ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ಸೋಂಕಿಗೆ ಬಲಿಯಾದ ಖ್ಯಾತ ಶಿಲ್ಪಿ ಕನಕಾ ಮೂರ್ತಿ

|
Google Oneindia Kannada News

ಬೆಂಗಳೂರು, ಮೇ 14: ಖ್ಯಾತ ಶಿಲ್ಪಿ ಕನಕಾ ಮೂರ್ತಿ ಅವರು ಕೋವಿಡ್-19 ನಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ನಿಧನರಾಗಿದ್ದಾರೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.

79 ವರ್ಷದ ಕನಕಾ ಮೂರ್ತಿ ಕೆಲವು ದಿನಗಳ ಹಿಂದೆ ಕೋವಿಡ್ ರೋಗಲಕ್ಷಣಗಳನ್ನು ಹೊಂದಿದ್ದರಿಂದ ಮನೆಯಲ್ಲಿಯೇ ಸಂಪರ್ಕತಡೆಗೆ ಒಳಗಾಗಿದ್ದರು. ನಂತರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದರಿಂದ ಆಸ್ಪತ್ರೆಗೆ ಸಾಗಿಸಲಾಗಿತ್ತು, ಚಿಕಿತ್ಸೆ ಫಲಕಾರಿಯಾಗದೆ ಅವರು ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದರು. ಪತಿ ನಾರಾಯಣ ಮೂರ್ತಿ ಮತ್ತು ಮಗಳು ಸುಮತಿಯನ್ನು ಅಗಲಿದ್ದಾರೆ.

ಗದಗಿನ ಬ್ರಾಹ್ಮಣ ಪೋಷಕರಿಗೆ ಜನಿಸಿದ ಕನಕಾ ಮೂರ್ತಿ, ಪುರುಷ ಪ್ರಾಬಲ್ಯವಿರುವ ಕ್ಷೇತ್ರದಲ್ಲಿ ತನಗಾಗಿ ಒಂದು ಸ್ಥಾನವನ್ನು ನಿರ್ಮಿಸಿಕೊಂಡಿದ್ದಾರೆ. ಮೈಸೂರಿನ ದೇವಾಲಯವೊಂದಕ್ಕೆ ಭೇಟಿ ನೀಡಿದಾಗ, ಕನಕಾ ಮೂರ್ತಿ ಶಿಲ್ಪಕಲೆಯಲ್ಲಿ ವೃತ್ತಿಯನ್ನು ಆರಿಸಿಕೊಂಡರು. ಸುತ್ತಿಗೆ ಮತ್ತು ಉಳಿ ಅವರ ಶಾಶ್ವತ ಸ್ನೇಹಿತರಾದರು.

Karnatakas Famous Woman Sculptor Kanaka Murthy Dies Due To Covid-19

ಕನಕಾ ಮೂರ್ತಿ ಅವರ ನಿಧನಕ್ಕೆ ಶೋಕ ವ್ಯಕ್ತಪಡಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್ ನಾಗಾಭರಣ ಅವರು, ""ಶಿಲ್ಪಕಲೆಯನ್ನು ವೃತ್ತಿಯಾಗಿ ತೆಗೆದುಕೊಂಡಿದ್ದಕ್ಕಾಗಿ ಕನಕಾ ಮೂರ್ತಿಯವರು ವಿರೋಧವನ್ನು ಎದುರಿಸಬೇಕಾಯಿತು. ಆದರೆ, ಅವರ ಉತ್ಸಾಹದ ಬದ್ಧತೆಯು ಅವರನ್ನು ತನ್ನ ಗುರು ವಾದಿರಾಜ ಅವರ ಬಳಿಗೆ ಕರೆದೊಯ್ಯಿತು, ನಂತರ ಅವರು ಪ್ರಸಿದ್ಧ ಶಿಲ್ಪಿಗಳಾಗಿ ರೂಪುಗೊಂಡರು'' ಎಂದಿದ್ದಾರೆ.

Recommended Video

Covidನಿಂದ ಗುಣಮುಖರಾದವರು ತಕ್ಷಣ ಲಸಿಕೆ ತೆಗೆದುಕೊಳ್ಳಬೇಡಿ | Oneindia Kannada

ಬೆಂಗಳೂರಿನ ಲಾಲ್‌ಬಾಗ್ ಬಳಿಯಿರುವ ಕನ್ನಡ ಕವಿ ಕುವೆಂಪು ಅವರ ಪ್ರತಿಮೆ, ನಗರದ ವಿಶ್ವೇಶ್ವರಯ ಮ್ಯೂಸಿಯಂ ಹೊರಗಿನ ರೈಟ್ ಬ್ರದರ್ಸ್, ಗಂಗೂಬಾಯಿ ಹಾನಗಲ್, ಭೀಮಸೇನ್ ಜೋಶಿ ಮತ್ತು ಕೆ.ಎಂ.ಮುನ್ಶಿ ಅವರ ಅದ್ಭುತ ಕೆತ್ತನೆ ಮತ್ತು ಕೈಚಳಕಕ್ಕೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.

English summary
Renowned woman sculptor Kanaka Murthy died on Thursday at a private hospital in Bangalore to Covid-19, according to his family sources.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X