖೆ
* ಕೆ.ಎಸ್. ಲತಾಕುಮಾರಿ- ನಿರ್ದೆಶಕಿ, ವಿಕಲ ಚೇತನರ ಕಲ್ಯಾಣ ಇಲಾಖೆ
* ವೆಂಕಟ್ ರಾಜ- ಜಿಲ್ಲಾಧಿಕಾರಿ, ಕೋಲಾರ
* ಶಿಲ್ಪಾನಾಗ್- ಆಯುಕ್ತರು, ಗ್ರಾಮೀಣಾಭಿವೃದ್ಧಿ
* ನಳಿನಿ ಅತುಲ್- ಪರೀಕ್ಷಾ ನಿಯಂತ್ರಕರು, ಕೆಪಿಎಸ್‌ಸಿ
* ಶಿಲ್ಪಾ ಶರ್ಮ- ಆಯುಕ್ತರು, ಪಂಚಾಯತ್ ರಾಜ್
* ಎನ್.ಎಂ. ನಾಗರಾಜ- ಎಂಡಿ, KSMSC
* ಶೇಕ್ ತನ್ವೀರ್- ಹೆಚ್ಚುವರಿ ಆಯುಕ್ತ, ಅಬಕಾರಿ ಇಲಾಖೆ
* ಲಿಂಗಾಮೂರ್ತಿ. ಜಿ- ಕಾರ್ಯದರ್ಶಿ, ರಾಜ್ಯ ಚುನಾವಣಾ ಆಯೋಗ
* ಇಬ್ರಾಹಿಂ ಮೈಗೂರ್- ಕಾರ್ಯದರ್ಶಿ, ರೇರಾ
* ಪಾಟೀಲ್ ಭುವನೇಶ್ ದೇವಿದಾಸ್- ಎಂಡಿ, ಈಶಾನ್ಯ ಕರ್ನಾಟಕ ಸಾರಿಗೆ