ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರ್ನಾಟಕದಲ್ಲಿಂದು 4537 ಜನರಿಗೆ ಕೊರೊನಾ ಸೋಂಕು

|
Google Oneindia Kannada News

ಬೆಂಗಳೂರು, ಜುಲೈ 18: ಕರ್ನಾಟಕದಲ್ಲಿ ಇಂದು 4537 ಜನರಿಗೆ ಕೊರೊನಾ ವೈರಸ್ ತಗುಲಿದೆ. ಈ ಮೂಲಕ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ದಿನವೊಂದರಲ್ಲಿ ಅತಿ ಹೆಚ್ಚು ಸೋಂಕು ವರದಿಯಾಗಿದೆ.

Recommended Video

ಕೊರೊನ ವಿರುದ್ಧದ ಯುದ್ಧದಲ್ಲಿ ಗೆದ್ದ Sharath Bacche Gowda | Oneindia Kannada

ಇಂದಿನ ವರದಿ ಬಳಿಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 59632ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಒಂದೇ ದಿನ 2125 ಜನರಿಗೆ ಕೊವಿಡ್ ದೃಢವಾಗಿದೆ. ಈ ಮೂಲಕ ಸಿಲಿಕಾನ್ ಸಿಟಿಯಲ್ಲೂ ಸೋಂಕಿತರ ಸಂಖ್ಯೆ 29621ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಇಂದು ಒಂದೇ ದಿನ 93 ಮಂದಿ ಸೋಂಕಿನಿಂದ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಅದರಲ್ಲಿ ಬೆಂಗಳೂರಿನಲ್ಲಿ 49 ಜನರು ಸಾವನ್ನಪ್ಪಿದ್ದಾರೆ. ಈವರೆಗೂ ಸಿಲಿಕಾನ್ ಸಿಟಿಯಲ್ಲಿ 631 ಜನರು ಮೃತಪಟ್ಟಿದ್ದಾರೆ.

ಭಾರತದಲ್ಲಿ ಒಂದೇ ದಿನ 671 ಸಾವು, 34,884 ಮಂದಿಗೆ ಕೊರೊನಾ ಸೋಂಕುಭಾರತದಲ್ಲಿ ಒಂದೇ ದಿನ 671 ಸಾವು, 34,884 ಮಂದಿಗೆ ಕೊರೊನಾ ಸೋಂಕು

Karnataka Reports 4537 COVID 19 cases in the last 24 hours

ಬೆಂಗಳೂರು ಹೊರತು ಪಡಿಸಿ ದಕ್ಷಿಣ ಕನ್ನಡದಲ್ಲಿ ಇಂದು 509 ಮಂದಿಗೆ ಸೋಂಕು ತಗುಲಿದೆ. ಈ ಮೂಲಕ ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ಜಿಲ್ಲೆಗಳ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಿದೆ.

ಧಾರವಾಡದಲ್ಲಿ 186 ಕೇಸ್, ವಿಜಯಪುರದಲ್ಲಿ 176 ಕೇಸ್, ಬಳ್ಳಾರಿಯಲ್ಲಿ 155 ಕೇಸ್, ಬೆಳಗಾವಿಯಲ್ಲಿ 137 ಕೇಸ್, ಉತ್ತರ ಕನ್ನಡದಲ್ಲಿ 116 ಪ್ರಕರಣ, ಶಿವಮೊಗ್ಗದಲ್ಲಿ 114 ಕೇಸ್, ಉಡುಪಿಯಲ್ಲಿ 109 ಸೋಂಕು, ಚಿಕ್ಕಬಳ್ಳಾಪುರದಲ್ಲಿ 107 ಕೇಸ್, ಮೈಸೂರಿನಲ್ಲಿ 101 ಜನರಿಗೆ ಸೋಂಕು ತಗುಲಿದೆ.

English summary
Coronavirus update: Karnataka Reports 4537 new COVID19 cases in the last 24 hours. total tally rise to 59632
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X