ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಸ್ಸೆಸ್ಸೆಲ್ಸಿ ಫಲಿತಾಂಶ : ಭಾರೀ ಕುಸಿತ ಕಂಡ ಬೆಂಗಳೂರು ಗ್ರಾಮಾಂತರ

By Prasad
|
Google Oneindia Kannada News

ಬೆಂಗಳೂರು, ಮೇ 12 : ಕಳೆದ ವರ್ಷ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳನ್ನು ಹಿಂದಿಕ್ಕಿ 1ನೇ ಸ್ಥಾನಕ್ಕೆ ಲಗ್ಗೆ ಹಾಕಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಏನಾಗಿದೆ? ಪ್ರಸಕ್ತ ವರ್ಷ ಎಸ್ಸೆಸ್ಸೆಲ್ಸಿಯಲ್ಲಿ ಬೆಂಗಳೂರು ಗ್ರಾಮಾಂತರ 1ನೇ ಸ್ಥಾನದಲ್ಲಿ 10ನೇ ಸ್ಥಾನಕ್ಕೆ ಪತನ ಕಂಡಿದೆ.

ಈ ವರ್ಷ ಶೇ.77.03ಯಷ್ಟು ವಿದ್ಯಾರ್ಥಿ ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ. ಕಳೆದ ವರ್ಷ ಬೆಂಗಳೂರು ಗ್ರಾಮಾಂತರದಲ್ಲಿ ಶೇ.89.85ದಷ್ಟು ವಿದ್ಯಾರ್ಥಿ ವಿದ್ಯಾರ್ಥಿನಿಯರು ತೇರ್ಗಡೆಯಾಗಿದ್ದರು. ಈಗ ಈ ಕುಸಿತಕ್ಕೆ ಕಾರಣವೇನೆಂದು ಜಿಲ್ಲಾ ಶಿಕ್ಷಣಾಧಿಕಾರಿಗಳು ಕಂಡುಕೊಳ್ಳಬೇಕಾಗಿದೆ.[ಎಸ್ಎಸ್ಎಲ್ ಸಿ ಫಲಿತಾಂಶಪ್ರಕಟ, 3 ಗಂಟೆಗೆ ಆನ್ಲೈನಲ್ಲಿ ಲಭ್ಯ]

Karnataka SSLC results 2017 : Bengaluru Rural slips to 10th position

ಪಿಯುಸಿಯಂತೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳೆರಡು ಎಸ್ಸೆಸ್ಸೆಲ್ಸಿಯಲ್ಲಿಯೂ ಮೊದಲ ಸ್ಥಾನ ಪಡೆದಿವೆ. ಉಡುಪಿಯಲ್ಲಿ ಶೇ.84.23 ಮತ್ತು ದಕ್ಷಿಣ ಕನ್ನಡದಲ್ಲಿ ಶೇ.82.39ರಷ್ಟು ವಿದ್ಯಾರ್ಥಿ ವಿದ್ಯಾರ್ಥಿನಿಯರು ತೇರ್ಗಡೆಯಾಗಿದ್ದಾರೆ.[SSLC ಫಲಿತಾಂಶ : ಉಡುಪಿಗೆ ಮೊದಲ ಸ್ಥಾನ, ಬೀದರ್ ಗೆ ಕೊನೆ ಸ್ಥಾನ]

ಕಳೆದ ವರ್ಷ 6ನೇ ಸ್ಥಾನಕ್ಕೆ ಕುಸಿದಿದ್ದ ಚಿಕ್ಕೋಡಿ ಜಿಲ್ಲೆ ಈ ಬಾರಿ ಉತ್ತಮ ಸಾಧನೆ ತೋರಿದ್ದು, 3ನೇ ಸ್ಥಾನ ಪಡೆಯುವಲ್ಲಿ ಸಫಲವಾಗಿದೆ. ಅಲ್ಲಿ ಶೇ.80.47ರಷ್ಟು ವಿದ್ಯಾರ್ಥಿ ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ. ಬೀದರ್ ಜಿಲ್ಲೆಯ ಪಿಯುಸಿಯಂತೆ ಎಸ್ಸೆಸ್ಸೆಲ್ಸಿಯಲ್ಲಿಯೂ ಕಡೆಯ ಸ್ಥಾನ ಪಡೆದಿದೆ.

ಆಘಾತಕಾರಿ ಸಂಗತಿಯೆಂದರೆ, ಹಲವಾರು ವರ್ಷಗಳಿಂದ ಉತ್ತಮ ಸಾಧನೆ ತೋರುತ್ತಿದ್ದ ಮೈಸೂರು ಈ ವರ್ಷ 21ನೇ ಸ್ಥಾನಕ್ಕೆ ಕುಸಿದಿದೆ. ಕಳೆದವರ್ಷ ಮೈಸೂರು 8ನೇ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿತ್ತು. ಈಬಾರಿ ಶೇ.72.03ರಷ್ಟು ಮಾತ್ರ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

ಚಿಕ್ಕಮಗಳೂರು ಜಿಲ್ಲೆ ಕೂಡ ಕಳಪೆ ಸಾಧನೆ ತೋರಿದೆ. ಕಳೆದ ವರ್ಷ 5ನೇ ಸ್ಥಾನದಲ್ಲಿದ್ದ ಚಿಕ್ಕಮಗಳೂರು ಈವರ್ಷ 18ನೇ ಸ್ಥಾನಕ್ಕೆ ಕುಸಿದಿದೆ. ಕಳೆದ ವರ್ಷ 21ನೇ ಸ್ಥಾನದಲ್ಲಿದ್ದ ಕೋಲಾರ ಈಬಾರಿ 7ನೇ ಸ್ಥಾನದಲ್ಲಿದ್ದು ಅಚ್ಚರಿ ಮೂಡಿಸಿದೆ. ಪಾಸಾದ ಎಲ್ಲ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಅಭಿನಂದನೆಗಳು.

English summary
Bengaluru Rural district, which stood in the 1st place in last year SSLC Examination result, has slipped to 10th place in 2017. Udupi and Dakshina Kannada have secured the 1st and 2nd position just like Karnataka 2nd PUC. Mysuru and Chikkamagalur have done badly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X