ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಸ್ಸೆಸ್ಸೆಲ್ಸಿ ಶುಲ್ಕ ಗಡುವು ವಿಸ್ತರಣೆ ಮಾಡಿದ ಪ್ರೌಢ ಶಿಕ್ಷಣ ಮಂಡಳಿ

2018ರ ಎಸ್ಸೆಸ್ಸೆಲ್ಸಿ ಪರೀಕ್ಷೆ ತೆಗೆದುಕೊಳ್ಳುವ ವಿದ್ಯಾರ್ಥಿಗಳ ಶುಲ್ಕ ಗಡುವು ವಿಸ್ತರಣೆ. ಈ ಬಗ್ಗೆ ಆದೇಶ ಹೊರಡಿಸಿದ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ.

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 7: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು 2018 ಏಪ್ರಿಲ್ ತಿಂಗಳಿನಲ್ಲಿ ನಡೆಯಲಿರುವ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಕುಳಿತುಕೊಳ್ಳುವ ವಿದ್ಯಾರ್ಥಿಗಳ ಶುಲ್ಕ ಹಾಗೂ ನಾಮಿನಲ್ ರೋಲ್ ಪ್ರಸ್ತಾವನೆಗಳನ್ನು ಸಲ್ಲಿಸುವ ದಿನಾಂಕವನ್ನು ವಿಸ್ತರಿಸಿ ಆದೇಶ ಹೊರಡಿಸಿದೆ.

ಖಾಸಗಿ ಅಭ್ಯರ್ಥಿಗಳು ಜಿಲ್ಲಾ ಉಪ ನಿರ್ದೇಶಕರ ಕಚೇರಿಯಲ್ಲಿ ನೋಂದಣಿ ಮಾಡಿಕೊಳ್ಳಲು ಕೊನೆಯ ದಿನಾಂಕ ಸೆಪ್ಟೆಂಬರ್ 12ರಂದು ಕೊನೆಯ ದಿನ ಆಗಿದೆ.

Karnataka Secondary Exam Board extended its deadline of fee payment

ಶಾಲಾ ಆಡಳಿತ ಮಂಡಳಿಗಳು ಶಾಲಾ, ಖಾಸಗಿ ಹಾಗೂ ಪುನರಾವರ್ತಿತ ಅಭ್ಯರ್ಥಿಗಳಿಂದ ಪರೀಕ್ಷಾ ಶುಲ್ಕ ಸ್ವೀಕಾರ ಮಾಡಲು ಸೆಪ್ಟೆಂಬರ್ 14ರಂದು ಕೊನೆಯ ದಿನವಾಗಿದೆ.

ಪರೀಕ್ಷಾ ಶುಲ್ಕವನ್ನು ಬ್ಯಾಂಕಿಗೆ ಎನ್‍ಎಎಫ್‍ಟಿ ಚಲನ್ ಮೂಲಕ ಜಮೆ ಮಾಡಲು ಸೆಪ್ಟೆಂಬರ್ 16 ಕಡೆಯ ದಿನವಾಗಿದ್ದು, ನಾಮಿನಲ್ ರೋಲ್ ಪ್ರಸ್ತಾವನೆ ಹಾಗೂ ಬ್ಯಾಂಕ್ ಚಲನ್‍ನ ಮೂಲ ಪ್ರತಿ ಶಾಲೆಗಳಿಂದ ಮಂಡಳಿಗೆ ತಲುಪಿಸಲು ಸೆಪ್ಟೆಂಬರ್ 21ರಂದು ಅಂತಿಮ ದಿನವಾಗಿರುತ್ತದೆ.

ಇದಲ್ಲದೆ, ಹೊಸದಾಗಿ ಶಾಲಾ ಸಂಕೇತವನ್ನು ಮಂಡಳಿಯಿಂದ ಪಡೆಯಲು ಇದ್ದ ಕೊನೆಯ ದಿನಾಂಕವನ್ನು ಸೆಪ್ಟೆಂಬರ್ 12ರವರೆಗೆ ವಿಸ್ತರಿಸಲಾಗಿದೆ.

ಮೇಲ್ಕಂಡ ವಿಸ್ತರಣೆ ದಿನಾಂಕಗಳವರೆಗೆ ವಿದ್ಯಾರ್ಥಿಗಳಿಂದ ಶುಲ್ಕ ಸ್ವೀಕರಿಸಬಹುದಾಗಿದೆ ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಹೇಳಿದೆ.

English summary
Karnataka Secondary Exam Board has extended its deadline for the pay the fee of the students who will be taking SSLC exam next year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X