ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking: ಕರ್ನಾಟಕದಲ್ಲಿ ಇಂದು 7 ಸಾವಿರ ಕೊರೊನಾ ಕೇಸ್ ಪತ್ತೆ

|
Google Oneindia Kannada News

ಬೆಂಗಳೂರು, ಆಗಸ್ಟ್ 8: ಕರ್ನಾಟಕದಲ್ಲಿ ಇಂದು ಒಂದೇ ದಿನ 7178 ಜನರಿಗೆ ಕೊರೊನಾ ವೈರಸ್ ತಗುಲಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಇಂದಿನ ವರದಿ ಬಳಿಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 172,102ಕ್ಕೆ ಏರಿದೆ.

Recommended Video

online ಕೆಲ್ಸಕ್ಕೆ ಅವಕಾಶ ಮಾಡಿಕೊಟ್ಟ ಸರ್ಕಾರ | Oneindia Kannada

ಬೆಂಗಳೂರಿನಲ್ಲಿ ಇಂದು 2,665 ಮಂದಿಗೆ ಕೊವಿಡ್ ಅಂಟಿಕೊಂಡಿದೆ. ಈ ಮೂಲಕ ಸಿಲಿಕಾನ್ ಸಿಟಿಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 72237ಕ್ಕೆ ಏರಿದೆ. ಇಲ್ಲಿಯವರೆಗೂ ನಗರದಲ್ಲಿ 1218 ಮಂದಿಗೆ ಸಾವನ್ನಪ್ಪಿದ್ದಾರೆ.

ರಾಜ್ಯದಲ್ಲಿ ಒಟ್ಟು 89238 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದರೆ, 79,765 ಕೇಸ್‌ಗಳು ಸಕ್ರಿಯವಾಗಿದೆ. ಕಳೆದ 24 ಗಂಟೆಯಲ್ಲಿ 93 ಜನ ಕೊರೊನಾ ಸೋಂಕಿತರ ಸಾವನ್ನಪ್ಪಿದ್ದು, ಒಟ್ಟು ಸಾವಿನ ಸಂಖ್ಯೆ 3091.

karnataka reports 7178 covid19 case in the last 24 hours

ಇಂದು 5006 ಜನರು ಗುಣಮುಖರಾಗಿದ್ದಾರೆ. ಪ್ರಸ್ತುತ ಐಸಿಯುನಲ್ಲಿ 683 ಜನರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಜಿಲ್ಲೆವಾರು ಇಂದಿನ ಕೇಸ್‌ಗಳು
ಬಳ್ಳಾರಿ 607 ಕೇಸ್, ಉಡುಪಿ 313 ಕೇಸ್, ಬೆಳಗಾವಿ 302 ಕೇಸ್, ರಾಯಚೂರು 295 ಕೇಸ್, ಕಲಬುರಗಿ 261 ಕೇಸ್, ಧಾರಾವಾಡ 261 ಕೇಸ್, ಯಾದಗಿರಿ 200 ಕೇಸ್, ದಕ್ಷಿಣ ಕನ್ನಡ 194 ಕೇಸ್, ತುಮಕೂರು 177 ಕೇಸ್, ಕೊಪ್ಪಳ 163 ಕೇಸ್, ಬಾಗಲಕೋಟೆ 149 ಕೇಸ್, ವಿಜಯಪುರ 143 ಕೇಸ್, ಮೈಸೂರು 138 ಕೇಸ್, ಹಾಸನ 133 ಕೇಸ್, ದಾವಣಗೆರೆ 132 ಕೇಸ್, ಉತ್ತರ ಕನ್ನಡ 117 ಕೇಸ್, ಮಂಡ್ಯ 101 ಕೇಸ್ ವರದಿಯಾಗಿದೆ.

English summary
7178 new Covid cases (including 2665 in Bengaluru Urban), 93 deaths & 5006 discharges reported in Karnataka in the last 24 hours.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X