ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking: ರಾಜ್ಯದಲ್ಲಿಂದು 947 ಕೇಸ್, ಬೆಂಗಳೂರಿನಲ್ಲಿ ಎಷ್ಟು?

|
Google Oneindia Kannada News

ಬೆಂಗಳೂರು, ಜೂನ್ 30: ಕರ್ನಾಟಕದಲ್ಲಿ ಇಂದು 947 ಜನರಿಗೆ ಕೊರೊನಾ ವೈರಸ್ ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 15242ಕ್ಕೆ ಏರಿಕೆಯಾಗಿದೆ.

ಇಂದು ವರದಿಯಾದ ಪಟ್ಟು ಸೋಂಕಿನ ಪೈಕಿ ಬೆಂಗಳೂರಿನಲ್ಲಿ 503 ಪ್ರಕರಣಗಳು ಪತ್ತೆಯಾಗಿದೆ. ಕಳೆದ ಎರಡು ದಿನಕ್ಕೆ ಹೋಲಿಸಿಕೊಂಡರೆ ಸಿಲಿಕಾನ್‌ ಸಿಟಿಯಲ್ಲಿ ಇಂದು ಕಡಿಮೆ ಸೋಂಕು ವರದಿಯಾಗಿದೆ.

ಬಳ್ಳಾರಿ 61 ಕೇಸ್, ಹಾವೇರಿಯಲ್ಲಿ 49 ಕೇಸ್, ದಕ್ಷಿಣ ಕನ್ನಡದಲ್ಲಿ 44 ಪ್ರಕರಣ, ಉತ್ತರ ಕನ್ನಡದಲ್ಲಿ 40 ಜನರಿಗೆ ಸೋಂಕು, ವಿಜಯಪುರದಲ್ಲಿ 39 ಕೇಸ್, ಶಿವಮೊಗ್ಗದಲ್ಲಿ 22 ಪ್ರಕರಣ, ಬೆಂಗಳೂರು ಗ್ರಾಮಾಂತರದಲ್ಲಿ 21 ಕೇಸ್, ಬೀದರ್ ಹಾಗೂ ಧಾರವಾಡದಲ್ಲಿ ತಲಾ 17 ಕೇಸ್ ವರದಿಯಾಗಿದೆ.

Karnataka Reports 947 New Covid19 Positive Cases On June 30

ಹಾಸನದಲ್ಲಿ 15 ಪ್ರಕರಣ, ಕಲಬುರಗಿ ಮತ್ತು ರಾಯಚೂರಿನಲ್ಲಿ ತಲಾ 15 ಕೇಸ್, ಚಿಕ್ಕಬಳ್ಳಾಪುರದಲ್ಲಿ 13 ಸೋಂಕು, ದಾವಣಗೆರೆ ಹಾಗೂ ರಾಮನಗರದಲ್ಲಿ ತಲಾ 12 ಕೇಸ್ ಹಾಗೂ ಚಿಕ್ಕಮಗಳೂರಿನಲ್ಲಿ 10 ಕೇಸ್ ದಾಖಲಾಗಿದೆ.

ಇಂದು 239 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಈ ವರೆಗೂ 7918 ಜನರು ಕೊರೊನಾದಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇಂದು ಒಂದೇ ದಿನ 20 ಜನರು ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 246ಕ್ಕೆ ಏರಿದೆ.

English summary
Karnataka reports 947 new #COVID19 positive cases including 503 cases from Bengaluru Urban, taking the total number of cases to 15242.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X