ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದ್ವಿತೀಯ ಪಿಯುಸಿ ಪರೀಕ್ಷೆ ಪಾರಂಭ, No ಹಿಜಾಬ್, No ಕೋವಿಡ್

|
Google Oneindia Kannada News

ಬೆಂಗಳೂರು, ಏಪ್ರಿಲ್ 22: ರಾಜ್ಯಾದ್ಯಂತ ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆಗಳು ಪ್ರಾರಂಭವಾಗುತ್ತಿದೆ. ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಯಾವುದೇ ಗೊಂದಲಗಳಿಲ್ಲ ಯಶಸ್ವಿಯಾಗಿತ್ತು. ದ್ವಿತೀಯ ಪಿಯುಸಿಯಲ್ಲೂ ಯಾವುದೇ ಗೊಂದಲವಿಲ್ಲದೇ ನಡೆಸಲು ಶಿಕ್ಷಣ ಇಲಾಖೆ ಸಂಪೂರ್ಣವಾಗಿ ಸಜ್ಜಾಗಿದೆ. ಕಾಲೇಜು ವಿದ್ಯಾರ್ಥಿನಿಯರಿಂದಲೇ ಪಾರಂಭವಾದ ಹಿಜಾಬ್ ಗೊಂದಲಕ್ಕಿಡುಮಾಡಿತ್ತು. ಸಮವಸ್ತ್ರವನ್ನು ಕಡ್ಡಾಯವಾಗಿ ಧರಿಬೇಕು. ಹಿಜಾಬ್ ಧರಿಸಿ ಬಂದರೆ ಪರೀಕ್ಷೆಗೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿತ್ತು.

ಪರೀಕ್ಷೆಗಾಗಿ ಇಲಾಖೆ ಹೊರಡಿಸಿದ ಮಾರ್ಗಸೂಚಿ ಹೀಗಿದೆ:

* SSLC ರೀತಿಯೇ ಪಿಯು ಪರೀಕ್ಷೆಗೂ ಸಮವಸ್ತ್ರ ನಿಯಮ ಜಾರಿ

* ಹಿಜಾಬ್ ಧರಿಸಿ ಬಂದ್ರೆ ಪರೀಕ್ಷೆಗಿಲ್ಲ ಅವಕಾಶ

* ಪರೀಕ್ಷಾರ್ಥಿಗಳಿಗೆ ಸಮವಸ್ತ್ರ ಪಾಲನೆ ನಿಯಮ ಕಡ್ಡಾಯ

* ಆಯಾ ಕಾಲೇಜು ಅಭಿವೃದ್ಧಿ ಸಮಿತಿ ನಿಗದಿಪಡಿಸಿದ ಸಮವಸ್ತ್ರ ಪಾಲನೆ ಕಡ್ಡಾಯ

* ಸಮವಸ್ತ್ರವಿಲ್ಲದ ಕಡೆ ಯಾವುದೇ ಧರ್ಮ ಸೂಚಕ ವಸ್ತ್ರ ಧರಿಸುವಂತಿಲ್ಲ

* ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಧಾರ್ಮಿಕ ಉಡುಪಿಗೆ ಅವಕಾಶವಿಲ್ಲ

* ಪುನರಾವರ್ತಿತ ಹಾಗೂ ಖಾಸಗಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ಕಡ್ಡಾಯವಿಲ್ಲ

* ರಿಪೀಟರ್ಸ್ ಮತ್ತು ಪ್ರೈವೇಟ್ ಅಭ್ಯರ್ಥಿಗಳಿಗೆ ಸಮವಸ್ತ್ರದಿಂದ ವಿನಾಯ್ತಿ.

ಶಿಕ್ಷಣ ಇಲಾಖೆ ಸಮವಸ್ತ್ರವನ್ನು ಕಡ್ಡಾಯಗೊಳಿಸಿದೆ. ನಮಗೆ ಹಿಜಾಬ್‌ಗಿಂತಲೂ ಪರೀಕ್ಷೆ ಮುಖ್ಯ ಪರೀಕ್ಷೆಯ ಕೊಠಡಿಗೆ ಹೋಗುವ ಮೊದಲು ಹಿಜಾಬ್ ತೆಗೆಯುತ್ತೇವೆ ಎಂದ ಮಲ್ಲೇಶ್ವರಂ ಬಾಲಕರ ಪದವಿ ಪೂರ್ವ ಕಾಲೇಜ್ ಬಳಿ ಆಸೀಯಾ ಎಂಬ ವಿದ್ಯಾರ್ಥಿ ಹೇಳಿದ್ದಾಳೆ.

Karnataka Second puc Exam from April 22, Guidelines and restrictions with No Hijab

ಕೋವಿಡ್ ಮುಕ್ತ ಪರೀಕ್ಷೆ: ಕೋವಿಡ್ ಇದ್ದರೇ ತಮ್ಮ ಹೆಸರು ರಿಜಿಸ್ಟಾರ್ ನಂಬರ್ ನೋಂದಾಯಿಸಲು ಶಿಕ್ಷಣ ಇಲಾಖೆ ಸೂಚನೆಯನ್ನು ನೀಡಿತ್ತು. ಯಾರಾದರೂ ಹೆಸರನ್ನು ನೊಂದಾಯಿಸಿದ್ದರೇ ಅವರಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಸಿಗುತ್ತಿತ್ತು. ಆದರೆ ಯಾವೊಬ್ಬ ವಿದ್ಯಾರ್ಥಿಯು ಕೋವಿಡ್ ಸಂಬಂಧಿಸಿದಂತೆ ತಮ್ಮ ಹೆಸರನ್ನು ನೊಂದಾಯಿಸಿಲ್ಲ ಹೀಗಾಗಿ ಕಳೆದ ಎರಡು ವರ್ಷಗಳ ಬಳಿಕ ಕೋವಿಡ್ ಮುಕ್ತವಾಗಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯುತ್ತಿದ್ದಾರೆ.

ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿ ಹೀಗಿದೆ

ಏ. 22 - ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ

ಏ. 23 - ಗಣಿತ ಶಾಸ್ತ್ರ, ಶಿಕ್ಷಣ ಶಾಸ್ತ್ರ

ಏ. 25 - ಅರ್ಥಶಾಸ್ತ್ರ

ಏ. 26 - ಮನಶ್ಶಾಸ್ತ್ರ, ರಸಾಯನ ಶಾಸ್ತ್ರ, ಹಿಂದೂಸ್ಥಾನಿ ಸಂಗೀತ

Karnataka Second puc Exam from April 22, Guidelines and restrictions with No Hijab

ಏ. 28 - ಕನ್ನಡ

ಮೇ 4 - ಭೂಗೋಳಶಾಸ್ತ್ರ, ಜೀವಶಾಸ್ತ್ರ

ಮೇ 5 - ಮಾಹಿತಿ ತಂತ್ರಜ್ಞಾನ, ರಿಟೈಲ್ ಆಟೋಮೊಬೈಲ್, ಹೆಲ್ತ್ ಕೇರ್ ಬ್ಯೂಟಿ ಅಂಡ್ ವೆಲ್ ನೆಸ್

ಮೇ 6 - ಇಂಗ್ಲಿಷ್

ಮೇ 10 - ಇತಿಹಾಸ, ಭೌತಶಾಸ್ತ್ರ

ಮೇ 12 - ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ

ಮೇ 14 - ಸಮಾಜಶಾಸ್ತ್ರ, ಗಣಕ ವಿಜ್ಞಾನ, ವಿದ್ಯುನ್ಮಾನ ಶಾಸ್ತ್ರ

ಮೇ 17 - ಐಚ್ಚಿಕ ಕನ್ನಡ, ಲೆಕ್ಕ ಶಾಸ್ತ್ರ, ಭೂಗರ್ಭ ಶಾಸ್ತ್ರ, ಗೃಹವಿಜ್ಞಾನ

ಮೇ 18 - ಹಿಂದಿ

Karnataka Second puc Exam from April 22, Guidelines and restrictions with No Hijab

ಪರೀಕ್ಷೆ ಸಮಯ:

* ಬೆಳಗ್ಗೆ 10:15ರಿಂದ ಮಧ್ಯಾಹ್ನ 1:30ರವರೆಗೆ ಪರೀಕ್ಷೆ

ಎಷ್ಟು ವಿದ್ಯಾರ್ಥಿಗಳು ಪರೀಕ್ಷೆ ಹಾಜರಾಗುತ್ತಿದ್ದಾರೆ?

ಒಟ್ಟು 6,84,255 ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಣಿ

ಈ ಪೈಕಿ 3,46,936 ಬಾಲಕರು ಹಾಗೂ 3,37,319 ಬಾಲಕಿಯರು

ರೆಗ್ಯುಲರ್ ವಿದ್ಯಾರ್ಥಿಗಳು- 6,00,519

ಪುನರಾವರ್ತಿತ ಅಭ್ಯರ್ಥಿಗಳು- 61,808

ಖಾಸಗಿ ಅಭ್ಯರ್ಥಿಗಳು- 21,928

Karnataka Second puc Exam from April 22, Guidelines and restrictions with No Hijab

ರಾಜ್ಯಾದ್ಯಂತ ಒಟ್ಟು 1,076 ಕೇಂದ್ರಗಳಲ್ಲಿ ಪರೀಕ್ಷೆಗೆ ವ್ಯವಸ್ಥೆ

ಕಲಾ ವಿಭಾಗ 2,28,167

ವಾಣಿಜ್ಯ ವಿಭಾಗ 2,45,519

ವಿಜ್ಞಾನ ವಿಭಾಗ 2,10,569

ಒಟ್ಟು 5,241 ಕಾಲೇಜುಗಳಿಂದ ಪರೀಕ್ಷೆಗೆ ನೊಂದಣಿ

ಪರೀಕ್ಷಾ ಕೇಂದ್ರದ ಸುತ್ತ 144 ಸೆಕ್ಷನ್ ಜಾರಿ ಇರುತ್ತೆ

ಪರೀಕ್ಷಾ ಕೇಂದ್ರದ 200 ಮೀಟರ್ ನಿಷೇದಾಜ್ಞೆ ಜಾರಿ
ಪರೀಕ್ಷಾ ಕೇಂದ್ರದ ಸಮೀಪದ ಜೆರಾಕ್ಸ್ ಶಾಪ್ಸ್ ಕ್ಲೋಸ್
ಪರೀಕ್ಷಾ ಅವಧಿಯಲ್ಲಿ ಜೆರಾಕ್ಸ್ ಅಂಗಡಿಗಳಿಗೆ ಬೀಗ

Recommended Video

Pollard ಹಾಗು Dhoni ಜೊತೆಗೆ ಆತ್ಮೀಯ ಗೆಳೆಯರ ಒಡನಾಟ | Oneindia Kannada

2020-21ರಲ್ಲಿ ಕೊರೊನಾ ಹಿನ್ನೆಲೆ ಪರೀಕ್ಷೆ ಇಲ್ಲದೆ ಪಾಸ್ ಮಾಡಲಾಗಿತ್ತು. ಈ ಶೈಕ್ಷಣಿಕ ವರ್ಷ ಎಸ್ ಎಸ್ ಎಲ್ ಸಿ ಯಂತೆ ಸರಳೀಕೃತ ಪರೀಕ್ಷೆ ನಡೆಸಲಾಗುತ್ತಿದ್ದು ವಿದ್ಯಾರ್ಥಿಗಳು ಯಾವುದೇ ಗೊಂದಲ ಆತಂಕವಿಲ್ಲದೆ ಪರೀಕ್ಷೆ ಬರೆಯಲು ಶಿಕ್ಷಣ ಸಚಿವ ಬಿಸಿ ನಾಗೇಶ್ ಶುಭ ಹಾರೈಸಿದ್ದಾರೆ.

English summary
The secondary PUC exams began today The Department of Education has made the uniform mandatory for the cause of hijab confusion. This time exam is conducted with Covid 19 free as declared by the Department of Education.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X