ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಸ್ಸೆಸ್ಸೆಲ್ಸಿ ಟಾಪರ್ ರಂಜನ್ ಬಗ್ಗೆ ರಂಜನೀಯ ಟ್ರಾಲ್ಸ್

By Mahesh
|
Google Oneindia Kannada News

ಬೆಂಗಳೂರು, ಮೇ17: ಕರ್ನಾಟಕ ಎಸ್ಸೆಸ್ಸೆಲ್ಸಿ ಪರೀಕ್ಷೆ ಎಂದರೆ ಕಬ್ಬಿಣದ ಕಡಲೆ ಎನ್ನುವ ಕಾಲದಲ್ಲಿ ಔಟ್ ಆಫ್ ಔಟ್ ಮಾರ್ಕ್ಸ್ ತೆಗೆದು ಎಲ್ಲರ ಹುಬ್ಬೇರಿಸುವಂತೆ ಮಾಡಿದ First Rank ರಂಜಿತ್ ಈಗ ಸಾಮಾಜಿಕ ಜಾಲ ತಾಣಗಳಲ್ಲಿ ವರ್ಲ್ಡ್ ಫೇಮಸ್ ಆಗಿದ್ದಾರೆ.

ಗಣಿತ, ವಿಜ್ಞಾನ, ಸಮಾಜ ವಿಷಯಗಳಲ್ಲಿ ನೂರಕ್ಕೆ ನೂರು ಬಂದರೆ ನಂಬಬಹುದು, ಲ್ಯಾಂಗ್ವೇಜ್ ನಲ್ಲೂ ನೂರು ಬಂದಿದ್ಯಾ ಎಂದು ಮೂಗಿನ ಮೇಲೆ ಬೆರಳಿಟ್ಟು ಪ್ರಶ್ನೆ ಮಾಡಿದವರ ಸಂಖ್ಯೆ ನೂರು ದಾಟಿದೆ.[ಎಸೆಸ್ಸೆಲ್ಸಿ ಮಾರ್ಕ್ಸ್ ಕಾರ್ಡ್ ನೋಡಿ ಟೆನ್ಶನ್ ಆಗ್ಬೇಡಿ!]

Karnataka SSLC Toppers become victim of Trolls and memes0

ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಪೂರ್ಣಪ್ರಜ್ಞ ಶಾಲೆಯ ಬಿಎಸ್ ರಂಜನ್ ರನ್ನು ಫೇಸ್ ಬುಕ್ ನಲ್ಲಿ ಟ್ರಾಲ್ ಹೈಕ್ಳು ಸೇರಿದಂತೆ ಹಲವಾರು ಟ್ರಾಲ್ಸ್ ಹಾಗೂ ಮೀಮ್ಸ್ ತಂಡಗಳು ಫೇಮಸ್ ಮಾಡಿವೆ. [ಶಿರಸಿಯ ಮಹಿಮಾ ಭಟ್ ಸಂದರ್ಶನ]

ಹೆಚ್ಚಿನ ಟ್ರಾಲ್ ಗಳು ಹಾಸ್ಯಮಯವಾಗಿದ್ದು ತಕ್ಷಣಕ್ಕೆ ನಗೆ ಉಕ್ಕಿಸುತ್ತವೆ. ಕೆಲವು ತಂಡಗಳು ಕನ್ನಡ ಮಾಧ್ಯಮದಲ್ಲಿ ಓದಿ ಟಾಪರ್ ಆದವರಿಗೆ ಶುಭ ಹಾರೈಸಿದ್ದಾರೆ. [ಮೇಷ್ಟ್ರೇ 60 ಅಂಕ ಕೊಡಿ, ನಿಮಗೆ ಪುಣ್ಯ ಗ್ಯಾರಂಟಿ!]

{gallery-feature_1}

First Rank ರಾಜು ಗೆ ಹೋಲಿಕೆ ಮಾಡಿದ ಟ್ರಾಲ್ ಕೂಡಾ ಇದೆ. ನಂದು ಮುಖ್ಯ ಪರೀಕ್ಷೆ, ಸಪ್ಲಿಮೆಂಟರಿ ಮಾರ್ಕ್ಸ್ ಸೇರಿಸಿದರೂ 625 ಬರಲ್ಲ ಎನ್ನುವ ಟ್ರಾಲ್ ಇದೆ. [ಬೆಂಗಳೂರು ಗ್ರಾಮಾಂತರ ಫಸ್ಟ್, ಬಳ್ಳಾರಿ ಲಾಸ್ಟ್]

ರಂಗ ಎಸ್ಸೆಸ್ಸೆಲ್ಸಿ ಚಿತ್ರದ ಸ್ಟಿಲ್, ಕಾಶಿನಾಥ್ ಬಳಸಿಕೊಂಡು ಚಿತ್ರ, ಐಪಿಎಲ್ ನ ಆರೇಂಜ್ ಕ್ಯಾಪ್ ಧರಿಸಿದ ರಂಜನ್, ಪ್ರಧಾನಿ ಮೋದಿ ಅವರ ಮಾರ್ಕ್ಸ್ ಕಾರ್ಡ್ ಹಿಂದೆ ಬಿದ್ದಿರುವ ಕೇಜ್ರಿವಾಲ್ ಅವರಿರುವ ಟ್ರಾಲ್, ದಿನಕ್ಕೆ ಐದಾರು ಗಂಟೆ ಓದುತ್ತಿದ್ದೆ ಎನ್ನುವ ಟ್ರಾಲ್ ಗೆ ಉತ್ತರ ಹೀಗೆ ಥರಾವತಿ ಟ್ರಾಲ್ ಗಳು ನಿಮ್ಮ ಮುಂದಿವೆ.. ಆದರೆ, ರಂಜನ್ ಮುಂದೆ ರಾಜು ಥರಾ ಆಗುವುದು ಬೇಡ ಎಂದು ಹಲವಾರು ಮಂದಿ ಹಾರೈಸಿದ್ದಾರೆ.

English summary
Karnataka SSLC Topper B.S Ranjan, Poornaprajna School, Bhadravathi, Shivamogga who got 625/625 in marks has become victim of Trolls and memes. Many congratulated, teased him and other topper with the wit and wisdom.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X